ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಅಂಗವಾಗಿ ತಿರುಪತಿಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಒಂದಾದ ಪುಷ್ಪಯಾಗಂ ಉತ್ಸವದಿಂದಾಗಿ ತಿರುಪತಿಯ ಕೋದಂಡ ರಾಮ ಸ್ವಾಮಿ ದೇವಸ್ಥಾನ ಬುಧವಾರ ಸಂಜೆ ವರ್ಣರಂಜಿತವಾಗಿ ಗೋಚರಿಸಿತು.
ಉತ್ಸವದ ಸಲುವಾಗಿ ಸುಮಾರು ಐದು ಟನ್ ಗಳಷ್ಟು ವೈವಿಧ್ಯಮಯ ಪುಷ್ಪಗಳನ್ನು ವಿಶೇಷ ಪೂಜಾ ಸ್ಥಳದಲ್ಲಿರುವ ಶ್ರೀರಾಮ, ಸೀತಾದೇವಿ ಮತ್ತು ಲಕ್ಷ್ಮಣ ಮೂರ್ತಿಗಳಿಗೆ ಅರ್ಪಿಸಲಾಯಿತು.
ಮಧ್ಯಾಹ್ನ ೨ರಿಂದ ೪ರ ವರೆಗೆ ಜರುಗಿದ ಈ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನ ಕಾರ್ಯಕಾರಿ ಸಮಿತಿಯ ಅಧಿಕಾರಿ ಮುನಿಲಕ್ಷ್ಮಿ, ಸೂಪರಿನ್ಟೆನ್ಡೆಂಟ್ ಉಮಾ ಮಹೇಶ್ವರ ರೆಡ್ಡಿ ಪಾಲ್ಗೊಂಡಿದ್ದರು.