ನವ ದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯರ ಆರಾಧನೆಯು ನವರಾತ್ರಿಯ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿ ಆರಣೆಯ ಒಂಬತ್ತು ದಿನಗಳ ಒಂದೊಂದು ದಿನದ ಆಚರಣೆಗೆ ಅದರದೇಯಾದ ವಿಶೇಷತೆ ಇದೆ. ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರ ಮೂಲಕ ಆರಂಭ ಮಾಡಲಾಗುತ್ತದೆ. ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ. ನಂತರ ಗೊಂಬೆಗಳನ್ನು, ಶಕ್ತಿ ದೇವತೆಯರನ್ನು ಪ್ರತಿಷ್ಠಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿದೇವತೆಗಳನ್ನು ನಿಯಮ ಬದ್ದವಾಗಿ ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಅಷ್ಟೋತ್ತರಗಳ ಪೂಜೆ ಮಾಡಲಾಗುತ್ತದೆ. ತಿರುಪತಿಯಲ್ಲಿ ಕುಡ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಮೂರು ದಿನಗಳ ಕಾಲ ದೇವಿಯನ್ನು ರೌದ್ರವತಾರದಲ್ಲಿ ಪೂಜಿಸಲಾಗುತ್ತದೆ. ಮೂರನೆಯ ದಿನದಂದು ಮಹಿಷಾಸುರ ಮರ್ದಿನಿ ರೂಪವನ್ನು ಪೂಜಿಸಲಾಗುತ್ತದೆ. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ…
Read MoreCategory: Tirupati News
ವಿವಿಧ ರಾಜ್ಯಗಳಲ್ಲಿ ನವರಾತ್ರಿಯ ಆಚರಣೆ
ಕರ್ನಾಟಕದಲ್ಲಿ ನವರಾತ್ರಿ ಆಚರಣೆ ಹೇಗೆ? ನವರಾತ್ರಿಯ ಸಮಯದಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜಿಯನ್ನು ಸಲ್ಲಿಸಿ ಶಮಿ(ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ದಸರಾ ಆಚರಣೆಯ ಪದ್ದತಿ. ಹತ್ತನೆಯ ದಿನ ಅಂದರೆ ಅಶ್ವಯಜ ಶುದ್ದ ಪ್ರತಿಪದೆಯ ದಿನ ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಬಂಗಾಳದಲ್ಲಿ ನವರಾತ್ರಿಯ ಸಂಭ್ರಮ ಬಂಗಾಳದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ. ದುರ್ಗಾ ಮಾತೆಯ ಒಂಭತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯನ್ನು ಆರಾಧಿಸಲಾಗುತ್ತದೆ. ಷಷ್ಠಿಯಿಂದ ದಶಮಿಯವರೆಗೆ ದುರ್ಗಾದೇವಿಯ ಪೂಜಿಯನ್ನು ಆಚರಿಸಲಾಗುತ್ತದೆ. ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕಾರ ಮಾಡಿ ಅವರಿಗೆ ಪಾದ ಪೂಜೆ ಮಾಡಿ ಮೃಷ್ಟಾನ್ನ ಭೋಜನ ನೀಡುತ್ತಾರೆ. …
Read Moreಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನ
ತಿಮ್ಮಪ್ಪನ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಇನ್ನು ಮುಂದೆ ಬಾಲಾಜಿಯ ದರ್ಶನದ ಜೊತೆಗೆ ವಿನಾಯಕನ ಆಧ್ಯಾತ್ಮಿಕ ವನವನ್ನು ದರ್ಶನ ಮಾಡುವ ಭಾಗ್ಯವು ಲಭಿಸಿದೆ. ಟಿಟಿಡಿಯ ಅರಣ್ಯ ಇಲಾಖೆಯಿಂದ ತಿರುಮಲಾ ಘಾಟ್ನಲ್ಲಿ ಹೊಸ ಆಧ್ಯಾತ್ಮಿಕ ವನವೊಂದನ್ನು ಅಭಿವೃದ್ದಿ ಪಡಿಸಲಾಗಿದೆ. `ವಿನಾಯಕ ವನಂ’ ಎಂಬ ಹೆಸರಿನಲ್ಲಿ ಅಭಿವೃದ್ದಿ ಪಡಿಸಲಾಗಿರುವ ಈ ವನವನ್ನು ಆಲಿಪರಿ ಅರಣ್ಯದ ಬಳಿಯ `ಎಕಾವಷ್ಟಮಿ ಪತ್ರ ವನಂ’ನ ಎರಡನೇ ಘಾಟ್ನ ವಿನಾಯಕ ದೇವಸ್ಥಾನದ ಪಕ್ಕ ನಿರ್ಮಿಸಲಾಗಿದೆ. ಹೊಸದಾಗಿ ಸುಂದರವಾಗಿ ನಿರ್ಮಾಣವಾಗಿರುವ ಈ ವಿನಾಯಕ ವನಂನಲ್ಲಿ 21 ಬಗೆಯ ಪ್ರಮುಖ ವಿಧದ ಎಲೆಗಳಿಂದ ಕಲ್ಪನಾತ್ಮಕವಾಗಿ ಅಭಿವೃದ್ದಿ ಪಡಿಸಲಾಗಿದೆ. 300 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿನಾಯಕ ವನಂ ಶೇಷಾಚಲ ಶ್ರೇಣಿಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವಿಘ್ನನಿವಾರಕ ಗಣೇಶನ ದಿನ ನಿತ್ಯ ಪೂಜೆ, ಗಣೇಶ ಚತುರ್ಥಿಗೆ ವಿನಾಯಕ ವನಂನಲ್ಲಿರುವ ತುಳಸಿ, ವಿಷ್ಣುಕ್ರಾಂತ, ದೇವದಾರು,…
Read Moreತಿರುಪತಿ ಪ್ಯಾಕೇಜ್: ಏನಿದು ನೋಡಿ
ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ ಆರಂಭಿಸಿದ್ದ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಪ್ರಯತ್ನ ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದೆ. ಜೂನ್ 15 ರಿಂದ ಮತ್ತೊಂದು ಬಸ್ ತಿರುಪತಿ ಪ್ಯಾಕೇಜ್ ಟೂರ್ಗೆ ಸೇರ್ಪಡೆಯಾಗಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Read Moreಶ್ರಾವಣ ಪ್ರಯುಕ್ತ ತಿರುಮಲದಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದ ಪ್ರಯುಕ್ತ ತಿರುಮಲದಲ್ಲಿ ನಿನ್ನೆ ಬೆಳಿಗ್ಗೆ ವಿಶೇಷವಾದ ಪೂಜೆ ಪುನಸ್ಕಾರಗಳು ಜರುಗಿದವು. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣನನ್ನು ಕೂರಿಸಿ ವಿವಿಧ 16 ಸ್ಥಳಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಮಾಡುವ ಮೂಲಕ ಆಚರಿಸಿದರು. ಶ್ರೀ ಮಲಯಪ್ಪ ಸ್ವಾಮಿ ಮತ್ತು ಶ್ರೀ ಕೃಷ್ಣ ಉತ್ಸವದಲ್ಲಿ ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ರಾವ್ ಗೋಕುಲಾಷ್ಟಮಿಯ ಹಬ್ಬ ಆಚರಣೆಯ ದೇಶದ ಆರ್ಥಿಕ ಮತ್ತು ಸಾಮಾಜಿಕ ಹಬ್ಬದ ಸಂಕೇತವಾಗಿದ್ದು ಇದೊಂದು ಭಾರತೀಯರ ಪವಿತ್ರ ಹಬ್ಬವಾಗಿದೆಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಟಿಟಿಡಿಯ ಸಿಬ್ಬಂದಿಯೂ ಕೂಡಾ ಹಾಜರಿದ್ದರು.
Read Moreತಿರಪತಿಯ ಗೋ ಸಂರಕ್ಷಣಾ ಶಾಲೆ ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಾರ್ಪಾಡು
ಗೋ ಸಂರಕ್ಷಣಾ ಶಾಲೆಯನ್ನು ರಾಷ್ಟ್ರೀಯ ಗೋ ಸಂಶೋಧನಾ ಕೇಂದ್ರವನ್ನಾಗಿ ಮಾಡಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ಇಂದು ಶ್ರೀ ವೆಂಕಟೇಶ್ವರ ಗೋ ಸಂಕ್ಷರಣೆ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ 23 ಜಿಲ್ಲೆಗಳಲ್ಲಿ ಇಂದು ಗೋಕುಲಾಷ್ಟಮಿಯನ್ನು ಆಚರಿಸುವ ಮೂಲಕ ಇಂತಹ ಹಬ್ಬಗಳು ಹಸುವಿನ ಮಹತ್ವ, ನಮ್ಮ ದೇಶದ ಧಾರ್ಮಿಕ ಸಾಮಾಜಿಕ-ಆರ್ಥಿಕ ಇತಿಹಾಸವನ್ನು ಬಿಂಬಿಸುತ್ತವೆಂದು ಟಿಟಿಡಿಯ ಈಓ ಈ ಸಂದರ್ಭದಲ್ಲಿ ಹೇಳಿದರು. ಹಳ್ಳಿಕಾರ್, ಕಫಿಲ ಗೋವು, ಹರಿಯಾಣ, ಸಾಹಿವಾಲ್ ಮತ್ತು ರತಿ ಇಂತಹ ಹಲವಾರು ತಳಿಯ ಗೋವುಗಳು ಇಲ್ಲಿದ್ದು ಅವುಗಳನ್ನು ಸಂರಕ್ಷಿಸುವ ಜೊತೆಗೆ 75 ಉನ್ನತ ತಳಿಯ ಗೋವುಗಳು ಇಲ್ಲಿವೆ. ಶ್ರಿ ವೆಂಕಟೇಶ್ವರ ಗೋ ಶಾಲೆಯೂ ಪವಿತ್ರ ಹಸುಗಳನ್ನು ಸಂಕ್ಷಿಸುವ ಕೆಲಸವನ್ನುಮಾಡುತ್ತಿದೆ. ಗೋ ಸಂರಕ್ಷಣಾ ಶಾಲೆಗೆ ಇದುವರೆಗೂ 8.1 ಕೋಟಿ ರೂ ದೇಣಿಗೆಯೂ ಕೂಡಾ ಲಭಿಸಿದೆಂದು ಟಿಟಿಡಿಯ ಸಿಬ್ಬಂದಿ ತಿಳಿಸಿದ್ದಾರೆ. ಗೋವಿನ…
Read Moreಶ್ರೀವಾರಿ ದೇವಾಲಯಕ್ಕೆ ಟಿಟಿಡಿಯಿಂದ ಸಹಾಯ
ಶ್ರೀಲಂಕಾದ ಕತ್ರಾದಲ್ಲಿ ನಿರ್ಮಿಸುತ್ತಿರುವ ಶ್ರೀವಾರಿ ದೇವಾಲಯಕ್ಕೆ ತಾಂತ್ರಿಕವಾಗಿ ಎಲ್ಲ ರೀತಿಯ ಸಹಾಯವನ್ನು ಮಾಡುವುದಾಗಿ ಟಿಟಿಡಿಯ ಕಾರ್ಯದರ್ಶಿ ಡಾ.ಚಂದಲವಾಡ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಜರುಗಿದ ಶ್ರೀ ಸುಬ್ರಮ್ಯಣಂಶ್ವೇರ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಟಿಟಿಡಿಯ ಕಾರ್ಯದರ್ಶಿ ಶ್ರೀ ಸುಬ್ರಮ್ಯಣಂಶ್ವೇರ ದೇವಸ್ಥಾನದ ಕಾರ್ಯದರ್ಶಿ ಭೇಟಿಯಾಗಿ ಪರಸ್ಪರ ಮಾತನಾಡಿದರು. ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ವೆಂಕಟೇಶ್ವರ ದೇವಲಾಯಕ್ಕೆ ತಾಂತ್ರಿಕವಾಗಿ ಸಹಾಯ ಮತ್ತು ಪೊತ್ಸಾಹ ಮಾಡಬೇಕೆಂದು ಶ್ರೀ ಸುಬ್ರಮ್ಯಣಂಶ್ವೇರ ದೇವಸ್ಥಾನದ ಕಾರ್ಯದರ್ಶಿ ಡಾ. ಡಿ.ಜೆ.ಕುಮಾರ್ ಟಿಟಿಡಿಯ ಕಾರ್ಯದರ್ಶಿಗಳಿಗೆ ವಿನಂತಿ ಮಾಡಿದರು. ಅದಕ್ಕೆ ಡಾ.ಚಂದಲವಾಡ್ ಸಮ್ಮತಿ ಸೂಚಿಸಿದರು.
Read Moreವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ
ಟಿಟಿಡಿ, ವಿಜಯವಾಡದಲ್ಲಿ ನಿರ್ಮಿಸಿರುವ, ತಿರುಪತಿಯನ್ನೇ ಹೋಲುವ ವೆಂಕಟೇಶ್ವರ ದೇವಾಲಯಕ್ಕೆ ಇಂದು ಗಣ್ಯರು ಭೇಟಿ ಕೊಟ್ಟಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮತ್ತು ಕುಟುಂಬ, ದೇವಾಲಯಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಆಂಧ್ರದ ಕೃಷಿ ಸಚಿವ ಪುಲ್ಲಾ ರಾವ್, ಈ ಸಂದರ್ಭದಲ್ಲಿದ್ದರು. ಇದೇ ವೇಳೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎನ್.ವಿ.ರಮಣ ಅವರು ಕೂಡಾ, ದೇವಾಲಯಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ, ಟಿಟಿಡಿ ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ರಾಜು, ಸುಧಾಕರ್ ರಾವ್, ರಾಜೇಂದ್ರುಡು ಉಪಸ್ಥಿತರಿದ್ದರು.
Read Moreಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ
ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್…
Read Moreತಿರುಪತಿ : ದೇವಾಲಯದ ಮುಂಭಾಗವೇ ವೆಂಕಣ್ಣ ಡಾಲರ್ ಕೌಂಟರ್
ತಿರುಪತಿ ತಿಮ್ಮಪ್ಪನ ಹಚ್ಚೆ ಇರುವ ವೆಂಕಣ್ಣ ಡಾಲರ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗೇ, ಈ ವಿಷಯದಲ್ಲಿ ಭಕ್ತರನ್ನ ಮೋಸ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ, ಖುದ್ದು ಟಿಟಿಡಿ, ಈ ಬಗ್ಗೆ ವಿಶೇಷ ಗಮನ ಕೊಟ್ಟಿದೆ. ತಿಮ್ಮಪ್ಪನ ಹಚ್ಚೆ ಇರುವ ಚಿನ್ನದ, ಬೆಳ್ಳಿ ಹಾಗೂ ಕಂಚಿನ ನಾಣ್ಯಗಳ ಮಾರಾಟವನ್ನು ದೇವಾಲಯದ ಎದುರಿಗೆ ಇರುವ ಬ್ಯಾಂಕ್ ಕೌಂಟರ್ ನಲ್ಲೇ ತೆರೆಯುವಂತೆ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಭಕ್ತರು ಮೋಸ ಹೋಗುವುದು ತಪ್ಪುತ್ತದೆ ಎಂದಿದ್ದಾರೆ. ಜೊತೆಗೆ, ಭಕ್ತರಿಗೆ ಮಾಹಿತಿ ಒದಗಿಸಲು, ಅಲ್ಲಲ್ಲಿ, ಸ್ವಯಂಸೇವಕರನ್ನ ಬಳಸಿಕೊಳ್ಳುವಂತೆಯೂ, ಸಾಂಬಶಿವರಾವ್ ಸೂಚಿಸಿದ್ದಾರೆ.
Read More