ನವರಾತ್ರಿಯ ಒಂಭತ್ತು ದಿನಗಳ ವಿಶೇಷತೆ

ನವ ದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯರ ಆರಾಧನೆಯು ನವರಾತ್ರಿಯ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿ ಆರಣೆಯ ಒಂಬತ್ತು ದಿನಗಳ ಒಂದೊಂದು ದಿನದ ಆಚರಣೆಗೆ ಅದರದೇಯಾದ ವಿಶೇಷತೆ ಇದೆ.

ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರ ಮೂಲಕ ಆರಂಭ ಮಾಡಲಾಗುತ್ತದೆ. ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ. ನಂತರ ಗೊಂಬೆಗಳನ್ನು, ಶಕ್ತಿ ದೇವತೆಯರನ್ನು ಪ್ರತಿಷ್ಠಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿದೇವತೆಗಳನ್ನು ನಿಯಮ ಬದ್ದವಾಗಿ ಪೂಜಿಸಲಾಗುತ್ತದೆ.

ನವರಾತ್ರಿಯ ಎರಡನೇ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಅಷ್ಟೋತ್ತರಗಳ ಪೂಜೆ ಮಾಡಲಾಗುತ್ತದೆ. ತಿರುಪತಿಯಲ್ಲಿ ಕುಡ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಮೂರು ದಿನಗಳ ಕಾಲ ದೇವಿಯನ್ನು ರೌದ್ರವತಾರದಲ್ಲಿ ಪೂಜಿಸಲಾಗುತ್ತದೆ.
ಮೂರನೆಯ ದಿನದಂದು ಮಹಿಷಾಸುರ ಮರ್ದಿನಿ ರೂಪವನ್ನು ಪೂಜಿಸಲಾಗುತ್ತದೆ. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ ಒಂಭತ್ತನೆಯ ದಿನ ಮಹಾ ಮಾತೆಯು ಸಂಪನ್ನಳಾಗಿ ಎಲ್ಲರನ್ನು ಅನುಗ್ರಹಿಸುತ್ತಾಳೆ. ನವರಾತ್ರಿ ದಿನಗಳಲ್ಲಿ ಶಕ್ತಿ ದೇವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರು ನೆರವೇರುತ್ತವೆ ಎಂಬ ನಂಬಿಕೆ ಕೂಡ ಇದೆ.

ನವರಾತ್ರಿಯ ನಾಲ್ಕನೆ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕಾಳಿ ದೇವತೆಯು ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹೋಮಗಳನ್ನು ಮಾಡಲಾಗುತ್ತದೆ. ಮನೆಯಲ್ಲಿದ್ದವರು ದೇವಿಯ ಸ್ತ್ರೋತ್ರಗಳನ್ನು ಪಠಿಸುತ್ತಾರೆ.

ನವರಾತ್ರಿಯ ಐದನೇ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಐದನೇ ದಿನವಾದ್ದರಿಂದ ಪಂಚರಾತ್ರೋತ್ಸವವನ್ನು ಆಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿ ಮನೆಯಲ್ಲಿ ನಂದಾದೀಪಗಳನ್ನು ಬೆಳಗಿಸಬೇಕು.

ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿಪೂಜಿಸಲಾಗುತ್ತದೆ. ಧನಲಕ್ಷ್ಮಿಯನ್ನು ಪೂಜಿಸುವಾಗ ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ದತಿಯು ಇದೆ. ದೀಪಗಳಿಂದ ದೇವಿಯನ್ನು ಬೆಳಗಿ ಅಷ್ಟಲಕ್ಷ್ಮಿಯರು ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. 4,5,6ನೇ ದಿನಗಳಲಲಿ ಮಹಾಲಕ್ಷ್ಮಿಯ ಪೂಜೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ರೂಪದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಪಾತ್ರರಾಗುತ್ತಾರೆ. ಶಾಂತಾ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ವರವನ್ನು ಶಾಂತಿಯಿಂದ ಅನುಗ್ರಹಿಸುವಳೆಂಬ ನಂಬಿಕೆ ಇದೆ.

 

ನವರಾತ್ರಿಯ ಎಂಟನೇ ದಿನವನ್ನು ಅಷ್ಟಮಿ ಎಂದು ಕರೆಯುತ್ತಾರೆ. ಅಂದರೆ ದುರ್ಗಾ ದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಈ ಪೂಜೆಯನ್ನು ಮಾಡುವ ಪ್ರತೀತಿಯೂ ಇದೆ. ಪ್ರತಿ ದಿನದಂತೆ ದೇವಿಗೆ ಪೂಜಿಸಿ, ಉಪವಾಸ ವೃತ ಮಾಡುತ್ತಾರೆ. ಕುಂಕುಮಾರ್ಚನೆ ಈ ದಿನಗಳಲ್ಲಿ ನಡೆಯುತ್ತದೆ.

ನವರಾತ್ರಿಯ ಒಂಭತ್ತನೆಯ ದಿನ ಆಯುಧ ಪೂಜೆ ನಡೆಯುತ್ತದೆ . ಪಾಂಡವರು ವನವಾಸ ಮುಗಿಸುವ ಸಂದರ್ಭದಲ್ಲಿ ಊರ ಹೊರಗಿನ ಶಮೀವೃಕ್ಷದಲ್ಲಿ ಕಟ್ಟಿಹಾಕಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆ ಇಳಿಸಿಕೊಂಡು ತಮ್ಮತಮ್ಮ ಆಯುಧಗಳನ್ನು ಪೂಜಿಸಿ ಜಯಕ್ಕೋಸ್ಕರ ಪ್ರಾರ್ಥಿಸುತ್ತಾರೆ. ಹೀಗಾಗಿ ಒಂಭತ್ತನೆಯ ದಿನ ಮನೆಗಳಲ್ಲಿ ಇರುವಂಥ ವಾಹನಗಳು, ವಿವಿಧ ಬಗೆಯ ಅಸ್ತ್ರಗಳು, ಎತ್ತುಗಳು, ಬಿತ್ತನೆಗೆ ಬಳಸುವ ನೇಗಿಲು ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ದೇವರ ಮನೆಯಲಿಟ್ಟು ನಿಯಮ ಬದ್ದವಾಗಿ ಪೂಜೆ ಮಾಡುತ್ತಾರೆ.

ಇದೇ ದಿನ ಅಂದರೆ ನವರಾತ್ರಿಯ ಒಂಭತ್ತನೆ ದಿನವೇ ಮೈಸೂರಿನ ಅರಮನೆಯಲ್ಲಿ ರಾಜಮನೆತನದವರಿಂದ ವಿಧಿವತ್ತಾಗಿ ಪೂಜಿಸಲಾಗುತ್ತದೆ.

ಹತ್ತನೆಯ ದಿನದಂದು ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ. ಶತ್ರುಜಯ ಪಾಪ ಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ ದೊರೆಯುತ್ತದೆ. ವಿಜಯ ದಶಮಿಯ ಸಮಯದಲ್ಲಿ ಮೈಸೂರಿನಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತುಕೊಂಡ ಜಂಬೂ ಸವಾರಿ ನಡೆಯುತ್ತದೆ.

 

Related posts

Leave a Comment