ನಿಜರೂಪ ದರ್ಶನಕ್ಕೆ ಲಕ್ಷ್ಮೀದೇವಿ ಬರುತ್ತಾಳೆ ಗೊತ್ತಾ…!

ನಿಜರೂಪ ದರ್ಶನಕ್ಕೆ ಲಕ್ಷ್ಮೀದೇವಿ ಬರುತ್ತಾಳೆ ಗೊತ್ತಾ…!

ಲಕ್ಷ್ಮೀದೇವಿ, ಸದಾ ಪರಮಾತ್ಮನ ಹೃದಯ ಕಮಲದಲ್ಲೇ ಇರುತ್ತಾಳೆ. ಶ್ರೀನಿವಾಸನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳೆ. ತಿರುಪತಿ ತಿಮ್ಮಪ್ಪನ ವ್ರಕ್ಷಸ್ಥಳವನ್ನ ಸದಾ ಶ್ರೀಗಂಧದಿಂದ ಲೇಪಿಸಿರಲಾಗುತ್ತದೆ. ಪ್ರತೀ ಗುರುವಾರ, ಮುಂಜಾನೆ ಸುಪ್ರಭಾತ ಸೇವೆಗೂ ಮುನ್ನ, ನಿಜರೂಪ ದರ್ಶನದ ವೇಳೆ, ಶ್ರೀನಿವಾಸನ ವ್ರಕ್ಷಸ್ಥಳದ ಮೇಲಿನ ಶ್ರೀಗಂಧದ ಲೇಪನವನ್ನ ತೆಗೆಯಲಾಗುತ್ತದೆ. ಆಗ, ಆ ಶ್ರೀಗಂಧದಲ್ಲಿ, ಲಕ್ಷ್ಮೀದೇವಿ ಅಚ್ಚೊತ್ತಿರುತ್ತದೆ. ಸದಾ ವೆಂಕಟೇಶ್ವರನ ಎದೆಯ ಮೇಲೇ ಇರುವ ಲಕ್ಷ್ಮೀದೇವಿ, ಶ್ರೀಗಂಧದಲ್ಲಿ ಒಡ ಮೂಡಿರುತ್ತಾಳೆ. ಪ್ರತೀ ಗುರುವಾರವೂ, ಲಕ್ಷ್ಮೀದೇವಿ ಅಚ್ಚೊತ್ತಿರುವ ಶ್ರೀಗಂಧವನ್ನು ಮಾರಾಟ ಮಾಡಲಾಗುತ್ತದೆ. ಇದನ್ನ ಕೊಳ್ಳಲು ಬಹಳ ಪೈಪೋಟಿಯೇ ಇರುತ್ತದೆ.    

Read More

ತಿಮ್ಮಪ್ಪನ ಗಲ್ಲದಲ್ಲಿ ಗಾಯದ ಗುರುತಿದೆ ಬಲ್ಲಿರಾ… ! ?

ತಿಮ್ಮಪ್ಪನ ಗಲ್ಲದಲ್ಲಿ ಗಾಯದ ಗುರುತಿದೆ ಬಲ್ಲಿರಾ… ! ?

ಏನು, ಪರಮಾತ್ಮನಿಗೂ ಗಾಯವಾ…? ಆತನನ್ನೂ ಒಡೆದವರು ಯಾರೆಂಬ ಕೌತುಕವೇ..? ಶ್ರೀನಿವಾಸ, ಚಿಕ್ಕವನಿರುವಾಗ, ಸಹಜವಾಗೇ ಎಲ್ಲಾ ಮಕ್ಕಳಂತೇ ತುಂಟನಂತೆ. ಇದರಿಂದ ಶಿಕ್ಷಕ ಅನಂತಾಳ್ವಾರ್ ಅವರು, ಶ್ರೀನಿವಾಸನಿಗೆ ಪೆಟ್ಟು ಕೊಡುತ್ತಿದ್ದರಂತೆ. ಹೀಗೊಮ್ಮೆ, ಕೋಲಿನಿಂದ ಒಡೆದಾಗ, ಏಟು ಗಲ್ಲಕ್ಕೆ ಬಿತ್ತಂತೆ. ರಕ್ತವೂ ಬಂದು, ಶ್ರೀನಿವಾಸ ಚೀರಿದನಂತೆ. ಈಗಲೂ, ಆ ಕೋಲನ್ನ, ವೆಂಕಟೇಶ್ವರನ ಗರ್ಭಗುಡಿಯ ಮುಂಭಾಗದಲ್ಲಿಯೇ ಇರಿಸಲಾಗಿದೆ. ಶ್ರೀನಿವಾಸನ ಗಲ್ಲಕ್ಕೆ, ಶ್ರೀಗಂಧವನ್ನು ಅರೆದು ಅಚ್ಚಲಾಗುತ್ತದೆ. ತಿಮ್ಮಪ್ಪನ ದರ್ಶನಕ್ಕೆ ಹೋದಾಗ, ಸೂಕ್ಷಮವಾಗಿ ಗಮನಿಸಿದ್ರೆ, ವಿಗ್ರಹದ ಗಲ್ಲದಲ್ಲಿ ಗಾಯವಾಗಿರುವುದು ಕಂಡು ಬರುತ್ತದೆ. ಈ ಗಾಯದ ಮೇಲೆ, ಸದಾ, ಶ್ರೀಗಂಧವನ್ನು ಲೇಪಿಸಲಾಗಿರುತ್ತದೆ.

Read More

ತಿರುಪತಿ ತಿಮ್ಮಪ್ಪನೂ ಬೆವರುತ್ತಿರುತ್ತಾನೆ ಗೊತ್ತಾ… ! ?

ತಿರುಪತಿ ತಿಮ್ಮಪ್ಪನೂ ಬೆವರುತ್ತಿರುತ್ತಾನೆ ಗೊತ್ತಾ… ! ?

ಮಾನವರು ಬೆವರೋದು ಸಾಮಾನ್ಯ. ಆದ್ರೆ, ಸಾಕ್ಷಾತ್ ಪರಮಾತ್ಮನೂ ಬೆವರುತ್ತಾನೆ ಅಂದ್ರೆ..! ನಿಜಕ್ಕೂ ತಿರುಪತಿ ತಿಮ್ಮಪ್ಪನೂ ಬೆವರುತ್ತಾನೆ. ತಿರುಪತಿ ತಿಮ್ಮಪ್ಪನ ವಿಗ್ರಹವೂ ನಿತ್ಯ ಬೆವರುತ್ತದೆ. ಅರ್ಚಕರು, ಆಗಾಗ ತಿಮ್ಮಪ್ಪನನ್ನು ಶುಭ್ರ ರೇಷಿಮೆಯ ವಸ್ತ್ರದಿಂದ ಒರೆಸುತ್ತಲೇ ಇರುತ್ತಾರೆ. ಪರಮಾತ್ಮನ ಕಂಕುಳ ಭಾಗದಲ್ಲಿ, ಬೆವರು ಬರುತ್ತಲೇ ಇರುತ್ತದೆ. ಪ್ರತೀ ದಿನ ಮುಂಜಾನೆ 4.30ಕ್ಕೆ ಸುಪ್ರಭಾತ ಪೂಜೆಗೂ ಮುನ್ನ, ಪರಮಾತ್ಮನಿಗೆ ಅಭಿಷೇಕ ಮಾಡಲಾಗುತ್ತದೆ. ನೀರು, ಗಂಧ, ಹೀಗೆ ಹಲವು ದ್ರವ್ಯಗಳಿಂದ ತಿಮ್ಮಪ್ಪನನ್ನು ಅಭಿಷೇಕ ಮಾಡಲಾಗುತ್ತದೆ. ಆ ನಂತರ, ರೇಷಿಮೆಯ ಬಟ್ಟೆಯಿಂದ ವಿಗ್ರಹವನ್ನು ಒರೆಸಲಾಗುತ್ತದೆ. ಹೀಗೆ ಎಷ್ಟೇ ಸಲ ಒರೆಸಿದರೂ, ಸ್ವಾಮಿಯ ಕಂಕುಳ ಭಾಗದಿಂದ ಬೆವರು ಬರುತ್ತಲೇ ಇರುತ್ತದೆ. ಇಷ್ಟೇ ಅಲ್ಲ, ಪ್ರತೀ ಗುರುವಾರ, ಸ್ವಾಮಿಯ ಮೈಮೇಲಿನ ಎಲ್ಲಾ ಆಭರಣಗಳನ್ನೂ ತೆಗೆದಾಗಲೂ, ಸ್ವಾಮಿಯು, ಬೆವರುತ್ತಿರುವುದು ಗಮನಕ್ಕೆ ಬರುತ್ತದೆ. ತಿಮ್ಮಪ್ಪನನ್ನು ರೇಷಿಮೆಯ ವಸ್ತ್ರದಿಂದ ಎಷ್ಟೇ ಒರೆಸಿದರೂ, ಆ ವಸ್ತ್ರ ಒದ್ದೆಯಾಗುತ್ತಲೇ ಇರುತ್ತದೆ.

Read More

ತಿಮ್ಮಪ್ಪನಿಗೆ ನಿತ್ಯವೂ ಸಮರ್ಪಿಸುವ ಹೂ ಎಲ್ಲಿ ಹೋಗುತ್ತೆ…!?

ತಿಮ್ಮಪ್ಪನಿಗೆ ನಿತ್ಯವೂ ಸಮರ್ಪಿಸುವ ಹೂ ಎಲ್ಲಿ ಹೋಗುತ್ತೆ…!?

ನಿಮಗೆ ಗೊತ್ತಾ…? ತಿರುಪತಿ ತಿಮ್ಮಪ್ಪನಿಗೆ ಪ್ರತಿನಿತ್ಯವೂ ಹಲವು ಬಗೆಯ ಹೂಗಳಿಂದ ಅಲಂಕರಿಸಲಾಗುತ್ತದೆ. ಅಡಿಯಿಂದ ಮುಡಿಯವರೆಗೂ, ನಾನಾ ರೀತಿಯ ಹೂಗಳಿಂದ ಪರಮಾತ್ಮನನ್ನು ಸಿಂಗರಿಸಲಾಗುತ್ತದೆ. ಪರಮಾತ್ಮನನ್ನು ಸಿಂಗರಿಸಿದ ಹೂಗಳನ್ನ ಯಾವುದೇ ಕಾರಣದಿಂದಲೂ, ಗರ್ಭಗುಡಿಯಿಂದ ಹೊರಗೆ ತರುವುದಿಲ್ಲ ಎಂಬುದೂ ಅತ್ಯಾಶ್ಚರ್ಯಕರ ಸಂಗತಿಯೇ. ತಿಮ್ಮಪ್ಪನ, ವಿಗ್ರಹದ ಮೇಲಿಂದ ತೆಗೆದ ಹೂವುಗಳನ್ನ, ಪರಮಾತ್ಮನ ವಿಗ್ರಹದ ಹಿಂದೆಯೇ ಎಸೆಯಲಾಗುತ್ತದೆ. ಆದ್ರೆ, ಹೀಗೆ ಹೂಗಳನ್ನ ತೆಗೆದು ವಿಗ್ರಹದ ಹಿಂದೆ ಹಾಕುವುದನ್ನ ಯಾರೂ ನೋಡುವುದಿಲ್ಲ. ಸ್ವತಃ ಹೂ ತೆಗೆದು, ಹಾಕುವವರೂ ಕೂಡಾ, ತಮ್ಮ ಬೆನ್ನಿನ ಹಿಂದೆಯೇ ಹೂಗಳನ್ನ ಎಸೆಯುತ್ತಾರೆ. ಯಾರಿಗೂ ಗೊತ್ತಿರದ ಮತ್ತೊಂದು ಸೋಜಿಗವೆಂದ್ರೆ, ತಿರುಪತಿ ತಿಮ್ಮಪ್ಪನ ಗರ್ಭಗುಡಿಯಲ್ಲೇ ಪುಟ್ಟ ಜಲಪಾತವಿದೆ. ಈ ಹೂಗಳೆಲ್ಲಾ, ಆ ಜಲಪಾತ ಸೇರುತ್ತವೆ. ಜಲಪಾತ ಸೇರುವ ಹೂಗಳೆಲ್ಲಾ, ಗುಪ್ತಗಾಮಿನಿಯಾಗಿ ಹರಿದು, ಅಂದರೆ, ಭೂ ಮಾರ್ಗದಲ್ಲೇ ಹರಿದು, ಕಾಳಹಸ್ತಿ ಸೇರುತ್ತವೆ. ಶ್ರೀಕಾಳಹಸ್ತಿ ಕ್ಷೇತ್ರ, ತಿರುಪತಿಯಿಂದ 20 ಕಿಲೋ ಮೀಟರ್ ದೂರದಲ್ಲಿದೆ. ಶ್ರೀಕಾಳಹಸ್ತಿಯಲ್ಲಿರುವ ಕೊಳದಲ್ಲಿ, ತಿಮ್ಮಪ್ಪನಿಗೆ…

Read More

ತಿಮ್ಮಪ್ಪನ ವಿಗ್ರಹದ ತಲೆಯಲ್ಲಿ ನಿಜವಾದ ಕೂದಲಿದೆ ಗೊತ್ತಾ… !?

ತಿಮ್ಮಪ್ಪನ ವಿಗ್ರಹದ ತಲೆಯಲ್ಲಿ ನಿಜವಾದ ಕೂದಲಿದೆ ಗೊತ್ತಾ… !?

ತಿರುಪತಿ ತಿಮ್ಮಪ್ಪನ ವಿಗ್ರಹದ ತಲೆಯಲ್ಲಿ ನಿಜವಾದ ಕೂದಲಿದೆ. ಹಾ.. ನಿಜಕ್ಕೂ ಎಂಬ ಉದ್ಗಾರ ತೆಗೆದ್ರಾ… !? ನಿಜವಾದ ಗಿಡ್ಡದಾದ ಕೂದಲಿದೆ. ಇದು ಎಂದಿಗೂ ಉದುರುವುದೇ ಇಲ್ಲ. ತಿಮ್ಮಪ್ಪನ ತಲೆಗೂದಲಿಗೂ ಪುರಾಣ ಐತಿಹ್ಯವಿದೆ. ಶ್ರೀನಿವಾಸ, ಹುತ್ತದಲ್ಲಿರುವಾಗ, ಸಾಕ್ಷಾತ್ ಶಿವ, ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ. ರಾಜಾ ಚೋಳನ ಅರಮನೆ ರಾಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದೂ ಅನುಮಾನಕ್ಕೆ ಕಾರಣವಾಗಿರುತ್ತದೆ. ಒಂದು ದಿನ, ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ. ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ. ಆನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ, ಭಕ್ತರು, ನನ್ನ…

Read More

ಪದ್ಮಾವತಿ ಸೇವೆಗೆ ನಿಂತಳು ಲಕ್ಷ್ಮಿ..

ಪದ್ಮಾವತಿ ಸೇವೆಗೆ ನಿಂತಳು ಲಕ್ಷ್ಮಿ..

ತಿರುಪತಿಯ ಪದ್ಮಾವತಿ ಅಮ್ಮನವರ ಸೇವೆಗೆ ಸಾಕ್ಷಾತ್ ಲಕ್ಷ್ಮಿಯೇ ಆಗಮಿಸಿದ್ದಾಳೆ. ಆಶ್ಚರ್ಯ ಆಯ್ತಾ..? ಈ ಲಕ್ಷ್ಮಿ, ಆನೆಯ ಹೆಸರು. ತಿರುಪತಿಯ ಪದ್ಮಾವತಿ ಅಮ್ಮನವರ ದೇವಾಲಯಕ್ಕೆ ಭಕ್ತರೊಬ್ಬರು ಲಕ್ಷ್ಮಿಯನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ಇನ್ನಿತರ ಪೂಜಾ ಸಮಾರಂಭಗಳಿಗೆ ಲಕ್ಷ್ಮಿ ತನ್ನ ಸೇವೆ ಸಲ್ಲಿಸುತ್ತಾಳೆ.

Read More

ತಿರುಪತಿ: ಎಂದಿಗಿಂತ ಮತ್ತಷ್ಟು ಬಿಗಿ ಭದ್ರತೆ

ತಿರುಪತಿ: ಎಂದಿಗಿಂತ ಮತ್ತಷ್ಟು ಬಿಗಿ ಭದ್ರತೆ

ಹೈದರಾಬಾದ್ ನಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ, ಆಂಧ್ರಾದ್ಯಂತ ಭಾರೀ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಅದರಲ್ಲೂ ತಿರುಪತಿಯಲ್ಲಂತೂ ಎಂದಿಗಿಂತ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಶ್ವಾನ ದಳಗಳು, ಬಾಂಬ್ ನಿಷ್ಕ್ರಿಯ ದಳಗಳು, ವಿಶೇಷ ಭದ್ರತಾಪಡೆ ಮತ್ತು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಯವುದೇ ಅಹಿತಕರ ಘಟನೆಯೂ ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ. ಹಿಂದೊಮ್ಮೆ ಚಂದ್ರಬಾಬು ನಾಯ್ಡು ಅವರೇ ಮುಖ್ಯಮಂತ್ರಿಯಾಗಿದ್ದಾಗ. ಅವರು ತಿರುಪತಿಗೆ ಬಂದಿದ್ದರು. ಆಗ ನೆಲಬಾಂಬ್ ಸ್ಫೋಟಿಸಿ ಅವರ ಹತ್ಯೆಗೆ ಯತ್ನಿಸಲಾಗಿತ್ತು.  

Read More

ತಿರುಪತಿಯಲ್ಲಿ ಮೂರು ದಿನಗಳ ಜೇಷ್ಠಾಭಿಷೇಕ ಆರಂಭ

ತಿರುಪತಿಯಲ್ಲಿ ಮೂರು ದಿನಗಳ ಜೇಷ್ಠಾಭಿಷೇಕ ಆರಂಭ

ತಿರುಪತಿ ದೇವಸ್ಥಾನದಲ್ಲಿ ಮೂರು ದಿನಗಳ ವಾರ್ಷಿಕ ಜೇಷ್ಠಾಭಿಷೇಕ ಆರಂಭವಾಗಿದೆ. ತಿರುಪತಿ ತಿರುಮಲದಲ್ಲಿ ನಡೆಯುವ ಈ ಪೂಜಾ ವಿಧಿ ವಿಧಾನಕ್ಕೆ ಅಭಿಧೇಯಕ ಅಭಿಷೇಕ ಎನ್ನುವ ಹೆಸರೂ ಇದೆ.

Read More

ಇಂದು 49,889 ಭಕ್ತಾಧಿಗಳಿಂದ ತಿಮ್ಮಪ್ಪನ ದರ್ಶನ

ಇಂದು 49,889 ಭಕ್ತಾಧಿಗಳಿಂದ ತಿಮ್ಮಪ್ಪನ ದರ್ಶನ

ಇಂದು ಬೆಳಿಗ್ಗೆ 3ರಿಂದ ಸಂಜೆ 6ರ ವರೆಗೆ ಒಟ್ಟು 49,889 ಭಕ್ತಾಧಿಗಳು ತಿರುಪತಿಗೆ ಭೇಟಿನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಶ್ರೀವಾರಿ ಹುಂಡಿಯಲ್ಲಿ ಒಟ್ಟು 2.49 ಕೋಟಿ ರೂ. ಸಂಗ್ರಹವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.      

Read More

ಮಂಗಳವಾರ 75,850 ಜನರಿಂದ ತಿಮ್ಮಪ್ಪನ ದರ್ಶನ

ಮಂಗಳವಾರ 75,850 ಜನರಿಂದ ತಿಮ್ಮಪ್ಪನ ದರ್ಶನ

ನಿನ್ನೆ ಮಂಗಳವಾರ ತಿರುಪತಿಗೆ ಒಟ್ಟು 75,850 ಭಕ್ತರು ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿ   3.39 ಕೋಟಿ ರೂ. ಹಣ ಸಂಗ್ರಹವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.  

Read More