ದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ

ದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ

ತಿರುಮಲ: ದೇಶದಲ್ಲಿಯೇ ಪ್ರಥಮ ಬಾರಿಗೆ ತಿರುಮಲದಲ್ಲಿ ಲಂಬವಾದ ಮುರಾಲ್ ಉದ್ಯಾನವನ ನಿರ್ಮಾಣ ಮಾಡಲು ಟಿಟಿಡಿ ತಿರ್ಮಾನ ಕೈಗೊಂಡಿದೆ. ತಿರುಮಲ ದೇವಸ್ಥಾನ ಬಳಿ ಲಂಬ್ ಮುರಾಲ್ ಉದ್ಯಾನವನ ನಿರ್ಮಾಣ. ನವೀನ ಪರಿಕಲ್ಪನೆ ಆಫ್ ಶಿಬಿರಗಳನ್ನು ನಡೆಸಲು ಅನುಕೂಲಕರವಾಗುತ್ತದೆ ಎಂದು ಟಿಟಿಡಿ ಇಒ ಡಾ ಡಿ ಸಾಂಬಶಿವ ರಾವ್ ತಿಳಿಸಿದ್ದಾರೆ. ಈ ಪರಿಕಲ್ಪನಾ ತೋಟಗಳಿಗೆ ಸಂಬಂಧಿಸಿದಂತೆ, ಗಾರ್ಡನ್ ಉಪನಿರ್ದೇಶಕರು ಶ್ರೀ ಶ್ರೀನಿವಾಸಲು ಜೊತೆಗೆ ಟಿಟಿಡಿ ಇ.ಒ ಶುಕ್ರವಾರ ತಿರುಮಲದಲ್ಲಿ ಸೈಟ್ ಪರಿಶೀಲಿಸಿದರು. ಏತನ್ಮಧ್ಯೆ ವರ್ಣರಂಜಿತ ಎಲೆಗಳು ಮತ್ತು ಶ್ರೀವಾರು, ಶಂಖ, ಚಕ್ರ ಮತ್ತು ಆನಂದ ನಿಲಯಂ ಸೇರಿದಂತೆ ಆಧ್ಯಾತ್ಮಿಕ ಪರಿಕಲ್ಪನೆಗಳು ಹೂಗಳು ಒಳಗೊಂಡ ಈ ಅನನ್ಯ ತೋಟಗಳು ತಯಾರಾಗುತ್ತವೆ. ಲೇಪಾಕ್ಷಿ ಮತ್ತು ಫಿಲ್ಟರ್ ಅಪ್ ಶಿಬಿರಗಳು ಮತ್ತು ವಾರ್ಷಿಕ ಬ್ರಹ್ಮೋತ್ಸವ ವಿಶೇಷ ಆಕರ್ಷಣೆಯಾಗಿದೆ. ಮುರಾಲ್ ಉದ್ಯಾನವನ ಈ ತಿಂಗಳ ಕೊನೆಯಲ್ಲಿ ತಯಾರಾಗಬೇಕು. ಬೆಂಗಳೂರು ಮೂಲದ ವಿನ್ಯಾಸ ತಜ್ಞ ದಾನಿ ಶ್ರೀ…

Read More

‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು

‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು

64 ವರ್ಷಗಳ ಇತಿಹಾಸ ಹೊಂದಿರುವ ಟಿಟಿಡಿಯ ಶ್ರಿ ಪದ್ಮಾವತಿ ಮಹಿಳಾ ಪದವಿ ಮತ್ತು ಸಾತ್ನಕೋತ್ತರ ಕಾಲೇಜ ದಾಖಲೆಯೊಂದನ್ನು ನಿರ್ಮಿಸಿದೆ. ಕಾಲೇಜಿನಲ್ಲಿ ಸತತ 12 ಗಂಟೆಗಳ ಕಾಲ “ಶ್ರೀ ವೈಷ್ಣವ ಭಕ್ತಿ ತತ್ವಂ” ವಿಷಯದ ಕುರಿತಾದ ವಿಷಯ ಮಂಡನೆಯನ್ನು ಆಯೋಜಿಸಲಾಗಿತ್ತು. ಇಂತಹದೊಂದು ಸಾಧನೆಯೂ ಈಗ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಬುಧವಾರಂದು ದಾಖಲಾಗಿದೆಂದು ಕಾಲೇಜಿನ ಅಧಿಕಾರಿ ವರ್ಗದವರೂ ತಿಳಿಸಿದರು. ವಿವಿಧ ವಿಭಾಗಳಿಂದ ಬಂದತ್ತ ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು. ಅದರಲ್ಲಿ ಬಹುಮುಖ್ಯವಾಗಿ ಆಯ್ದುಕೊಂಡ ವಿಷಯಗಳಲ್ಲಿ ರಾಮಾಯಣ, ಭಾರತಂ, ಭಾಗವತಮ್, ರಾಮಾನುಜಾಚಾರ್ಯರು, ಅನ್ನಮಾಚಾರ್ಯರು ಇವುಗಳೇ ಆಗಿದ್ದವು. ಕಾಲೇಜಿನ ಸಿಬ್ಬಂದಿ 200 ಜನರ ಜೊತೆಗೆ ಸಂಶೋಧಕ ವಿದ್ಯಾರ್ಥಿಗಳನ್ನು ಹೊರತುಪಡಿಸಿ 550 ಜನ ಮಹಿಳೆಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ದಾಖಲೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದಲ್ಲದೆ, ಜನರಲ್ಲಿ ಆಧ್ಯಾತ್ಮಿಕ ಜಾನ್ಞವನ್ನು ಬಿತ್ತುವ ಕೆಲಸವನ್ನು ಟಿಟಿಡಿಯ ಮಹಿಳಾ…

Read More

ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ

ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ

ಹರಿಕಥಾ ಪಿತಾಮಹ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣ ದಾಸು ಅವರು ಅಪರೂಪದ 180 ದಾಸವಿಧ ರಂಗ ನವತಿ ಕಸುಮ ಮಂಜರಿ ರಾಗಗಳನ್ನು ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಕಾಣಿಕೆ ಕೊಟ್ಟಿದ್ದಾರೆ. ಇವರ ಕುರಿತಾದ ಇಂತಹದೊಂದು ಸಂಗೀತದ ಕಾರ್ಯಕ್ರವು 84 ವರ್ಷಗಳ ನಂತರ ಮಹತಿ ಸಭಾಂಗಣದಲ್ಲಿ ಬುಧವಾರ ಸಾಯಂಕಾಲ ಜರುಗಿತು. ಹರಿಕಥಾ ವಿದ್ವಾಂಸ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮದಿನ ಅಂಗವಾಗಿ ಎಸ್. ವ್ಹಿ ಸಂಗೀತ ಮತ್ತು ನೃತ್ಯ ಕಾಲೇಜು ವತಿಯಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಮಹಾರಾಣಿ ಕಾಲೇಜಿನ 9 ಜನರ ತಂಡ ಮತ್ತು ಶ್ರೀವ್ ಕಾಂತಮ್ ನಾಗೇಂದ್ರ ಶಾಸ್ತ್ರಿ ಅವರ ನೇತ್ವತೃದಲ್ಲಿ 90 ದಾಸವಿಧ ರಂಗ ನವತಿ ಕಸುವ ಮಂಜರಿಯ ಒಳಗೊಂಡಿರುವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ರಾಗಮಾಲಿಕೆ 90 ರಾಗಗಳನ್ನು ಕಲಾವಿದರು ತಮ್ಮ ಮುಖದ ಅಭಿವ್ಯಕ್ತಿಯ್ನು ಮತ್ತು ನೃತ್ಯದ ಮೂಲಕ ಪ್ರದರ್ಶಿಸಿ…

Read More

ಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ

ಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ

ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್…

Read More

ಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…

ಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…

  ದಿವ್ಯಾ ದೊಮ್ಮರಾಜು. 14 ವರ್ಷದ ಈಕೆ, ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕಾದಲ್ಲೇ. ಟೆನ್ನಿಸ್ ನಲ್ಲಿ ಇಂಟರ್ ಸ್ಕೂಲ್ ಚಾಂಪಿಯನ್. ಪೇಂಟಿಂಗ್ ನಲ್ಲೂ ದಿವ್ಯಾ, ಒಳ್ಳೇ ಹೆಸರು ಮಾಡಿದ್ದಾಳೆ. ಮುಂದಿನ ತಿಂಗಳು, ದಿವ್ಯಾ ಹತ್ತನೇ ತರಗತಿಗೆ ಎಂಟ್ರಿ ಪಡೆಯುತ್ತಾಳೆ. ಆದ್ರೆ, ದಿವ್ಯಾಗೆ ನಿತ್ಯವೂ ಏನೋ ಕೊರಗು. ತಮ್ಮ ಹುಟ್ಟೂರಿನ ಬಗ್ಗೆ, ಪ್ರತಿದಿನವೂ ಕನಸು, ಅದೇ ಕನವರಿಕೆ. ದಿವ್ಯಾಳ ತಂದೆ ಉದಯ್ ದೊಮ್ಮರಾಜು, ಎಸ್.ವಿ.ಯು ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಬಹಳ ವರ್ಷಗಳ ಹಿಂದೆಯೇ ಅಮೆರಿಕಾಗೆ ಹೋಗಿ ನೆಲೆಸಿದ್ದಾರೆ. ಅಮೆರಿಕಾಗೆ ಹೋದರೂ, ಹುಟ್ಟೂರು ತಿರುಪತಿಯ ನಂಟು ಬಿಟ್ಟಿಲ್ಲ. ಅಮೆರಿಕಾದ ಸಂಸ್ಕೃತಿಯ ನಡುವೆಯೇ ಬೆಳೆದರೂ, ದಿವ್ಯಾಗೆ ಭಾರತೀಯ ಪರಂಪರೆ, ಸಂಪ್ರದಾಯದ ಬಗ್ಗೆ ಅಪಾರ ಗೌರವ. ಹೀಗಾಗೇ, ಅಮೆರಿಕಾದಲ್ಲೇ ಭರತನಾಟ್ಯಂ ಕಲಿತಿದ್ದಾಳೆ. ಅದೆಷ್ಟೇ ಕಷ್ಟವಾದರೂ ಸರಿಯೇ. ತನ್ನ ಭರತನಾಟ್ಯಂ ರಂಗಪ್ರವೇಶ, ತಿರುಪತಿಯಲ್ಲೇ, ಅದೂ ತಿಮ್ಮಪ್ಪನ ಪಾದಾರವಿಂದಗಳಲ್ಲೇ ಆಗಬೇಕು ಎಂಬುದು ದಿವ್ಯಾಳ ಕನಸು. ಮಗಳ…

Read More

ತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?

ತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?

ಟಿಟಿಡಿ, ಬ್ಯಾಂಕ್ ಗಳಲ್ಲಿ ಮತ್ತಷ್ಟು ಚಿನ್ನ ಠೇವಣಿ ಹೂಡಿಕೆಗೆ, ಮುಂದಾಗಿದೆ. ಸದ್ಯಕ್ಕೆ ಒಂದು ಸಾವಿರ ಕೆ.ಜಿ. ಚಿನ್ನವನ್ನ ಠೇವಣಿಯಾಗಿಡಲು ಟಿಟಿಡಿ ಸಿದ್ದವಾಗಿದೆ. ಆದ್ರೆ, ಬ್ಯಾಂಕ್ ಗಳೇ ಮುಂದೆ ಬರುತ್ತಿಲ್ಲ. ಟಿಟಿಡಿಯ ಠೇವಣಿ ಇಟ್ಟ ಚಿನ್ನಕ್ಕೆ, ಅದರ ಬೇಡಿಕೆಯಂತೆಯೇ, ಬಡ್ಡಿ ನೀಡಬೇಕಿದೆ. ಇದು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತಿಲ್ಲ. ಈಗ ಮತ್ತೆ ಒಂದು ಸಾವಿರ ಕೆ.ಜಿ.ಚಿನ್ನದ ಠೇವಣಿ ಇಡಲು ಟಿಟಿಡಿ ಮುಂದಾಗಿದೆಯಾದ್ರೂ, ಬ್ಯಾಂಕ್ ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಹಿರಿಯ ಅಧಿಕಾರಿಗಳು, ಬ್ಯಾಂಕ್ ಗಳ ಉನ್ನತಾಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಅವರಿಂದ, ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ಇನ್ನೆರಡು ತಿಂಗಳಿನಲ್ಲಿ, ಟಿಟಿಡಿ ಅಕೌಂಟ್ ಗೆ ಮತ್ತೆ 400 ( ನಾಲ್ಕು ನೂರು ) ಕೆ.ಜಿ. ಚಿನ್ನ ಸಂಗ್ರಹವಾಗಲಿದೆ. ಈಗ, ಇಷ್ಟೊಂದು ಅಪಾರ ಪ್ರಮಾಣದ ಚಿನ್ನವನ್ನ ಠೇವಣಿ ಇಡುವುದೇ, ಟಿಟಿಡಿಗೆ ಪ್ರಯಾಸದ…

Read More

ತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್

ತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್

ಇನ್ನು, ಕೆಲವೇ ಕೆಲವು ದಿನಗಳಷ್ಟೇ. ತಿರುಪತಿಯ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯಲಿವೆ. ದುಬೈನಿಂದ ತಿರುಪತಿ, ತಿರುಪತಿಯಿಂದ ದುಬೈ ಹಾಗೂ ಯೂರೋಪ್ ರಾಷ್ಟ್ರಗಳಿಗೆ ನೇರ ವಿಮಾನಯಾನ ಏರ್ಪಡಲಿದೆ. ಜೊತೆಗೆ, ಅಮೆರಿಕಾದಿಂದಲೂ ತಿರುಪತಿಗೆ ನೇರ ವಿಮಾನ ಹಾರಾಟಕ್ಕೂ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.  ಕೇಂದ್ರ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ, ತಿರುಪತಿ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್, ಇಮಿಗ್ರಷನ್ ವಿಭಾಗ ಸೇರಿದಂತೆ, ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ನೇಮಕ ಹಾಗೂ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿರಬೇಕಾದ ಸವಲತ್ತುಗಳನ್ನ ಒದಗಿಸಿದ ಬಳಿಕ, ವಿದೇಶೀ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ.   

Read More

ತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ  

ತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ  

ಸತತ ನಾಲ್ಕು ದಿನ ರಜೆ. ನಿನ್ನೆ ಶುಕ್ರವಾರದಿಂದಲೇ, ತಿರುಪತಿಗೆ ಭಕ್ತ ಸಾಗರ ಹರಿದು ಬರುತ್ತಿದೆ. ನಿನ್ನೆ, ಶುಕ್ರವಾರ, ವರ ಮಹಾಲಕ್ಷ್ಮಿ ವ್ರತ. ತಿರುಚನೂರ್ ನ ಪದ್ಮಾವತಿ ಅಮ್ಮ ಸನ್ನಿಧಿಗೆ ಅಪಾರ ಭಕ್ತಸ್ತೋಮ ಆಗಮಿಸಿತ್ತು. ಇಂದೂ ಕೂಡಾ, ಭಕ್ತರ ಸಂಖ್ಯೆ ಬಹಳ. ಇಂದು ಶನಿವಾರವಾದ್ದರಿಂದ, ಸಹಜವಾಗೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ. ಅದಲ್ಲದೇ, ಇಂದೂ ಕೂಡಾ ಸರ್ಕಾರಿ ರಜೆ. ನಾಳೆ ಭಾನುವಾರ, ನಾಳಿದ್ದು ಸೋಮವಾರ ಸ್ವಾತಂತ್ರ್ಯೋತ್ಸವ. ಹೀಗಾಗಿ, ತಿರುಪತಿಗೆ ಭೇಟಿ ಕೊಡುವವರ ಭಕ್ತರ ಸಂಖ್ಯೆ ದಿನಕ್ಕೆ ಒಂದೂವರೆ ಲಕ್ಷ ದಾಟಿದೆ. ಮೊದಲೇ ನಿರ್ಧರಿಸಿದಂತೆ, ತಿರುಪತಿಯಲ್ಲಿ, ಟಿಟಿಡಿ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗೆ, ವಸತಿ ತೊಂದರೆ ಆಗದಂತೆ ನಿಗಾ ವಹಿಸಿದೆ. ತಿಮ್ಮಪ್ಪನ ದರ್ಶನ ಪಡೆದ ಭಕ್ತರು, ಅಂದಿನ ದಿನವೇ, ವಸತಿ ಖಾಲಿ ಮಾಡಿ, ಇತರೇ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ಟಿಟಿಡಿ ಮನವಿಗೆ, ಭಕ್ತಸ್ತೋಮ ಸ್ಪಂದಿಸಿದೆ. ಜೊತೆಗೆ, ತಿರುಪತಿ ಹಾಗೂ ತಿರುಮಲದಲ್ಲಿ ಆರೋಗ್ಯ…

Read More

ಬಾಲಾಜಿ ಸೇವೆ : ಕಾಂಚಿಪುರಂ ಅರಸರಿಂದ ಕೃಷ್ಣದೇವರಾಯನವರೆಗೂ …

ಬಾಲಾಜಿ ಸೇವೆ : ಕಾಂಚಿಪುರಂ ಅರಸರಿಂದ ಕೃಷ್ಣದೇವರಾಯನವರೆಗೂ …

ತಿರುಪತಿ ತಿಮ್ಮಪ್ಪನಿಗೆ ನಡೆದುಕೊಂಡ ರಾಜ ಸಂಸ್ಥಾನಗಳು ಅಪಾರ. ಹಲವು ರಾಜ, ಮಹಾರಾಜರು, ಶ್ರೀನಿವಾಸನ ಸೇವೆಗೆ ತಮ್ಮನ್ನ ಸಮರ್ಪಿಸಿಕೊಂಡಿದ್ದಾರೆ. 9ನೇ ಶತಮಾನದಲ್ಲಿ ಕಾಂಚಿಪುರ ಅರಸರು, ತಿರುಪತಿ ತಿಮ್ಮಪ್ಪನ ಸೇವೆ ಮಾಡಿದ್ದಾರೆ. ತಿಮ್ಮಪ್ಪನಿಗೆ ಕಾಂಚಿಪುರಂ ಸಂಸ್ಥಾನ, ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡಿದೆ. ಇದಾದ ಬಳಿಕ, 10ನೇ ಶತಮಾನದಲ್ಲಿ, ಚೋಳ ರಾಜರು, ಶ್ರೀ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಇದೇ ವೇಳೆ, ತಂಜಾವೂರು ಸಂಸ್ಥಾನದ ಒಡೆಯರೂ, ವೆಂಕಟೇಶ್ವರನ ಸೇವೆ ಮಾಡಿದ್ದಾರೆ. ಆದ್ರೆ, ತಿರುಪತಿ, ಬಹಳ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದು 15ನೇ ಶತಮಾನದಲ್ಲಿ. ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ಕಾಲದಲ್ಲಿ. ಶ್ರೀಕೃಷ್ಣದೇವರಾಯ, ತಿಮ್ಮಪ್ಪನಿಗಾಗಿ, ತನ್ನನ್ನೇ ಮುಡಿಪಾಗಿಟ್ಟ ದೊರೆ. ಕಾಲ ಕಾಲಕ್ಕೆ, ತಿರುಪತಿಗೆ ಧನ, ಕನಕಾಧಿಗಳನ್ನ ಯತೇಚ್ಛವಾಗಿ ದಾನ ನೀಡಿದ ದೊರೆ ಶ್ರೀಕೃಷ್ಣದೇವರಾಯ. ವಜ್ರ, ವೈಢೂರ್ಯ, ಚಿನ್ನಾಭರಣಗಳನ್ನ ತಿಮ್ಮಪ್ಪನ ಪಾದಾರವಿಂದಗಳಿಗೆ ಸಮರ್ಪಿಸಿದ. ಕೃಷ್ಣದೇವರಾಯನ ಕಾಲದಲ್ಲೇ, ತಿರುಪತಿಯ ಹೆಸರು, ಜಗಜ್ಜಾಹೀರಾಯ್ತು. ತಿರುಪತಿ ತಿಮ್ಮಪ್ಪನ ದೇವಾಲಯದ ಸ್ವರ್ಣಗೋಪುರ ನಿರ್ಮಾಣವಾದದ್ದೂ, ಕೃಷ್ಭದೇವರಾಯ ಸಮರ್ಪಿಸಿದ…

Read More

ತಿರುಪತಿ ತಿಮ್ಮಪ್ಪನ ಜನ್ಮ ಚರಿತ್ರೆ ಇಲ್ಲಿದೆ

ತಿರುಪತಿ ತಿಮ್ಮಪ್ಪನ ಜನ್ಮ ಚರಿತ್ರೆ ಇಲ್ಲಿದೆ

ನಮ್ಮ  ನಕ್ಷತ್ರಮಂಡಲವು, ವಿಷ್ಣು ಚಕ್ರದ ಆಕಾರದಲ್ಲಿದೆ. ಈ ಚಕ್ರಾಕಾರದ ಒಂದು ಅಂಚಿನಲ್ಲಿ ಇರುವುದೇ ಸೂರ್ಯ ಮಂಡಲ. ಸೂರ್ಯನಂತಹ, ಕೋಟ್ಯಂತರ ನಕ್ಷತ್ರಗಳು ಸೌರ ಮಂಡಲದಲ್ಲಿವೆ. ಇದನ್ನೇ ನಕ್ಷತ್ರಪುಂಜ ಅಥವಾ ನಕ್ಷತ್ರ ಮಂಡಲ ಎಂದು ಕರೆಯಲಾಗುತ್ತದೆ. ಇವುಗಳ ಮಧ್ಯೆ ಇರುವ ಮಕರ ರಾಶಿಯ ಶ್ರವಣ ನಕ್ಷತ್ರದಿಂದಲೇ ಶ್ರೀ ಮಹಾವಿಷ್ಣು ಭುವಿಗಿಳಿದು ಬಂದ ಎಂಬುದು ಪುರಾಣ ಐತಿಹ್ಯ. ಹೀಗಾಗಿ, ಶ್ರೀನಿವಾಸನ ಜನ್ಮ ನಕ್ಷತ್ರವನ್ನ ಶ್ರವಣ ನಕ್ಷತ್ರ ಎಂದು ಕರೆಯಲಾಗುತ್ತದೆ. ಈ ದಿವ್ಯ ವಿಮಾನದ ಪ್ರತಿರೂಪವೇ ಇಂದಿನ ಆನಂದ ನಿಲಯ ವಿಮಾನ. ಆ ದಿವ್ಯ ವಿಮಾನ, ಇಂದಿಗೂ, ಮಾನವನಿಗೆ ಅದೃಶ್ಯವಾಗಿ, ನಾರಾಯಣಗಿರಿಯಲ್ಲಿ ನಿಕ್ಷಿಪ್ತವಾಗಿ ಇದೆ ಎಂದು ಪುರಾಣಗಳ ಮೂಲಕ ತಿಳಿದು ಬರುತ್ತದೆ. ಶ್ರೀವೆಂಕಟೇಶ್ವರ ಸ್ವಾಮಿಯ ದಿವ್ಯಮಂಗಳ ಸಾಲಿಗ್ರಾಮ ಶಿಲಾ ಸ್ವರೂಪ, ಸುಮಾರು ಒಂಬತ್ತೂವರೆ ಅಡಿ ಎತ್ತರವಿದೆ. ಶುಕ್ರವಾರ ನಡೆಯುವ ಅಭಿಷೇಕದ ಸೇವೆಯಲ್ಲಿ, ಸ್ವಾಮಿಯ ದಿವ್ಯಮಂಗಳ ಸ್ವರೂಪದ ದರ್ಶನ ಪಡೆಯಬಹುದು. ಶ್ರೀನಿವಾಸ ಎಂಬ ನಾಮದ…

Read More