ಕೇಂದ್ರ ಸಚಿವ ಜೆ.ಪಿ.ನಡ್ಡಾ ಟಿಟಿಡಿಗೆ: ಭೇಟಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಕುಟುಂಬ ಪರಿವಾರದೊಂದಿಗೆ ಸೋಮವಾರ ತಿರುಮಲದ ವೆಂಕಟೇಶ್ವತರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಟಿಟಿಡಿಯ ಈಓ ಡಾ.ಸಾಂಬಶಿವರಾವ್ ಮತ್ತು ಸಿಬ್ಬಂದಿ ವರ್ಗವೂ ಇವರನ್ನು ದೇವಸ್ಥಾನದ ದ್ವಾರದಲ್ಲಿ ಬರಮಾಡಿಕೊಂಡರು. ದೇವರ ದರ್ಶನದ ನಂತರ ಜೆ.ಪಿ.ನಡ್ಡಾ ಕುಟುಂಬವೂ ಪ್ರಸಾದವನ್ನು ಸ್ಬೀಕರಿಸಿದರು. ಇದೇ ಸಂದರ್ಭದಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿ ಸದಸ್ಯ ಶ್ರೀ ಜಿ ಭಾನು ಪ್ರಕಾಶ್ ರೆಡ್ಡಿ, ಶ್ರೀ ರಾಮ ರಾವ್, ಅಧಿಕಾರಿಗಳಾದ ಹರಿದ್ರನಾಥ ಶ್ರೀ ಲಕ್ಷ್ಮೀ ನಾರಾಯಣ ಯಾದವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Comment