ತಿರುಪತಿ ಪ್ಯಾಕೇಜ್: ಏನಿದು ನೋಡಿ

ತಿರುಪತಿ ಪ್ಯಾಕೇಜ್: ಏನಿದು ನೋಡಿ

ಇತ್ತೀಚೆಗಷ್ಟೇ ಕೆಎಸ್‌‌ಆರ್‌‌ಟಿಸಿ ಆರಂಭಿಸಿದ್ದ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಪ್ರಯತ್ನ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದೆ. ಜೂನ್ 15 ರಿಂದ ಮತ್ತೊಂದು ಬಸ್ ತಿರುಪತಿ ಪ್ಯಾಕೇಜ್ ಟೂರ್‌‌ಗೆ ಸೇರ್ಪಡೆಯಾಗಲಿದೆ ಎಂದು ಕೆಎಸ್‌‌ಆರ್‌‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Read More

ಶ್ರಾವಣ ಪ್ರಯುಕ್ತ ತಿರುಮಲದಲ್ಲಿ ವಿಶೇಷ ಪೂಜೆ

ಶ್ರಾವಣ ಪ್ರಯುಕ್ತ ತಿರುಮಲದಲ್ಲಿ ವಿಶೇಷ ಪೂಜೆ

ಶ್ರಾವಣ ಮಾಸದ ಪ್ರಯುಕ್ತ ತಿರುಮಲದಲ್ಲಿ ನಿನ್ನೆ ಬೆಳಿಗ್ಗೆ ವಿಶೇಷವಾದ ಪೂಜೆ ಪುನಸ್ಕಾರಗಳು ಜರುಗಿದವು. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣನನ್ನು ಕೂರಿಸಿ ವಿವಿಧ 16 ಸ್ಥಳಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಮಾಡುವ ಮೂಲಕ ಆಚರಿಸಿದರು. ಶ್ರೀ ಮಲಯಪ್ಪ ಸ್ವಾಮಿ ಮತ್ತು ಶ್ರೀ ಕೃಷ್ಣ ಉತ್ಸವದಲ್ಲಿ ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ರಾವ್ ಗೋಕುಲಾಷ್ಟಮಿಯ ಹಬ್ಬ ಆಚರಣೆಯ ದೇಶದ ಆರ್ಥಿಕ ಮತ್ತು ಸಾಮಾಜಿಕ ಹಬ್ಬದ ಸಂಕೇತವಾಗಿದ್ದು ಇದೊಂದು ಭಾರತೀಯರ ಪವಿತ್ರ ಹಬ್ಬವಾಗಿದೆಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಟಿಟಿಡಿಯ ಸಿಬ್ಬಂದಿಯೂ ಕೂಡಾ ಹಾಜರಿದ್ದರು.

Read More

ತಿರಪತಿಯ ಗೋ ಸಂರಕ್ಷಣಾ ಶಾಲೆ ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಾರ್ಪಾಡು

ತಿರಪತಿಯ ಗೋ ಸಂರಕ್ಷಣಾ ಶಾಲೆ ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಾರ್ಪಾಡು

ಗೋ ಸಂರಕ್ಷಣಾ ಶಾಲೆಯನ್ನು ರಾಷ್ಟ್ರೀಯ ಗೋ ಸಂಶೋಧನಾ ಕೇಂದ್ರವನ್ನಾಗಿ ಮಾಡಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ಇಂದು ಶ್ರೀ ವೆಂಕಟೇಶ್ವರ ಗೋ ಸಂಕ್ಷರಣೆ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ 23 ಜಿಲ್ಲೆಗಳಲ್ಲಿ ಇಂದು ಗೋಕುಲಾಷ್ಟಮಿಯನ್ನು ಆಚರಿಸುವ ಮೂಲಕ ಇಂತಹ ಹಬ್ಬಗಳು ಹಸುವಿನ ಮಹತ್ವ, ನಮ್ಮ ದೇಶದ ಧಾರ್ಮಿಕ ಸಾಮಾಜಿಕ-ಆರ್ಥಿಕ ಇತಿಹಾಸವನ್ನು ಬಿಂಬಿಸುತ್ತವೆಂದು ಟಿಟಿಡಿಯ ಈಓ ಈ ಸಂದರ್ಭದಲ್ಲಿ ಹೇಳಿದರು. ಹಳ್ಳಿಕಾರ್, ಕಫಿಲ ಗೋವು, ಹರಿಯಾಣ, ಸಾಹಿವಾಲ್ ಮತ್ತು ರತಿ ಇಂತಹ ಹಲವಾರು ತಳಿಯ ಗೋವುಗಳು ಇಲ್ಲಿದ್ದು ಅವುಗಳನ್ನು ಸಂರಕ್ಷಿಸುವ ಜೊತೆಗೆ 75 ಉನ್ನತ ತಳಿಯ ಗೋವುಗಳು ಇಲ್ಲಿವೆ. ಶ್ರಿ ವೆಂಕಟೇಶ್ವರ ಗೋ ಶಾಲೆಯೂ ಪವಿತ್ರ ಹಸುಗಳನ್ನು ಸಂಕ್ಷಿಸುವ ಕೆಲಸವನ್ನುಮಾಡುತ್ತಿದೆ. ಗೋ ಸಂರಕ್ಷಣಾ ಶಾಲೆಗೆ ಇದುವರೆಗೂ 8.1 ಕೋಟಿ ರೂ ದೇಣಿಗೆಯೂ ಕೂಡಾ ಲಭಿಸಿದೆಂದು ಟಿಟಿಡಿಯ ಸಿಬ್ಬಂದಿ ತಿಳಿಸಿದ್ದಾರೆ. ಗೋವಿನ…

Read More

ಶ್ರೀವಾರಿ ದೇವಾಲಯಕ್ಕೆ ಟಿಟಿಡಿಯಿಂದ ಸಹಾಯ

ಶ್ರೀವಾರಿ ದೇವಾಲಯಕ್ಕೆ ಟಿಟಿಡಿಯಿಂದ ಸಹಾಯ

ಶ್ರೀಲಂಕಾದ ಕತ್ರಾದಲ್ಲಿ ನಿರ್ಮಿಸುತ್ತಿರುವ ಶ್ರೀವಾರಿ ದೇವಾಲಯಕ್ಕೆ ತಾಂತ್ರಿಕವಾಗಿ ಎಲ್ಲ ರೀತಿಯ ಸಹಾಯವನ್ನು ಮಾಡುವುದಾಗಿ ಟಿಟಿಡಿಯ ಕಾರ್ಯದರ್ಶಿ ಡಾ.ಚಂದಲವಾಡ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಜರುಗಿದ  ಶ್ರೀ ಸುಬ್ರಮ್ಯಣಂಶ್ವೇರ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಟಿಟಿಡಿಯ ಕಾರ್ಯದರ್ಶಿ ಶ್ರೀ ಸುಬ್ರಮ್ಯಣಂಶ್ವೇರ ದೇವಸ್ಥಾನದ ಕಾರ್ಯದರ್ಶಿ ಭೇಟಿಯಾಗಿ ಪರಸ್ಪರ ಮಾತನಾಡಿದರು. ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ವೆಂಕಟೇಶ್ವರ ದೇವಲಾಯಕ್ಕೆ ತಾಂತ್ರಿಕವಾಗಿ ಸಹಾಯ ಮತ್ತು ಪೊತ್ಸಾಹ ಮಾಡಬೇಕೆಂದು ಶ್ರೀ ಸುಬ್ರಮ್ಯಣಂಶ್ವೇರ ದೇವಸ್ಥಾನದ ಕಾರ್ಯದರ್ಶಿ ಡಾ. ಡಿ.ಜೆ.ಕುಮಾರ್ ಟಿಟಿಡಿಯ ಕಾರ್ಯದರ್ಶಿಗಳಿಗೆ ವಿನಂತಿ ಮಾಡಿದರು. ಅದಕ್ಕೆ ಡಾ.ಚಂದಲವಾಡ್ ಸಮ್ಮತಿ ಸೂಚಿಸಿದರು.

Read More

ವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ

ವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ

ಟಿಟಿಡಿ, ವಿಜಯವಾಡದಲ್ಲಿ ನಿರ್ಮಿಸಿರುವ, ತಿರುಪತಿಯನ್ನೇ ಹೋಲುವ ವೆಂಕಟೇಶ್ವರ ದೇವಾಲಯಕ್ಕೆ ಇಂದು ಗಣ್ಯರು ಭೇಟಿ ಕೊಟ್ಟಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮತ್ತು ಕುಟುಂಬ, ದೇವಾಲಯಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಆಂಧ್ರದ ಕೃಷಿ ಸಚಿವ ಪುಲ್ಲಾ ರಾವ್, ಈ ಸಂದರ್ಭದಲ್ಲಿದ್ದರು. ಇದೇ ವೇಳೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎನ್.ವಿ.ರಮಣ ಅವರು ಕೂಡಾ, ದೇವಾಲಯಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ, ಟಿಟಿಡಿ ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ರಾಜು,  ಸುಧಾಕರ್ ರಾವ್, ರಾಜೇಂದ್ರುಡು ಉಪಸ್ಥಿತರಿದ್ದರು.

Read More

ಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ

ಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ

ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್…

Read More

ತಿರುಪತಿ : ದೇವಾಲಯದ ಮುಂಭಾಗವೇ ವೆಂಕಣ್ಣ ಡಾಲರ್ ಕೌಂಟರ್

ತಿರುಪತಿ : ದೇವಾಲಯದ ಮುಂಭಾಗವೇ ವೆಂಕಣ್ಣ ಡಾಲರ್ ಕೌಂಟರ್

ತಿರುಪತಿ ತಿಮ್ಮಪ್ಪನ ಹಚ್ಚೆ ಇರುವ ವೆಂಕಣ್ಣ ಡಾಲರ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗೇ, ಈ ವಿಷಯದಲ್ಲಿ ಭಕ್ತರನ್ನ ಮೋಸ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ, ಖುದ್ದು ಟಿಟಿಡಿ, ಈ ಬಗ್ಗೆ ವಿಶೇಷ ಗಮನ ಕೊಟ್ಟಿದೆ. ತಿಮ್ಮಪ್ಪನ ಹಚ್ಚೆ ಇರುವ ಚಿನ್ನದ, ಬೆಳ್ಳಿ ಹಾಗೂ ಕಂಚಿನ ನಾಣ್ಯಗಳ ಮಾರಾಟವನ್ನು ದೇವಾಲಯದ ಎದುರಿಗೆ ಇರುವ ಬ್ಯಾಂಕ್ ಕೌಂಟರ್ ನಲ್ಲೇ  ತೆರೆಯುವಂತೆ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಭಕ್ತರು ಮೋಸ ಹೋಗುವುದು ತಪ್ಪುತ್ತದೆ ಎಂದಿದ್ದಾರೆ. ಜೊತೆಗೆ, ಭಕ್ತರಿಗೆ ಮಾಹಿತಿ ಒದಗಿಸಲು, ಅಲ್ಲಲ್ಲಿ, ಸ್ವಯಂಸೇವಕರನ್ನ ಬಳಸಿಕೊಳ್ಳುವಂತೆಯೂ, ಸಾಂಬಶಿವರಾವ್ ಸೂಚಿಸಿದ್ದಾರೆ.  

Read More

ತಿಮ್ಮಪ್ಪನ ಭಕ್ತರಿಗೆ ಬಿಸಿಲ ಝಳ ತಟ್ಟದಿರಲು ತಣ್ಣೀರ ಸಿಂಪಡಿಕೆ

ತಿಮ್ಮಪ್ಪನ ಭಕ್ತರಿಗೆ ಬಿಸಿಲ ಝಳ ತಟ್ಟದಿರಲು ತಣ್ಣೀರ ಸಿಂಪಡಿಕೆ

ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಗಂಟೆ ಗಟ್ಟಲೇ ನಿಲ್ಲುವ ಭಕ್ತರು ದಣಿಯದಂತೆ, ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿದೆ. ಧರ್ಮ ದರ್ಶನವೂ ಸೇರಿದಂತೇ, ಇತರೇ ಕೌಂಟರ್ ಗಳ ಬಳಿ, ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಸಿಲ ಝಲ ಹೆಚ್ಚಾದಂತೆ, ಭಕ್ತರು ದಣಿಯುವ ಸಾಧ್ಯತೆ ಇರುತ್ತದೆ. ಇಂತಹ ಕಡೆಗಳಲ್ಲಿ, ಬಹುಬೇಗನೇ ಬೆಳೆಯುವ ಸಸಿಗಳನ್ನ ನೆಡಲೂ, ಅರಣ್ಯಾಧಿಕಾರಿಗಳಿಗೆ ಸಾಂಬಶಿವರಾವ್ ಸೂಚಿಸಿದ್ದಾರೆ. ಜೊತೆಗೆ, ಭಕ್ತರ ಮೇಲೆ ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲೂ, ತೋಟಗಾರಿಕೆ ಇಲಾಖೆಗೆ ಸೂಚಿಸಿದ್ದಾರೆ. 300 ರೂಪಾಯಿಯ ದರ್ಶನಕ್ಕೆ ತೆರಳುವ ಭಕ್ತರ ಹಣೆಗೆ ಉಚಿತವಾಗಿ, ನಾಮ ಹಾಕುವ ವ್ಯವಸ್ಥೆ ಮಾಡುವಂತೆಯೂ, ಸಾಂಬಶಿವರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Read More

ತಿರುಪತಿ ಭೇಟಿ ಅನುಭವ : ಭಕ್ತರ ಮನದಿಂಗಿತ ತಿಳಿಯಲಿರುವ ಟಿಟಿಡಿ

ತಿರುಪತಿ ಭೇಟಿ ಅನುಭವ : ಭಕ್ತರ ಮನದಿಂಗಿತ ತಿಳಿಯಲಿರುವ ಟಿಟಿಡಿ

ತಿರುಪತಿಗೆ ಭೇಟಿ ಕೊಡುವ ಭಕ್ತರ ಮನದಿಂಗಿತ ಅರಿಯಲು ಟಿಟಿಡಿ ಮುಂದಾಗಿದೆ. ತಿರುಪತಿಗೆ ದೇಶ, ವಿದೇಶಗಳಿಂದ ಬರುವ ಭಕ್ತರನ್ನ ಸಂದರ್ಶಿಸಿ, ತಿರುಪತಿ ಭೇಟಿ ವೇಳೆ ಅವರಿಗಾದ ಅನುಭವ ಹಾಗೂ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ನೇರವಾಗಿ ಭಕ್ತರಿಂದಲೇ ಅಭಿಪ್ರಾಯ ಸಂಗ್ರಹಿಸಲೂ ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಿದೆ. ತಿರುಪತಿಯ ಅನ್ನಮಯ್ಯ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ. ಸಾಂಬಶಿವರಾವ್, ಈ ವಿಷಯ ತಿಳಿಸಿದ್ದಾರೆ.. ತಿರುಪತಿಗೆ ಭೇಟಿ ಕೊಡುವ ಹೆಚ್ಚಿನ ಭಕ್ತರು ದಕ್ಷಿಣ ಭಾರತೀಯರೇ ಆಗಿರುತ್ತಾರೆ. ದಿನವೊಂದಕ್ಕೆ, ಒಂದು ಲಕ್ಷ ಭಕ್ತರು, ತಿರುಪತಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ವಸತಿ, ಸಾರಿಗೆ ವ್ಯವಸ್ಥೆ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಕೌಂಟರ್ ವ್ಯವಸ್ಥೆ, ಪ್ರಸಾದ ವ್ಯವಸ್ಥೆ, ಹೀಗೇ ಎಲ್ಲದರ ಬಗ್ಗೆಯೂ ಐಐಟಿ ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ಆ ಬಳಿಕ,…

Read More

ತಿರುಪತಿ : ಶ್ರಾವಣ ಪವಿತ್ರ್ಯೋತ್ಸವದಲ್ಲಿ ಸಾವಿರಾರು ಭಕ್ತರು

ತಿರುಪತಿ : ಶ್ರಾವಣ ಪವಿತ್ರ್ಯೋತ್ಸವದಲ್ಲಿ ಸಾವಿರಾರು ಭಕ್ತರು

ತಿರುಪತಿಯಲ್ಲಿ ಶ್ರಾವಣ ಮಾಸದ ಪವಿತ್ರ್ಯೋತ್ಸವವ ಇಂದು ಅಂತ್ಯಗೊಂಡಿತು. ಮಂಗಳವಾರ ಬೆಳಿಗ್ಗೆ, 9ರಿಂದ 11 ಗಂಟೆಯವರೆಗೂ, ವಿವಿಧ ಪೂಜೆ ಪುನಸ್ಕಾರ ನಡೆಯಿತು. ಶ್ರೀನಿವಾಸ ಉತ್ಸವ ಮೂರ್ತಿಗೆ, ಮೊಸರು, ಜೇನು, ಎಳನೀರು, ಹಳದಿ ಲೇಪನ ಹಾಗೂ ಶ್ರೀಗಂಧದ ಅಭಿಷೇಕ ನೆರವೇರಿತು. ಸಾವಿರಾರು ಭಕ್ತಾಧಿಗಳು ಮುಂಜಾನೆಯಿಂದಲೇ ನಡೆದ ಹೋಮ, ಹವನದಲ್ಲಿ ಪಾಲ್ಗೊಂಡಿದ್ದರು. ಟಿಟಿಡಿಯ ಅಧಿಕಾರಿ ಹಾಗೂ ಸಿಬ್ಬಂದಿ ಕೂಡಾ ಪವಿತ್ರ್ಯೋತ್ಸವದಲ್ಲಿ ಭಾಗವಹಿಸಿದ್ದರು.

Read More