ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಕುಟುಂಬ ಪರಿವಾರದೊಂದಿಗೆ ಸೋಮವಾರ ತಿರುಮಲದ ವೆಂಕಟೇಶ್ವತರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಟಿಟಿಡಿಯ ಈಓ ಡಾ.ಸಾಂಬಶಿವರಾವ್ ಮತ್ತು ಸಿಬ್ಬಂದಿ ವರ್ಗವೂ ಇವರನ್ನು ದೇವಸ್ಥಾನದ ದ್ವಾರದಲ್ಲಿ ಬರಮಾಡಿಕೊಂಡರು. ದೇವರ ದರ್ಶನದ ನಂತರ ಜೆ.ಪಿ.ನಡ್ಡಾ ಕುಟುಂಬವೂ ಪ್ರಸಾದವನ್ನು ಸ್ಬೀಕರಿಸಿದರು. ಇದೇ ಸಂದರ್ಭದಲ್ಲಿ ಟಿಟಿಡಿ ಟ್ರಸ್ಟ್ ಮಂಡಳಿ ಸದಸ್ಯ ಶ್ರೀ ಜಿ ಭಾನು ಪ್ರಕಾಶ್ ರೆಡ್ಡಿ, ಶ್ರೀ ರಾಮ ರಾವ್, ಅಧಿಕಾರಿಗಳಾದ ಹರಿದ್ರನಾಥ ಶ್ರೀ ಲಕ್ಷ್ಮೀ ನಾರಾಯಣ ಯಾದವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Read MoreDay: August 30, 2016
ತೆಲಗು ನಾಡಿನ ಹೆಮ್ಮೆ: ಅಜ್ಜದ ಆಧಿಭಟ್ಲಾ ನಾರಾಯಣದಾಸು
ಹರಿಕಥಾ ವಿದ್ವಾಂಸ ಅಜ್ಜದ ಆಧಿಭಟ್ಲಾ ನಾರಾಯಣದಾಸು ಅವರ 152 ನೇ ಜನ್ನದಿನದ ವಾರ್ಷಿಕೋತ್ಸವ ಸೋಮವಾರ ಸಾಯಂಕಾಲ ಮಹತಿ ಸಭಾಂಗಣದಲ್ಲಿ ಆಚರಣೆ ಮಾಡುವ ಮೂಲಕ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು. ಹರಿಕಥಾ ಪಿತಾಮಹ ಅಜ್ಜದ ಆಧಿಭಟ್ಲಾ ನಾರಾಯಣದಾಸುವರು ತೆಲುಗು, ಸಂಸ್ಕೃತ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್ ಇತ್ಯಾದಿ ಮತ್ತು ಕವನ, ಸಂಗೀತ, ಭಾಷಾಶಾಸ್ತ್ರ, ತತ್ವಶಾಸ್ತ್ರ ಮತ್ತು ನೃತ್ಯ ಸೇರಿದಂತೆ ಎಂಟು ಭಾಷೆಗಳಲ್ಲಿ ಸಾಧನೆ ಮಾಡಿದ ಬಹುಮುಖಿ ಪ್ರತಿಭೆಯ. ಅವರು ನಿಸ್ಸಂದೇಹವಾಗಿ ನಮ್ಮ ತೆಲಗು ನಾಡಿನ ಹೆಮ್ಮೆ ಎಂದು ಕಾರ್ಯಕ್ರಮದ ಸಂಯೋಕರಾದ ತೆರಿಗೊಂಡ ವೆಂಬಬಾಬು ಮಾತನಾಡಿದರು. ಗುಂಟೂರು ಸರ್ಕಾರದ ಪದವಿ ಕಾಲೇಜ್ ಪ್ರಾಂಶುಪಾಲ ಡಾ ನಾಗಲಕ್ಷ್ಮೀ ಹರಿಕಥಾ ಬಗ್ಗೆ ಕುರಿತು ಮಾತನಾಡಿದರು. ಎಸ್.ವಿ.ಮೂಸಿಕ್ಯ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ವಾಯ್.ವ್ಹಿ.ಎಸ್.ಪದ್ಮಾವತಿ, ಸಹ ಪ್ರಾಧ್ಯಾಪಕರಾದ ಚಲ್ಲಾ ಪ್ರಭಾವತಿ, ಶ್ರೀ ಸುಧಾಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Read More