ಮೊದಲ ಬಾರಿಗೆ ವಿದೇಶಗಳಲ್ಲಿ ಶ್ರೀ ವೆಂಕಟೇಶ್ವರ ವೈಭವಂ ಆಚರಿಸಲು ಟಿಟಿಡಿ ನಿರ್ಧಾರ.

ಮೊದಲ ಬಾರಿಗೆ ವಿದೇಶಗಳಲ್ಲಿ ಶ್ರೀ ವೆಂಕಟೇಶ್ವರ ವೈಭವಂ ಆಚರಿಸಲು ಟಿಟಿಡಿ ನಿರ್ಧಾರ.

ತಿರುಪತಿ: ಇದೇ ಮೊದಲ ಬಾರಿಗೆ ವಿದೇಶಗಳಲ್ಲಿ ಎರಡು ದಿನಗಳ ಮಟ್ಟಿಗೆ ಶ್ರೀ ವೆಂಕಟೇಶ್ವರ ವೈಭವಂ ಅನ್ನು ಆಚರಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ನಿರ್ಧರಿಸಿದೆ. ಶ್ರೀ ವೆಂಕಟೇಶ್ವರ ವೈಭವಂ ತಿರುಪತಿ ದೇವಸ್ಥಾನದ ಭಕ್ತಿ ಕಾರ್ಯಕ್ರಮ ವಾಗಿದ್ದು ಹಲವು ಕಡೆ ಆಯೋಜಿಸಲಾಗುವ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ದೇವಸ್ಥಾನದ ಟ್ರಸ್ಟ್ ನ ಅಧಿಕಾರಿಗಳು ನಡೆಸಿದ ಭೇಟಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಅನಿವಾಸಿ ಭಾರತೀಯರ ಕೋರಿಕೆಯ ಮೇರೆಗೆ ಯಾವುದಾದರೂ ಶನಿವಾರ ಅಥವಾ ಭಾನುವಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಟ್ರಸ್ಟ್ ನ ಜಂಟಿ ಕಾರ್ಯಕಾರಿ ಅಧಿಕಾರಿ ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆಂದೇ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು ಆಚರಣೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದೇ ಮೊದಲ ಬಾರಿಗೆ ಶ್ರೀ ವೆಂಕಟೇಶ್ವರ ವೈಭವಂ ಅನ್ನು ವಿದೇಶಗಳಲ್ಲಿ ಆಚರಿಸುತ್ತಿರುವುದರಿಂದ ಅಧಿಕಾರಿಗಳಿಗೆ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.  

Read More

ತಿರುಪತಿಗೆ ಹೋಗಿ ಕನ್ನಡ ಮಾತಾಡಿದ್ರೆ ನಿಮಗೆ ಬೇಕಾದ ಮಾಹಿತಿ ಲಭ್ಯ.

ತಿರುಪತಿಗೆ ಹೋಗಿ ಕನ್ನಡ ಮಾತಾಡಿದ್ರೆ ನಿಮಗೆ ಬೇಕಾದ ಮಾಹಿತಿ ಲಭ್ಯ.

ತಿರುಪತಿ: ತಿರುಪತಿ ಬಾಲಾಜಿ ದೇವರನ್ನು ಒಮ್ಮೆಯಾದರೂ ನೋಡಬೇಕೆಂಬುದು ಹಲವರ ಆಸೆ, ಹಾಗೂ ಈ ಆಸೆ ಈಗಿನದ್ದಲ್ಲ ನಮ್ಮ ಹಲವು ತಲೆಮಾರಿನ ಹಿಂದಿನಿಂದಲೂ ಬಹುತೇಕರಿಗೆ ತಿಮ್ಮಪ್ಪನ ಮೇಲೆ ದೈತ್ಯದಷ್ಟು ಭಕ್ತಿ ಇರುತ್ತದೆ. ತಿರುಪತಿಯು ಆಂಧ್ರ ಪ್ರದೆಶದಲ್ಲಿರಬಹುದು. ಆದರೆ ತಿಮ್ಮಪ್ಪ ಕರ್ನಾಟಕದ ಜನರಿಗೂ ಮನೆದೆವರೇ ಅಲ್ಲವೇ. ಇಂದಿಗೂ ಕರ್ನಾಟಕದ ಬಹುಭಾಗದ ಹಾಗೂ ಬಹುತೇಕ ಜನರ ಆರಾಧ್ಯ ದೈವ ತಿಮ್ಮಪ್ಪನೇ. ಹೇಳಿಕೇಳಿ ತಿರುಪತಿ ಭಾರತದ ಅಷ್ಟೇ ಅಲ್ಲದೆ ವಿಶ್ವದಲ್ಲಿಯೇ ಅತಿ ಹೆಚ್ಚು ಭಕ್ತಾದಿಗಳನ್ನು ತನ್ನತ್ತ ಕರೆದೊಯ್ಯುವ ಪುಣ್ಯಕ್ಷೇತ್ರ. ಇಂತಹ ಜನಜಂಗುಳಿಯನ್ನು ನಿಭಾಯಿಸುವುದೆಂದರೆ ಸುಲಭದ ಮಾತೇನು? ಇದೇ ರೀತಿಯ ದೇವಾಲಯಗಳು ಅಂದರೆ ನಮ್ಮ ಧರ್ಮಸ್ಥಳವನ್ನು ಸೇರಿಸಿ ಹೇಳುವುದಾದರೆ ಜನರ ನಿರ್ವಹಣೆಯಲ್ಲಿ ಹಾಗೂ ವ್ಯವಸ್ಥಿತ ನಿಭಾವಣೆಯಲ್ಲಿ ನಮ್ಮ ಅಂತರರಾಷ್ಟ್ರೀಯ ಮಟ್ಟದ ಬಿಸಿನೆಸ್ ಸ್ಕೂಲ್ ಗಳನ್ನೂ ನಾಚಿಸುವಂತಿದೆ. ಒಮ್ಮೆ ತಿರುಪತಿಯ ಜನಜಂಗುಳಿ ನೋಡಿದಾಗ ಎಂಥವರೂ ಬೆರಗಾಗಿ ಹೋಗುವುದು ಸುಳ್ಳಲ್ಲ. ಈ ಮಟ್ಟಿನ ಜನರನ್ನು ನಿಭಾಯಿಸುವುದರಲ್ಲಿ ಬಂದ…

Read More