ತಿರುಪತಿ ರಾಮಾನುಜ ಸಂಚಾರ ರಥ ಸಂಚರಿಸಲಿರುವ ಸ್ಥಳಗಳು

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಪ್ರಯುಕ್ತ ಸಂಚಾರ ಆರಂಭಿಸುತ್ತಿರುವ ರಾಮಾನುಜ ಸಂಚಾರ ರಥದ ಮಾರ್ಗಸೂಚಿಯನ್ನು ತಿರುಪತಿ ದೇವಾಲಯದ ಜಂಟಿ ಕಾರ್ಯಕಾರಿ ಸಮಿತಿ ಅಧಿಕಾರಿ ಪಿ. ಭಾಸ್ಕರ್ ಪರಾಮರ್ಶಿಸಿದರು.

ರಥದೊಂದಿಗೆ ಸಾಥ್ ನೀಡಲಿರುವ ತಂಡವನ್ನು ಉದ್ದೇಶಿಸಿ ಮಾತನಾಡಿದ ಪಿ. ಭಾಸ್ಕರ್, ರಥ ಹಾದು ಹೋಗಲಿರುವ ವಿವಿಧ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪ್ರಮುಖ ಪುರಾತನ ದೇವಾಲಯಗಳಿಗೆ ತಲುಪಿಸುವ ಮೂಲಕ ರಥ ಸಂಚಾರದ ಬಗ್ಗೆ ಪ್ರಚಾರ ನೀಡುವಂತೆ ತಿಳಿಸಿದರು.

ಮೇ ೧೦ರಂದು ತಿರುಮಲದಿಂದ ಸಂಚಾರ ಆರಂಭಿಸಿರುವ ರಾಮಾನುಜ ಸಂಚಾರ ರಥ ಮೇ ೧೨ರಂದು ಕಡಪ ಜಿಲ್ಲೆಯ ಒಂಟಿ ಮಠಕ್ಕೆ ಬಂದು ತಲುಪಿದೆ. ಮೇ ೧೫ ರಂದು ಬೆಂಗಳೂರಿಗೆ ತಲುಪುವುದರ ಒಳಗಾಗಿ ಕುಮೂಲ್ ಜಿಲ್ಲೆಯ ಅಲ್ಲಗದ್ದ ನಂದ್ಯಾಲ್ ಮತ್ತು ಅನಂಥಪುರಂ ಮದಕಸಿರಕ್ಕೆ ಬಂದು ಸೇರಲಿದೆ. ಅಲ್ಲಿಂದ ಮೇ ೧೫ ರಿಂದ ೧೭ರ ಮಧ್ಯದಲ್ಲಿ ಸಂಚಾರ ರಥ ಮೇಲುಕೋಟೆ, ಮೈಸೂರು, ನಂಜನಗೂಡು, ಕೇರಳ ತಲುಪಲಿದೆ. ಮೇ ೧೮ ರಿಂದ ೨೨ರ ವರೆಗೆ ನೀಲಂಬೂರ್, ಗುರವಾಯೂರ್, ತಿರುಮೂಜಿಕುಲಂ, ತಿರುವೆಲ್ಲ, ಅರನ್ಮುಲ್ಲಗಳಲ್ಲಿ ಹಾದುಹೋಗಲಿದೆ ಎಂದು ವಿವರ ನೀಡಿದರು.

Related posts

Leave a Comment