ಟಿಟಿಡಿ, ವಿಜಯವಾಡದಲ್ಲಿ ನಿರ್ಮಿಸಿರುವ, ತಿರುಪತಿಯನ್ನೇ ಹೋಲುವ ವೆಂಕಟೇಶ್ವರ ದೇವಾಲಯಕ್ಕೆ ಇಂದು ಗಣ್ಯರು ಭೇಟಿ ಕೊಟ್ಟಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮತ್ತು ಕುಟುಂಬ, ದೇವಾಲಯಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಆಂಧ್ರದ ಕೃಷಿ ಸಚಿವ ಪುಲ್ಲಾ ರಾವ್, ಈ ಸಂದರ್ಭದಲ್ಲಿದ್ದರು. ಇದೇ ವೇಳೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎನ್.ವಿ.ರಮಣ ಅವರು ಕೂಡಾ, ದೇವಾಲಯಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ, ಟಿಟಿಡಿ ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ರಾಜು, ಸುಧಾಕರ್ ರಾವ್, ರಾಜೇಂದ್ರುಡು ಉಪಸ್ಥಿತರಿದ್ದರು.
ವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ
