ವಿವಿಧ ರಾಜ್ಯಗಳಲ್ಲಿ ನವರಾತ್ರಿಯ ಆಚರಣೆ

ಕರ್ನಾಟಕದಲ್ಲಿ ನವರಾತ್ರಿ ಆಚರಣೆ ಹೇಗೆ?

ನವರಾತ್ರಿಯ ಸಮಯದಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜಿಯನ್ನು ಸಲ್ಲಿಸಿ ಶಮಿ(ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ದಸರಾ ಆಚರಣೆಯ ಪದ್ದತಿ. ಹತ್ತನೆಯ ದಿನ ಅಂದರೆ ಅಶ್ವಯಜ ಶುದ್ದ ಪ್ರತಿಪದೆಯ ದಿನ ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ.

 

 

ಬಂಗಾಳದಲ್ಲಿ ನವರಾತ್ರಿಯ ಸಂಭ್ರಮ

ಬಂಗಾಳದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ. ದುರ್ಗಾ ಮಾತೆಯ ಒಂಭತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯನ್ನು ಆರಾಧಿಸಲಾಗುತ್ತದೆ. ಷಷ್ಠಿಯಿಂದ ದಶಮಿಯವರೆಗೆ ದುರ್ಗಾದೇವಿಯ ಪೂಜಿಯನ್ನು ಆಚರಿಸಲಾಗುತ್ತದೆ. ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕಾರ ಮಾಡಿ ಅವರಿಗೆ ಪಾದ ಪೂಜೆ ಮಾಡಿ ಮೃಷ್ಟಾನ್ನ ಭೋಜನ ನೀಡುತ್ತಾರೆ.

 

ಇತರೆ ರಾಜ್ಯಗಳಲ್ಲಿ ನವರಾತ್ರಿ ಆಚರಣೆ

ಮಧ್ಯಪ್ರದೇಶ ರಾಜಸ್ಥಾನ, ಪಂಜಾಬ್‍ಗಳಲ್ಲಿ ದುರ್ಗಾದೇವಿಯ ಮಂದಿರಗಳಲ್ಲಿ ಪೂಜಾ ಕಾರ್ಯಗಳು ವಿಶೇಷವಾಗಿರುತ್ತವೆ. ಉಪವಾಸ ಜಾಗರಣೆ ಮತ್ತು ಪೂಜಾ ಕಾರ್ಯದ ಮೂಲಕ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ.

 

Related posts

Leave a Comment