ತಿರುಪತಿ ತಿಮ್ಮಪ್ಪನ ಮೂಲ ಹೆಸರೇನು ಗೊತ್ತಾ..?

ತಿರುಮಲ ಬೆಟ್ಟದಲ್ಲಿ ಶ್ರೀನಿವಾಸ ಸ್ವಾಮಿಯ ಸಾಕ್ಷತ್ಕಾರ ಎಷ್ಟು ವರ್ಷಗಳ ಹಿಂದೆ ಆಗಿರಬಹುದೆಂದು ಸುಮಾರು ಜನರಿಗೆ ಗೊತ್ತಿಲ್ಲ. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಶ್ರೀನಿವಾಸ ಸ್ವಾಮಿ ಇಲ್ಲಿಗೆ ಬಂದು ನೆಲೆಸಿದ್ದಾರೆ ಎಂಬುದು ಸತ್ಯ. ಇನ್ನು ಗಮನಿಸಬೇಕಾದ ಅಂಶವೇನೆಂದರೆ. ಶ್ರೀನಿವಾಸ ಸ್ವಾಮಿಯ ಮೊದಲ ಹೆಸರು ‘ಸಾಲಿಗ್ರಾಮ ಶಿಲಾಮೂರ್ತಿ’. ಸ್ವಾಮಿ ಇಲ್ಲಿಗೆ ಬಂದು ನೆಲಸಿದ ಆರಂಭದ ದಿನಗಳಲ್ಲಿ ಇದೇ ಹೆಸರಿನಿಂದ ಸೇವೆಗಳನ್ನು ಸ್ವೀಕರಿಸುತ್ತಿದ್ದರು.

ಶ್ರೀನಿವಾಸನ ಮಹಿಮೆ ಅರಿತುಕೊಂಡ ನೂರಾರು ಭಕ್ತರು ತಿರುಮಲ ಬೆಟ್ಟಕ್ಕೆ ಬಂದು ತಮ್ಮ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಿದ್ದರು. ಅಂದಿನಿಂದ ಹಿಡಿದು ಇಂದಿನವರೆಗು ಸ್ವಾಮಿಯ ಸೇವೆ ಮಾಡಲೆಂದು ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಪ್ರಸ್ತುತ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಸ್ವಾಮಿಯ ದರ್ಶನ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ. ಹಲವು ಮಂದಿಗೆ ಸ್ವಾಮಿಯ ಮೊದಲ ಹೆಸರು ಗೊತ್ತಿಲ್ಲದಿರಬಹುದು, ಇದು ಆಶ್ಚರ್ಯಪಡುವ ಸಂಗತಿಯೇನಲ್ಲ ಏಕೆಂದರೆ ಸ್ವಾಮಿಯ ಪ್ರಥಮ ನಾಮಧೇಯವನ್ನು ಪುರಾಣಗಳಲ್ಲಿ ಮಾತ್ರ ಉಲ್ಲೇಖಿಸಲಾಗಿದೆ. ಮತ್ತು ಎಷ್ಟು ಸಾವಿರ ವರ್ಷಗಳ ಹಿಂದೆ ಸ್ವಾಮಿ ಇಲ್ಲಿಗೆ ಬಂದು ನೆಲೆಸಿದ್ದಾರೆ ಎಂಬ ಉಲ್ಲೇಖವೂ ಸಹ ಪುರಾಣಗಳಲ್ಲಿ ಇದೆ.
ತಿರುಪತಿ ತಿಮ್ಮಪ್ಪನಿಗೆ ಕೇವಲ ಒಂದೇ ನಾಮಧ್ಯೇಯವಿಲ್ಲ. ವಿಶ್ವದ ಯಾವ ದೈವಕ್ಕೂ ಇರದಷ್ಟು ಹೆಸರುಗಳು ಶ್ರೀನಿವಾಸ ಸ್ವಾಮಿಗೆ ಇವೆ. ಅದರಲ್ಲೂ ಮುಖ್ಯವಾಗಿ, ಗೋವಿಂದ, ನಿತ್ಯಕಲ್ಯಾಣ ಚಕ್ರವರ್ತಿ, ಶ್ರೀಮನ್ನಾರಯಣ, ವೈಕುಂಠದಾರಿ, ಸರ್ವಾಂತರ್ಯಾಮಿ, ಶೇಷಾಚಲಪತಿ, ಏಳು ಬೆಟ್ಟದ ಒಡೆಯ, ಆನಂದ ನಿಲಯ, ಶ್ರೀನಿವಾಸ ಹೀಗೆ ಹೇಳುತ್ತಾ ಪಟ್ಟಿ ಹನುಮಂತ ಸ್ವಾಮಿಯ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇವುಗಳಲ್ಲಿ ನಮಗೆ ಕೆಲವು ಮಾತ್ರ ಪರಿಚಯವಿವೆ.
ವೈಕುಂಠವನ್ನಾದರೂ ಬಿಟ್ಟು ಇರುತ್ತೇನೆಯೇ ಹೊರತು, ಭಕ್ತರನ್ನು ಬಿಟ್ಟು ಎಂದಿಗೂ ಇರಲಾರೆ ಎಂದು ಸಾಕ್ಷಾತ್ಕಾರ ಸಮಯದಲ್ಲಿ ಶ್ರೀನಿವಾಸ ಸ್ವಾಮಿ ಹೇಳಿರುವುದು ಪುರಾಣಗಳಲ್ಲಿ ಕಂಡುಬರುತ್ತದೆ. ಹೀಗಾಗಿ ಕೇವಲ ಲೋಕಕಲ್ಯಾಣಕ್ಕಾಗಿಯೇ ಸ್ವಾಮಿ ಇಲ್ಲಿಗೆ ಬಂದು ನಿತ್ಯ ಕಲ್ಯಾಣ ವೈಭೋಗದೊಂದಿಗೆ ನಿತ್ಯ ಕಲ್ಯಾಣ ಚಕ್ರವರ್ತಿಯಾಗಿ ರಾರಾಜಿಸುತ್ತಿದ್ದಾರೆ.
ನಿತ್ಯ ಕಲ್ಯಾಣವೆಂಬುದು ತಿರುಮಲದಲ್ಲಿ ಅಂದಿನಿಂದ ನಡೆದುಕೊಂಡು ಬರುತ್ತಿದೆ. ಸ್ವಾಮಿ ಸನ್ನಿಧಿಯಲ್ಲಿ ವಿವಾಹ ಮಾಡಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವುದು ಇಲ್ಲಿನ ಪ್ರತ್ಯೇಕತೆ. ಭಕ್ತರ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ, ಗೋವಿಂದ ನಾಮಸ್ಮರಣೆಯೊಂದಿಗೆ ಶೇಷಾಚಲ ಬೆಟ್ಟವೆಲ್ಲಾ ಝೇಂಕಾರ ಹಾಕುತ್ತಿದೆ. ನಾವು ಕೂಡ ಶ್ರೀನಿವಾಸವನನ್ನೂ ಸ್ತುತಿಸೋಣ ಹೇಳಿ, ಗೋವಿಂದ….. ಗೋವಿಂದ…… ಗೋವಿಂದ…..

Related posts

Leave a Comment