ವೈಶಾಖ ತಿಂಗಳು ತಿರುಮಲದಲ್ಲಿ ಸಾಲು ಸಾಲು ಉತ್ಸವಗಳು

ವೈಶಾಖ ತಿಂಗಳು ತಿರುಮಲದಲ್ಲಿ ಸಾಲು ಸಾಲು ಉತ್ಸವಗಳು

ತಿರುಮಲ: ವೈಶಾಕ ತಿಂಗಳಿನಲ್ಲಿ ೫ ಮಹಾನ್ ಸಂತರು ಮತ್ತು ಇಬ್ಬರು ಹಿಂದೂ ಆರಾಧಕರ ಜಯಂತಿಗಳು ಬರುವುದರಿಂದ ಈ ತಿಂಗಳನ್ನು ಪವಿತ್ರ ತಿಂಗಳೆಂದು ಭಾವಿಸಲಾಗುತ್ತದೆ. ಮೇ  ತಿಂಗಳಿನಲ್ಲಿ ತಿರುಪತಿ ತಿರುಮಲದಲ್ಲಿ ಸಾಲು ಸಾಲು ಜಯಂತಿಗಳು ಆಚರಣೆಗೊಳ್ಳಲಿವೆ. ಮೇ ತಿಂಗಳ ೧೦ನೆ ತಾರೀಖಿನಂದು ವಿಶಿಷ್ಟ ದ್ವೈತ ಮತ ಪ್ರತಿಪಾದಿಸಿದ ರಾಮಾನುಜಾಚಾರ್ಯರ ಜಯಂತಿ ಬಂದರೆ, ಮೇ ೧೧ರಂದು ದ್ವೈತ ತತ್ವಜ್ಞಾನದ ಮತ್ತೋರ್ವ ಸಮಾಜ ಸುಧಾರಕ ಶಂಕರಾಚಾರ್ಯರ ಜಯಂತಿ ಬರಲಿದೆ. ಮೇ ೨೦ ರಂದು ಸಂತೆ ಮಾತೃಶ್ರೀ ತರಿಗೊಂಡ ವೆಂಗಾಂಬ ಅವರ ೨೮೬ನೆ ಜಯಂತಿ ತಿರುಮಲದಲ್ಲಿ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ. ಇದೇದಿನ ನರಸಿಂಹ ಸ್ವಾಮಿ ಜಯಂತಿಯೂ ತಿರುಮಲದಲ್ಲಿ ನಡೆಯಲಿದೆ. ಮಲಯಪ್ಪ ಸ್ವಾಮಿ ಉತ್ಸವವೂ ಇದೇ ಸಂಧರ್ಭದಲ್ಲಿ ನೆರವೇರಲಿದೆ. ಇನ್ನು ಮೇ ೨೧ ರಂದು ಮತ್ತೋರ್ವ ಸಂತ ಶ್ರೀ ತಲ್ಲಪಾಕ ಅಣ್ಣಮಾಚಾರ್ಯ ಜಯಂತಿ ಉತ್ಸವ ತಿರುಮಲ ದೇವಸ್ಥಾನದಲ್ಲಿ ನಡೆದರೆ, ಮೇ ೩೧ ರಂದು ಹನುಮಾನ್ ಜಯಂತಿ…

Read More

ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪುಷ್ಪಯಾಗಂ ಮೆರಗು

ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪುಷ್ಪಯಾಗಂ ಮೆರಗು

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಅಂಗವಾಗಿ ತಿರುಪತಿಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಒಂದಾದ ಪುಷ್ಪಯಾಗಂ ಉತ್ಸವದಿಂದಾಗಿ ತಿರುಪತಿಯ ಕೋದಂಡ ರಾಮ ಸ್ವಾಮಿ ದೇವಸ್ಥಾನ ಬುಧವಾರ ಸಂಜೆ ವರ್ಣರಂಜಿತವಾಗಿ ಗೋಚರಿಸಿತು. ಉತ್ಸವದ ಸಲುವಾಗಿ ಸುಮಾರು ಐದು ಟನ್ ಗಳಷ್ಟು ವೈವಿಧ್ಯಮಯ ಪುಷ್ಪಗಳನ್ನು ವಿಶೇಷ ಪೂಜಾ ಸ್ಥಳದಲ್ಲಿರುವ ಶ್ರೀರಾಮ, ಸೀತಾದೇವಿ ಮತ್ತು ಲಕ್ಷ್ಮಣ ಮೂರ್ತಿಗಳಿಗೆ ಅರ್ಪಿಸಲಾಯಿತು. ಮಧ್ಯಾಹ್ನ ೨ರಿಂದ ೪ರ ವರೆಗೆ ಜರುಗಿದ ಈ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನ ಕಾರ್ಯಕಾರಿ ಸಮಿತಿಯ ಅಧಿಕಾರಿ ಮುನಿಲಕ್ಷ್ಮಿ, ಸೂಪರಿನ್ಟೆನ್ಡೆಂಟ್ ಉಮಾ ಮಹೇಶ್ವರ ರೆಡ್ಡಿ ಪಾಲ್ಗೊಂಡಿದ್ದರು.

Read More

ತಿರುಪತಿ ರಾಮಾನುಜ ಸಂಚಾರ ರಥ ಸಂಚರಿಸಲಿರುವ ಸ್ಥಳಗಳು

ತಿರುಪತಿ ರಾಮಾನುಜ ಸಂಚಾರ ರಥ ಸಂಚರಿಸಲಿರುವ ಸ್ಥಳಗಳು

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಪ್ರಯುಕ್ತ ಸಂಚಾರ ಆರಂಭಿಸುತ್ತಿರುವ ರಾಮಾನುಜ ಸಂಚಾರ ರಥದ ಮಾರ್ಗಸೂಚಿಯನ್ನು ತಿರುಪತಿ ದೇವಾಲಯದ ಜಂಟಿ ಕಾರ್ಯಕಾರಿ ಸಮಿತಿ ಅಧಿಕಾರಿ ಪಿ. ಭಾಸ್ಕರ್ ಪರಾಮರ್ಶಿಸಿದರು. ರಥದೊಂದಿಗೆ ಸಾಥ್ ನೀಡಲಿರುವ ತಂಡವನ್ನು ಉದ್ದೇಶಿಸಿ ಮಾತನಾಡಿದ ಪಿ. ಭಾಸ್ಕರ್, ರಥ ಹಾದು ಹೋಗಲಿರುವ ವಿವಿಧ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪ್ರಮುಖ ಪುರಾತನ ದೇವಾಲಯಗಳಿಗೆ ತಲುಪಿಸುವ ಮೂಲಕ ರಥ ಸಂಚಾರದ ಬಗ್ಗೆ ಪ್ರಚಾರ ನೀಡುವಂತೆ ತಿಳಿಸಿದರು. ಮೇ ೧೦ರಂದು ತಿರುಮಲದಿಂದ ಸಂಚಾರ ಆರಂಭಿಸಿರುವ ರಾಮಾನುಜ ಸಂಚಾರ ರಥ ಮೇ ೧೨ರಂದು ಕಡಪ ಜಿಲ್ಲೆಯ ಒಂಟಿ ಮಠಕ್ಕೆ ಬಂದು ತಲುಪಿದೆ. ಮೇ ೧೫ ರಂದು ಬೆಂಗಳೂರಿಗೆ ತಲುಪುವುದರ ಒಳಗಾಗಿ ಕುಮೂಲ್ ಜಿಲ್ಲೆಯ ಅಲ್ಲಗದ್ದ ನಂದ್ಯಾಲ್ ಮತ್ತು ಅನಂಥಪುರಂ ಮದಕಸಿರಕ್ಕೆ ಬಂದು ಸೇರಲಿದೆ. ಅಲ್ಲಿಂದ ಮೇ ೧೫ ರಿಂದ ೧೭ರ ಮಧ್ಯದಲ್ಲಿ ಸಂಚಾರ ರಥ ಮೇಲುಕೋಟೆ, ಮೈಸೂರು, ನಂಜನಗೂಡು, ಕೇರಳ ತಲುಪಲಿದೆ….

Read More

ಡಿ ಪಿ ಅನಂತ್ – ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ

ಡಿ ಪಿ ಅನಂತ್ – ಮುಖ್ಯಮಂತ್ರಿ ಸಿದ್ಧರಾಮಯ್ಯ  ಭೇಟಿ

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಆಡಳಿತ ಮಂಡಲಿಯಲ್ಲಿ  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಡಿ ಪಿ ಅನಂತ್ ಅವರು ಬುಧವಾರ  ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು  ಭೇಟಿ ಮಾಡಿದರು. ಅನಂತ್ ಅವರು ಈ ಸಂಧರ್ಭದಲ್ಲಿ ಶ್ರೀನಿವಾಸದೇವರ ಶೇಷವಸ್ತ್ರ ಹಾಗೂ ಪ್ರಸಾದವನ್ನು ನೀಡಿದರು. ಅನಂತ್ ಅವರ ಮತ್ತು  ತಿ.ತಿ.ದೇವಸ್ಥಾನಗಳ ಆಡಳಿತ ಮಂಡಲಿಯ ಸೇವಾ ಅವಧಿಯನ್ನು ಕಳೆದ ತಿಂಗಳು  ಆಂದ್ರಪ್ರದೇಶ ಸರ್ಕಾರ  ಒಂದು ವರ್ಷಕ್ಕೆ  ವಿಸ್ತರಣೆ ಮಾಡಿತ್ತು.  

Read More