ತಿರುಪತಿಯ ದೇವಸ್ಥಾನದ ವಾಸ್ತುಶಿಲ್ಪ: ನೀವು ತಿಳಿಯಲೇ ಬೇಕಾದ ಕೆಲವು ವಿಷಯಗಳು

ತಿಮ್ಮಪ್ಪನ ದೇವಸ್ಥಾನಕ್ಕೆ ನೀವು ಭೇಟಿ ಕೊಟ್ಟಾಗ ಆಗುವ ಅನುಭವವೇ ಬೇರೆ. ಬೇರೆಲ್ಲೂ ಸಿಗದ ಒಂದು ಅನುಭೂತಿ, ಸಾರ್ಥಕತೆ ಹಾಗೂ ಮುಕ್ತಿ ಭಾವ. ದೇವಸ್ಥಾನದ ಒಂದೊದಂದೂ ಮೂಲೆಯಲ್ಲೂ ತನ್ನದೇ ಆದ ವಿಶೇಷ ಗುನಾತ್ಮಕತೆಯೊಂದಿಗೆಯೇ ಭಕ್ತರನ್ನು ತನ್ಮಯರನ್ನಾಗಿಸುವ ದೇವಸ್ಥಾನದ ವಾಸ್ತುಶಿಲ್ಪವೂ ಒಂದು ಕಾರಣವೆನ್ನಲೇ ಬೇಕು. ಸುತ್ತ ಏಳು ಬೆಟ್ಟಗಳಿಂದ ಕೂಡಿರುವ ದೇವಸ್ಥಾನದ ಮೊದಲನೇ ಸುತ್ತಿನಲ್ಲೇ ನಿಮಗೆ ಸಿಗುವ ಅನುಭೂತಿಗೆ ಇಲ್ಲಿನ ವಾತಾವರಣ, ದೇವಸ್ಥಾನವನ್ನು ಕಟ್ಟಲು ಉಪಯೋಗಿಸಿರುವ ತಂತ್ರಜ್ಞಾನವನ್ನು ನೀವು ಒಮ್ಮೆಯಾದರೂ ತಿಳಿಯಲೇ ಬೇಕು. ನೀವು ಕೇಳಿರದಂತಹ ವಿಷಯಗಳನ್ನು ನಾವು ನಿಮಗೆ ಹೇಳುತ್ತೇವೆ ಕೇಳಿ.

ಮಹಾದ್ವಾರಂ:

ದೇವಸ್ಥಾನಕ್ಕೆ ಒಳಹೊಕ್ಕುವಾಗ ಸಿಗುವುದೇ ನಿಮಗೆ ಮಹಾದ್ವಾರ. ಇದು ನಿಮಗೆ ದೇವಸ್ಥಾನದ ಹೊರ ದ್ವಾರದಿಂದ ಒಳ ದ್ವಾರಕ್ಕೆ ಕೊಂಡೊಯ್ಯುವ ಈ ಗೋಪುರವು ಬರೋಬ್ಬರಿ ೫೦ ಅಡಿಗಳಷ್ಟಿದ್ದು ತನ್ನಲ್ಲಿ 7 ಕಳಸಗಳನ್ನು ಹೊಂದಿದೆ ಇದನ್ನು ಸಿಂಹದ್ವಾರಂ ಎಂದೂ ಕರೆಯಲಾಗುತ್ತದೆ. ಮತ್ತೆ ಇದೇ ದ್ವಾರದ ಆಚೆ ಬದಿಯಲ್ಲಿ ನಿಮಗೆ ಕಾಣಸಿಗುವುದು ಮತ್ತೆರಡು ಪಂಚಲೋಹದ ಪ್ರತಿಮೆಗಳಾದ ಸಂಕನಿಧಿ ಹಾಗೂ ಪದ್ಮನಿಧಿ, ಇವರನ್ನು ತಿಮ್ಮಪ್ಪನ ಖಜಾನೆಯ ಪಾಲಕರೆಂದೇ ನಂಬಲಾಗುತ್ತದೆ.

ಸಂಪಂಗಿ ಪ್ರದಕ್ಷಿಣ:

ನಂತರ ನಿಮಗೆ ಕಾಣಸಿಗುವುದು ಅಂದರೆ ದೇವಸ್ಥಾನದ ಹೊರಗೋಡೆಯಿಂದ ಒಳಗೋಡೆಗೆ ನಿಮ್ಮನ್ನು ಕರೆದೊಯ್ಯುವ ಪ್ರದೇಶ. ಒಂದು ಕಾಲದಲ್ಲಿ ಇದೇ ಪ್ರದೇಶದಲ್ಲಿ ಮಂಗೋಲಿಯಾ ದೇಶದ ಚಂಪಕಾ ಹೂವುಗಳನ್ನು ಬೆಳೆಯುತ್ತಿದ್ದರಂತೆ. ಹಾಗಾಗಿಯೇ ಈ ಪ್ರದೇಶ ಇಂದಿಗೂ ಸಂಪಂಗಿ ಪ್ರದಕ್ಷಿಣ ಅಂದರೆ ಸಂಪಂಗಿಯ ಜಾಗದಲ್ಲಿ ಮಾಡಲಾಗುವ ಪ್ರದಕ್ಷಿಣೆ ಎನ್ನಲಾಗುವುದು. ಈ ಜಾಗವು ಅನೇಕ ಮಂಟಪಗಳು ಹಾಗೂ ಇತರೆ ಇತಿಹಾಸದ ಉಲ್ಲೇಖಗಳಿಗೆ ಸಕ್ಷಿಯಾಗಿವೆ. ಇದೇ ಪ್ರದೇಶದಲ್ಲಿ ನಿಮಗೆ ಕಾಣಸಿಗುವ ಮತ್ತೊಂದು ಅಚ್ಚರಿಯೆಂದರೆ ಗರುಡನ ಚಿಹ್ನೆ ಹೊಂದಿರುವ ಬಾವುಟ, ಇದನ್ನು ದೇವರುಗಳನ್ನು ಹಬ್ಬಗಳು ಹಾಗೂ ಉತ್ಸವಗಳ ಸಮಯದಲ್ಲಿ ಇಲ್ಲಿಗೆ ಆಹ್ವಾನಿಸುವವ ನೆಂದೇ ನಂಬಲಾಗುತ್ತದೆ.

ಇನ್ನು ಇಲ್ಲಿ ಕಂಡು ಬರುವ ಮತ್ತೊಂದು ವಿಶೇಷವೆಂದರೆ ರಂಗನಾಯಕ ಮಂಡಪಂ, ಈ ಮಂಟಪವು 13 ನೇ ಶತಮಾನದಲ್ಲಿ ಮಲ್ಲಿಕಫಾರನು ಶ್ರೀರಂಗಾಮ್ ನ ಮೇಲೆ ದಾಳಿ ಮಾಡಿದಾಗ ರಂಗಸ್ವಾಮಿಗೆ ಆಶ್ರಯ ನಿದಿತ್ತೆಂಬ ಉಲ್ಲೇಖಗಳು ಇವೆ.

ವೆಂಡಿ ವಲ್ಕಿಲಿ:

ನಂತರ ನೀವು ಒಳಹೊಕ್ಕುವುದು ವೆಂಡಿ ವಲ್ಕಿಲಿ ಅಂದರೆ ಎರಡನೆಯ ಪದರಕ್ಕೆ. ಈ ವೆಂಡಿವಲ್ಕಿಯು ನಿಮ್ಮನ್ನು ದೇವಸ್ಥಾನದ ಸಂಪಂಗಿ ಪ್ರದಕ್ಷಿಣಮ್ ನಿಂದ ಮತ್ತೊಂದು ಪದರವಾದ ವಿಮಾನ ಪ್ರದಕ್ಷಿಣಂ ನತ್ತ ಕರೆದೊಯ್ಯುತ್ತದೆ. ಈ ಪ್ರದೇಶದಲ್ಲಿಯೇ ಮಹಾದ್ವಾರದಲ್ಲಿ ಕಂಡುಬರುವ ಏಳು ಕಳಸಗಳಲ್ಲಿ ಮೂರು ಕಳಸಗಳನ್ನು 12 ಹಾಗೂ 13 ನೇ ಶತಮಾನಗಳಲ್ಲಿ ನಿರ್ಮಿಸಲಾಗಿತ್ತೆಂದು ಹೇಳುತ್ತಾರೆ.

ವಿಮಾನ ಪ್ರದಕ್ಷಿಣಂ:

ವೆಂಡಿವಲ್ಕಿಲಿಯನ್ನು ದಾಟುತ್ತಿದ್ದಂತೆಯೇ ನಿಮಗೆ ಸಿಗುವುದು ವಿಮಾನ ಪ್ರದಕ್ಷಿಣಂ. ಈ ಪ್ರದೇಶವು ನಿಮ್ಮನ್ನು ಆನಂದ ನಿಲಯಂ, ವಿಮಾನ ಗೋಪುರಂ ಅಥವಾ ಕೊಳ ಅಥವಾ ಮುಖ್ಯ ದೇಗುಲಕ್ಕೆ ಕರೆದೊಯ್ಯುತ್ತದೆ. ಅಂಗಪ್ರದಕ್ಷಿನ ಸೇವೆಯನ್ನು ಸಲ್ಲಿಸಲಾಗುವುದು ಇಲ್ಲಿಯೇ. ವಿಮಾನ ಪ್ರದಕ್ಷಿನಂ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಗರುಡ ಮಂಡಪಂ ನ ಎದುರು ನಿಮಗೆ ಸಿಗುವುದು ಚಿನ್ನದ ಮೂರ್ತಿಯಾಗಿ ಶ್ರೀ ರಂಗನಾಥ ಸ್ವಾಮಿಯು ಆದಿಶೇಷ ಹಾಗೂ ವೆಂಕಟೇಶ್ವರ ಸ್ವಾಮಿಯ ಮೇಲೆ ಮಲಗಿರುವಂತೆ. ಅಷ್ಟೇ ಅಲ್ಲದೆ ಸಣ್ಣ ದೇಗುಲಗಳನ್ನು ಹೊಂದಿರುವ ಈ ಪ್ರದೇಶ ದಲ್ಲಿ ಪಶ್ಚಿಮ ದಿಕ್ಕಿಗೆ ಅಭಿಮುಖವಾಗಿ ವರದರಾಜ ಸ್ವಾಮಿಯ ಮಂದಿರವನ್ನೂ ಹಾಗೂ ವೆಂಡಿವಲ್ಕಿಲಿಯ ಪಕ್ಕದಲ್ಲಿಯೇ ಅಂದರೆ ಪಶ್ಚಿಮ ದಿಕ್ಕಿಗೆ ಅಭಿಮುಖವಾಗಿ ಇರುವ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನಗಳನ್ನು. ಇಲ್ಲಿ ಕಾಣ ಸಿಗುವ ಎಲ್ಲ ಸಣ್ಣ ದೇಗುಲಗಳನ್ನು ‘ಚುಟ್ಟು ಗುಲ್ಲು’ ಅಂದರೆ ಮುಖ್ಯ ದೇಗುಲಕ್ಕೆ ಕರೆದೊಯ್ಯುವ ಸಣ್ಣ ದೇಗುಲಗಳೆಂದು ಕರೆಯಲಾಗುವುದು.

SwamiPushkarni

ಆನಂದ ನಿಲಯಂ ವಿಮಾನಂ:

ಇದು ದೇವಸ್ಥಾನದ ಬಹು ಮುಖ್ಯ ವಲಯವೇ ಸರಿ. ಚಿನ್ನದ ಲೇಪನ ಹೊಂದಿರುವ ಗೋಪುರವನ್ನೇ ಆನಂದ ನಿಲಯಂ ಎಂದು ಕರೆಯಲಾಗುವುದು. ಈ ಚಿನ್ನದ ಗೋಪುರವಿರುವ ಸ್ಥಳದಲ್ಲಿಯೇ ಬಾಲಾಜಿ ಯ ಮುಖ್ಯ ವಿಗ್ರಹ ಇರುವುದು ಹಾಗಾಗಿಯೇ ಇದನ್ನು ಆನಂದ ನಿಲಯ ದಿವ್ಯ ವಿಮಾನ ಎನ್ನಲಾಗುತ್ತದೆ. ತಾಮ್ರದ ಕವಚ ಹೊಂದಿದ್ದ ಈ ಗೋಪುರವು 13 ನೇ ಶತಮಾನದಲ್ಲಿ ಚಿನ್ನದ ಲೇಪನ ವನ್ನು ಪಡೆಯಿತು ಎಂದು ಹೇಳಲಾಗುತ್ತದೆ.

ಬಂಗಾರು ವಲ್ಕಿಲಿ:

ಹೆಸರೇ ಹೇಳುವಂತೆ ಇದು ಚಿನ್ನದ ಪ್ರವೇಶ ಹೊಂದಿರುವ ಪ್ರದೇಶ. ಇದು ನಿಮ್ಮನ್ನು ಸೀದಾ ಗರ್ಭ ಗೃಹ ಕ್ಕೆ ಕೊಂಡೊಯ್ಯುತ್ತದೆ. ಒಳ ಹೊಕ್ಕುತ್ತಿದ್ದಂತೆ ನಿಮಗೆ ಕಾಣ ಸಿಗುವುದು ಬಾಗಿನ ಎರಡೂ ಬದಿಯಲ್ಲಿ ಜಯ ಮತ್ತು ವಿಜಯರ ತಾಮ್ರದ ಚಿತ್ರಗಳು. ಹಾಗೂ ಅಲ್ಲಿನ ದಪ್ಪನೆಯ ಮರದ ತುಂಡುಗಳ ಮೇಲೆ ಮಹಾ ವಿಷ್ಣುವಿನ ಹಲವು ಅವತಾರಗಳು. ಈ ಜಾಗದಲ್ಲಿಯೇ ಸುಪ್ರಭಾತವನ್ನು ಹಾಡಲಾಗುವುದು.

Lord_Venkat

ಗರ್ಭಗೃಹ:

ಆನಂದ ನಿಲಯಂ ವಿಮಾನಂ ನ ಚಿನ್ನದ ಲೇಪನವಿರುವ ಗೋಪುರದ ಕೆಳಗೆಯೇ ಇರುವುದು ಬಾಲಜಿಯ ಮೂರ್ತಿ. ಸದಾ ಚಿನ್ನದ ಕಿರೀಟದೊಂದಿಗೆ ಕಾಣಲ್ಪಡುವ ವಿಗ್ರಹಕ್ಕೆ ಹಲವು ವಿಶೇಷ ಸಂದರ್ಭಗಳಲ್ಲಿ ವಜ್ರದ ಕಿರೀಟವನ್ನು ತೊಡಿಸಲಾಗುತ್ತದೆ. ಈ ವಿಗ್ರಹವು ಉದ್ಭವ ಮುರ್ಥಿಯೆಂದೂ ಹಾಗೂ ತನ್ನಿಂದ ತಾನೇ ಕಟ್ಟಲ್ಪಟ್ಟ ವಿಗ್ರಹವೆಂದು ನಂಬಲಾಗಿದೆ. ಈ ವಿಗ್ರಹವನ್ನು ನಿರ್ಮಿಸಿದ ಶಿಲ್ಪಿಯ ಬಗ್ಗೆ ಈ ವರೆಗೂ ಯಾವುದೇ ಉಲ್ಲೇಖಗಲಾಗಲೀ ಕುರುಹುಗಳಾಗಲೀ ಇಲ್ಲ.

Pictures: Wikipedia.