ವೈಶಾಖ ತಿಂಗಳು ತಿರುಮಲದಲ್ಲಿ ಸಾಲು ಸಾಲು ಉತ್ಸವಗಳು

ತಿರುಮಲ: ವೈಶಾಕ ತಿಂಗಳಿನಲ್ಲಿ ೫ ಮಹಾನ್ ಸಂತರು ಮತ್ತು ಇಬ್ಬರು ಹಿಂದೂ ಆರಾಧಕರ ಜಯಂತಿಗಳು ಬರುವುದರಿಂದ ಈ ತಿಂಗಳನ್ನು ಪವಿತ್ರ ತಿಂಗಳೆಂದು ಭಾವಿಸಲಾಗುತ್ತದೆ. ಮೇ  ತಿಂಗಳಿನಲ್ಲಿ ತಿರುಪತಿ ತಿರುಮಲದಲ್ಲಿ ಸಾಲು ಸಾಲು ಜಯಂತಿಗಳು ಆಚರಣೆಗೊಳ್ಳಲಿವೆ.

ಮೇ ತಿಂಗಳ ೧೦ನೆ ತಾರೀಖಿನಂದು ವಿಶಿಷ್ಟ ದ್ವೈತ ಮತ ಪ್ರತಿಪಾದಿಸಿದ ರಾಮಾನುಜಾಚಾರ್ಯರ ಜಯಂತಿ ಬಂದರೆ, ಮೇ ೧೧ರಂದು ದ್ವೈತ ತತ್ವಜ್ಞಾನದ ಮತ್ತೋರ್ವ ಸಮಾಜ ಸುಧಾರಕ ಶಂಕರಾಚಾರ್ಯರ ಜಯಂತಿ ಬರಲಿದೆ. ಮೇ ೨೦ ರಂದು ಸಂತೆ ಮಾತೃಶ್ರೀ ತರಿಗೊಂಡ ವೆಂಗಾಂಬ ಅವರ ೨೮೬ನೆ ಜಯಂತಿ ತಿರುಮಲದಲ್ಲಿ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ. ಇದೇದಿನ ನರಸಿಂಹ ಸ್ವಾಮಿ ಜಯಂತಿಯೂ ತಿರುಮಲದಲ್ಲಿ ನಡೆಯಲಿದೆ. ಮಲಯಪ್ಪ ಸ್ವಾಮಿ ಉತ್ಸವವೂ ಇದೇ ಸಂಧರ್ಭದಲ್ಲಿ ನೆರವೇರಲಿದೆ.

ಇನ್ನು ಮೇ ೨೧ ರಂದು ಮತ್ತೋರ್ವ ಸಂತ ಶ್ರೀ ತಲ್ಲಪಾಕ ಅಣ್ಣಮಾಚಾರ್ಯ ಜಯಂತಿ ಉತ್ಸವ ತಿರುಮಲ ದೇವಸ್ಥಾನದಲ್ಲಿ ನಡೆದರೆ, ಮೇ ೩೧ ರಂದು ಹನುಮಾನ್ ಜಯಂತಿ ದೇವಾಲಯ ಆವರಣದಲ್ಲಿ ಜರುಗಲಿದೆ.

Related posts

Leave a Comment