ಬ್ರಹ್ಮತ್ಸೋವ ಪೂರ್ವ ಸಿದ್ಧತೆ

ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದ ವಿತರಣೆಯಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಟಿಟಿಡಿ ಸಿಬ್ಬಂದಿಗೆ ಇಓ ಸಾಂಬಶಿವ ಹೇಳಿದರು. ಬ್ರಹ್ಮತ್ಸೋವದ ಆರಂಭಕ್ಕೂ ಮುನ್ನವೇ ಟಿಟಿಡಿಯ ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದ ಕೆಲಸಗಳತ್ತ ಗಮನಕೊಡಬೇಕು, ಇನ್ನುಳಿಂದತೆ ಕಟ್ಟಡ , ವಿದುತ್ಯ್ ಹೀಗೆ ಇವೆಲ್ಲ ಕಾರ್ಯಗಳು ಬೇಗನೆ ಮುಗಿಯಬೇಕೆಂದು ಅಧಿಕಾರಿಗಳು ಕರೆ ನೀಡಿದರು. ಭಕ್ತರಿಗೆ ಅನುಕೂಲವಾಗುವ ಹಾಗೇ ಲಡ್ಡು ಕೌಂಟರ್ ಗಳನ್ನು ನಿರ್ಮಾಣ ಮಾಡುವುದಕ್ಕೆ, ಆದಷ್ಟು ಬೇಗನೆ ಸಿಬ್ಬಂದಿಯೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದೆಂದು ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದರು.

ಅಕ್ಟೋಬರ್ ನಲ್ಲಿ ನಡೆಯಲಿರರುವ ವಾರ್ಷಿಕ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪತ್ರಿದಿನ ಲಡ್ಡುಗಳನ್ನು ನೀಡವುದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಲಡ್ಡುಗಳನ್ನು ತಯಾರಿಸಲಾಗಿದೆಂದು ಟಿಟಿಡಿಯ ಈಒ ಸಾಂಬಶಿವ ಹೇಳಿದರು. ಲಗೇಜ್ ಕೌಟಂರ್ ಗಳನ್ನು ಹೆಚ್ಚಿಸುವುದಲ್ಲದೆ, ಮೂಲಭೂತವಾದ ಎಲ್ಲಾ ಅವಶ್ಯಕತೆಗಳನ್ನು ಕಲ್ಪಿಸುವುದಾಗಿ ಟಿಟಿಡಿಯ ಸಿಬ್ಬಂದಿ ಸೃಷ್ಟಪಡಿಸಿದೆ.

Related posts

Leave a Comment