ಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ

ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್ ಪ್ಯಾಂಟ್, ಬಿಳಿ ಬಣ್ಣದ ಅಂಗಿ ತೊಟ್ಟ ಸುಧಾಕರ್, ಉರುಳುಸೇವೆ ಸಂದರ್ಭದಲ್ಲಿ ತರಚಬಾರದು ಎಂದು ಕಾಲಿಗೆ, ಕೆಲವು ಸುತ್ತು ಬಟ್ಟೆ ಸುತ್ತಿಕೊಂಡಿದ್ದರು. ಅವರ ಪತ್ನಿ ಮತ್ತು ಸಂಬಂಧಿಕರು, ಸುಧಾಕರ್ ಉರುಳುತ್ತಿದ್ದಂತೇ, ಮಡಿ ಬಟ್ಟೆಗಳನ್ನ ನೆಲಕ್ಕೆ ಹಾಸುತ್ತಿದ್ದರು. ಜೊತೆಗೆ, ಗೋವಿಂದ, ಗೋವಿಂದ ನಾಮಸ್ಮರಣೆ ಮುಗಿಲುಮುಟ್ಟಿತ್ತು. ತಿರುಪತಿ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಯಾಣಿಕರೆಲ್ಲಾ, ಪೊನ್ನುಲ ಸುಧಾಕರ್ ರನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇನ್ನೂ ಆಶ್ಚರ್ಯ ಎಂದ್ರೆ, ಸುಧಾಕರ್, ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. ಹೀಗಿದ್ದರೂ, ಇಷ್ಟೊಂದು ರಿಸ್ಕ್ ಏಕೆ ಎಂದು ಕೇಳಿದರೆ, ತಿಮ್ಮಪ್ಪನಿಗೆ ಕೈ ಮುಗಿಯುತ್ತಾರೆ. 1998ರಲ್ಲಿಯೂ, ಇದೇ ಸುಧಾಕರ್, ಕೇವಲ ಮಂಡಿಯೂರುತ್ತಲೇ ತಿರುಮಲ ಬೆಟ್ಟ ಹತ್ತಿ ದಾಖಲೆ ನಿರ್ಮಿಸಿದ್ದರು.

sudakar thirupati

Related posts

Leave a Comment