ಮೊದಲ ಬಾರಿಗೆ ವಿದೇಶಗಳಲ್ಲಿ ಶ್ರೀ ವೆಂಕಟೇಶ್ವರ ವೈಭವಂ ಆಚರಿಸಲು ಟಿಟಿಡಿ ನಿರ್ಧಾರ.

ತಿರುಪತಿ: ಇದೇ ಮೊದಲ ಬಾರಿಗೆ ವಿದೇಶಗಳಲ್ಲಿ ಎರಡು ದಿನಗಳ ಮಟ್ಟಿಗೆ ಶ್ರೀ ವೆಂಕಟೇಶ್ವರ ವೈಭವಂ ಅನ್ನು ಆಚರಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ನಿರ್ಧರಿಸಿದೆ.

ಶ್ರೀ ವೆಂಕಟೇಶ್ವರ ವೈಭವಂ ತಿರುಪತಿ ದೇವಸ್ಥಾನದ ಭಕ್ತಿ ಕಾರ್ಯಕ್ರಮ ವಾಗಿದ್ದು ಹಲವು ಕಡೆ ಆಯೋಜಿಸಲಾಗುವ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ದೇವಸ್ಥಾನದ ಟ್ರಸ್ಟ್ ನ ಅಧಿಕಾರಿಗಳು ನಡೆಸಿದ ಭೇಟಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಅನಿವಾಸಿ ಭಾರತೀಯರ ಕೋರಿಕೆಯ ಮೇರೆಗೆ ಯಾವುದಾದರೂ ಶನಿವಾರ ಅಥವಾ ಭಾನುವಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಟ್ರಸ್ಟ್ ನ ಜಂಟಿ ಕಾರ್ಯಕಾರಿ ಅಧಿಕಾರಿ ನಿರ್ಧರಿಸಿದ್ದಾರೆ.

ಈ ಕಾರ್ಯಕ್ರಮಕ್ಕೆಂದೇ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು ಆಚರಣೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದೇ ಮೊದಲ ಬಾರಿಗೆ ಶ್ರೀ ವೆಂಕಟೇಶ್ವರ ವೈಭವಂ ಅನ್ನು ವಿದೇಶಗಳಲ್ಲಿ ಆಚರಿಸುತ್ತಿರುವುದರಿಂದ ಅಧಿಕಾರಿಗಳಿಗೆ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

 

Related posts

Leave a Comment