ತಿರುಪತಿಗೆ ಹೋಗಿ ಕನ್ನಡ ಮಾತಾಡಿದ್ರೆ ನಿಮಗೆ ಬೇಕಾದ ಮಾಹಿತಿ ಲಭ್ಯ.

ತಿರುಪತಿ: ತಿರುಪತಿ ಬಾಲಾಜಿ ದೇವರನ್ನು ಒಮ್ಮೆಯಾದರೂ ನೋಡಬೇಕೆಂಬುದು ಹಲವರ ಆಸೆ, ಹಾಗೂ ಈ ಆಸೆ ಈಗಿನದ್ದಲ್ಲ ನಮ್ಮ ಹಲವು ತಲೆಮಾರಿನ ಹಿಂದಿನಿಂದಲೂ ಬಹುತೇಕರಿಗೆ ತಿಮ್ಮಪ್ಪನ ಮೇಲೆ ದೈತ್ಯದಷ್ಟು ಭಕ್ತಿ ಇರುತ್ತದೆ. ತಿರುಪತಿಯು ಆಂಧ್ರ ಪ್ರದೆಶದಲ್ಲಿರಬಹುದು. ಆದರೆ ತಿಮ್ಮಪ್ಪ ಕರ್ನಾಟಕದ ಜನರಿಗೂ ಮನೆದೆವರೇ ಅಲ್ಲವೇ.

ಇಂದಿಗೂ ಕರ್ನಾಟಕದ ಬಹುಭಾಗದ ಹಾಗೂ ಬಹುತೇಕ ಜನರ ಆರಾಧ್ಯ ದೈವ ತಿಮ್ಮಪ್ಪನೇ. ಹೇಳಿಕೇಳಿ ತಿರುಪತಿ ಭಾರತದ ಅಷ್ಟೇ ಅಲ್ಲದೆ ವಿಶ್ವದಲ್ಲಿಯೇ ಅತಿ ಹೆಚ್ಚು ಭಕ್ತಾದಿಗಳನ್ನು ತನ್ನತ್ತ ಕರೆದೊಯ್ಯುವ ಪುಣ್ಯಕ್ಷೇತ್ರ.

ಇಂತಹ ಜನಜಂಗುಳಿಯನ್ನು ನಿಭಾಯಿಸುವುದೆಂದರೆ ಸುಲಭದ ಮಾತೇನು? ಇದೇ ರೀತಿಯ ದೇವಾಲಯಗಳು ಅಂದರೆ ನಮ್ಮ ಧರ್ಮಸ್ಥಳವನ್ನು ಸೇರಿಸಿ ಹೇಳುವುದಾದರೆ ಜನರ ನಿರ್ವಹಣೆಯಲ್ಲಿ ಹಾಗೂ ವ್ಯವಸ್ಥಿತ ನಿಭಾವಣೆಯಲ್ಲಿ ನಮ್ಮ ಅಂತರರಾಷ್ಟ್ರೀಯ ಮಟ್ಟದ ಬಿಸಿನೆಸ್ ಸ್ಕೂಲ್ ಗಳನ್ನೂ ನಾಚಿಸುವಂತಿದೆ.

ಒಮ್ಮೆ ತಿರುಪತಿಯ ಜನಜಂಗುಳಿ ನೋಡಿದಾಗ ಎಂಥವರೂ ಬೆರಗಾಗಿ ಹೋಗುವುದು ಸುಳ್ಳಲ್ಲ. ಈ ಮಟ್ಟಿನ ಜನರನ್ನು ನಿಭಾಯಿಸುವುದರಲ್ಲಿ ಬಂದ ಭಕ್ತಾದಿಗಳಿಗೆ ಊಟದ ಉಪಚಾರ ಮಾಡುವುದರಲ್ಲಿ ಈ ದೇವಾಲಯಗಳಿಗೆ ಈ ದೇವಾಲಯಗಳೇ ಸಾಟಿ.

ಈ ಬಾರಿ ಬಿಸಿಲು ನಿಮ್ಮನ್ನು ತಡಬಡಾಯಿಸಿ ಸುಸ್ತಾಗಿಸಿ ಆಗಿದೆ. ಇನ್ನು ತಿರುಪತಿಯಂಥ ಉಷ್ಣ ಪ್ರದೇಶದಲ್ಲಿ ಹೇಗಪ್ಪಾ ತಡೆಯೋದು ಅಲ್ಲ್ಲಿ ನಮ್ಮ ಗತಿ ಏನು ಅಂತ ಯೋಚಿಸಬೇಡಿ. ತಿರುಪತಿಯಲ್ಲಿ ಇನ್ನು ನಿಮಗೆ ಕನ್ನಡದಲ್ಲಿಯೇ ಮಾತನಾಡುವ ಹಲವು ಸ್ವಯಂ ಸೇವಕರು ದೊರೆಯಲಿದ್ದಾರೆ.

ಹೌದು! ಮೊದಲೇ ಕನ್ನಡದವರು ಹೇಳಿಕೇಳಿ ತಿಮ್ಮಪ್ಪನ ಭಕ್ತರು ಇನ್ನು ತಿರುಪತಿಗೆ ಹೋದಾಗ ನಿಮಗೆ ಎಲ್ಲವನ್ನೂ ಅರ್ಥೈಸಿ ನಿಮ್ಮನ್ನು ಸುರಕ್ಷಿತವಾಗಿಡಲು ಬೇಸಿಗೆ ರಜಾ ದಿನಗಳಲ್ಲಿ ಕನ್ನಡಿಗರು ತಿರುಪತಿಗೆ ಸ್ವಯಂ ಸೇವಕರಾಗಿ ತೆರಳಿದ್ದಾರೆ.

ಈಗಾಗಲೇ ದೇವಸ್ಥಾನದ ನಿರ್ವಹಣಾ ಮಂಡಳಿಯು 13 ವಿವಿಧ ರಾಜ್ಯಗಳಿಂದ ಸುಮಾರು3000 ಸ್ವಯಂ ಸೇವಕರನ್ನು ನೇಮಿಸಿಕೊಂಡಿದ್ದು ಅದರಲ್ಲಿ ಕನ್ನಡಿಗರ ಪಾಲು ಬಹಳವಾಗಿದೆಯಂತೆ. ತಿರುಮಲದಲ್ಲಿ ದೇವಸ್ಥಾನದ ಕೌಂಟರ್ಗಳ ಬಳಿ, ರೇಡಿಯೋ ಘೋಷಣೆ, ಪ್ರಸಾದದ ಕೌಂಟರ್ಗಳು, ರಸ್ತೆಗಳ ಬಳಿ ಹಾಗೂ ತಿರುಪತಿಯಲ್ಲಿನ ದೇವಸ್ಥಾನ ಒಡೆತನದ ಆಸ್ಪತ್ರೆಗಳಲ್ಲಿ ಹಾಗೂ ವಿವಿಧೆಡೆ ಈ ಸ್ವಯಂ ಸೇವಕರು ನಿಮಗೆ ಕಾಣಸಿಗಲಿದ್ದಾರೆ.

ಇಲ್ಲಿನ ಈ ಯೋಜನೆಗಳಿಗೆಂದೇ ಪ್ರತಿ ವರ್ಷ ತಿರುಪತಿಗೆ ತೆರಳುವ ಸ್ವಯಂ ಸೇವಕರಿಗೂ ಈ ಕೆಲಸವೆಂದರೆ ಅಚ್ಚುಮೆಚ್ಚು. ತಿಮ್ಮಪ್ಪನಿಗೆ ಸೇವೆ ಸಲ್ಲಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿದೆಯೇ? ಹಾಗಾಗಿಯೇ ಈ ಎಲ್ಲ ಸ್ವಯಂ ಸೇವಕರು ಪ್ರತಿ ವರ್ಷ ಇಲ್ಲಿಗೆ ತೆರಳುತ್ತಾರೆ.

ಆಯ್ಕೆಯಾದ ಸ್ವಯಂ ಸೇವಕರಿಗೆ ಏಳು ದಿನಗಳ ತರಬೇತಿ ನೀಡಲಾಗುತ್ತದೆ. ಹಾಗೂ ಅವರಿಗೆ ಸಮವಸ್ತ್ರಗಳನ್ನು ನೀಡಿ ನಂತರ ಹಣೆಯ ಮೇಲೆ ರಕ್ಷೆಯನ್ನು ಹಾಕಿಕೊಳ್ಳುವುದು ಕಡ್ದಾಯವಾಗಿರುತ್ತದೆ. 18 ರಿಂದ 60 ವರ್ಷಗಳೊಳಗಿನ ವರನ್ನು ಮಾತ್ರವೇ ಆಯ್ಕೆ ಮಾಡಲಾಗುವುದು ಹಾಗೂ ತಮ್ಮ ಮಕ್ಕಳನ್ನು ಸೇವೆಯ ಸಮಯದಲ್ಲಿ ಕರೆತರುವುದು ನಿಷಿದ್ಧವಾಗಿರುತ್ತದೆ. ಇನ್ನು ಈ ಕೆಲಸವೂ ಸಂಪೂರ್ಣ ಸೇವೆಯಾಗಿದ್ದು ದೇವಸ್ಥಾನವು ಸೇವಕರಿಗೆ ಯಾವುದೇ ರೀತಿಯ ಸಂಬಳವನ್ನು ನೀಡುವುದಿಲ್ಲ.

ಇನ್ನು ಈ ಕೆಲಸಕಾಗಿಯೇ ಅಲ್ಲಿಗೆ ತೆರಳುವ ಸ್ವಯಂ ಸೇವಕರು ಮೊದಲೇ ದೇವಸ್ಥಾನದಲ್ಲಿ ತಮ್ಮ ಹೆಸರುಗಳನ್ನೂ ನೊಂದಾಯಿಸಿ ಹಲವು ಶತಪ್ರಯತ್ನಗಳನ್ನು ಪಟ್ಟು ನಂತರವೇ ಇಲ್ಲಿಗೆ ತೆರಳುವುದು. ಹಾಗಾಗಿಯೇ ನಿಮಗೆ ತಿರುಪತಿಗೆ ಹೋದಾಗ ಯಾವುದೇ ರೀತಿಯ ತೊಂದರೆಗಲಾಗದೆ ನಿಮ್ಮ ಕೆಲಸಗಳೂ ಸಾವಕಾಶವಾಗಿ ನೆರವೇರಿ ಬಿಡುತ್ತದೆ. ಇನ್ನು ಅದೇನೇ ಇರಲಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ನಿಮಗೇನಾದರೂ ಗೊತ್ತಾಗಲಿಲ್ಲವೆಂದರೆ ಒಂದೇ ಬಾರಿ ಕನ್ನಡದಲ್ಲಿ ಮಾತನಾಡಿ ನಿಮಗೆ ಬೇಕಾದ ಎಲ್ಲ ಮಾಹಿತಿಗಳೂ ಮರುಕ್ಷಣದಲ್ಲಿ ಸಿಕ್ಕಿ ಬಿಡುತ್ತದೆ.

srivari-seva-copy

Related posts

Leave a Comment