ಯಾಜ್ಞವಲ್ಕ್ಯ ಸ್ಮøತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ, ಇನ್ನೊಂದು ಕಥೆಯ ಪ್ರಕಾರ ಗಣೇಶ ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ ಅಂತವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಶಿವನ ಗಣಗಳು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು…
Read MoreCategory: Special Reports
ಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನ
ತಿಮ್ಮಪ್ಪನ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಇನ್ನು ಮುಂದೆ ಬಾಲಾಜಿಯ ದರ್ಶನದ ಜೊತೆಗೆ ವಿನಾಯಕನ ಆಧ್ಯಾತ್ಮಿಕ ವನವನ್ನು ದರ್ಶನ ಮಾಡುವ ಭಾಗ್ಯವು ಲಭಿಸಿದೆ. ಟಿಟಿಡಿಯ ಅರಣ್ಯ ಇಲಾಖೆಯಿಂದ ತಿರುಮಲಾ ಘಾಟ್ನಲ್ಲಿ ಹೊಸ ಆಧ್ಯಾತ್ಮಿಕ ವನವೊಂದನ್ನು ಅಭಿವೃದ್ದಿ ಪಡಿಸಲಾಗಿದೆ. `ವಿನಾಯಕ ವನಂ’ ಎಂಬ ಹೆಸರಿನಲ್ಲಿ ಅಭಿವೃದ್ದಿ ಪಡಿಸಲಾಗಿರುವ ಈ ವನವನ್ನು ಆಲಿಪರಿ ಅರಣ್ಯದ ಬಳಿಯ `ಎಕಾವಷ್ಟಮಿ ಪತ್ರ ವನಂ’ನ ಎರಡನೇ ಘಾಟ್ನ ವಿನಾಯಕ ದೇವಸ್ಥಾನದ ಪಕ್ಕ ನಿರ್ಮಿಸಲಾಗಿದೆ. ಹೊಸದಾಗಿ ಸುಂದರವಾಗಿ ನಿರ್ಮಾಣವಾಗಿರುವ ಈ ವಿನಾಯಕ ವನಂನಲ್ಲಿ 21 ಬಗೆಯ ಪ್ರಮುಖ ವಿಧದ ಎಲೆಗಳಿಂದ ಕಲ್ಪನಾತ್ಮಕವಾಗಿ ಅಭಿವೃದ್ದಿ ಪಡಿಸಲಾಗಿದೆ. 300 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿನಾಯಕ ವನಂ ಶೇಷಾಚಲ ಶ್ರೇಣಿಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವಿಘ್ನನಿವಾರಕ ಗಣೇಶನ ದಿನ ನಿತ್ಯ ಪೂಜೆ, ಗಣೇಶ ಚತುರ್ಥಿಗೆ ವಿನಾಯಕ ವನಂನಲ್ಲಿರುವ ತುಳಸಿ, ವಿಷ್ಣುಕ್ರಾಂತ, ದೇವದಾರು,…
Read Moreದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ
ತಿರುಮಲ: ದೇಶದಲ್ಲಿಯೇ ಪ್ರಥಮ ಬಾರಿಗೆ ತಿರುಮಲದಲ್ಲಿ ಲಂಬವಾದ ಮುರಾಲ್ ಉದ್ಯಾನವನ ನಿರ್ಮಾಣ ಮಾಡಲು ಟಿಟಿಡಿ ತಿರ್ಮಾನ ಕೈಗೊಂಡಿದೆ. ತಿರುಮಲ ದೇವಸ್ಥಾನ ಬಳಿ ಲಂಬ್ ಮುರಾಲ್ ಉದ್ಯಾನವನ ನಿರ್ಮಾಣ. ನವೀನ ಪರಿಕಲ್ಪನೆ ಆಫ್ ಶಿಬಿರಗಳನ್ನು ನಡೆಸಲು ಅನುಕೂಲಕರವಾಗುತ್ತದೆ ಎಂದು ಟಿಟಿಡಿ ಇಒ ಡಾ ಡಿ ಸಾಂಬಶಿವ ರಾವ್ ತಿಳಿಸಿದ್ದಾರೆ. ಈ ಪರಿಕಲ್ಪನಾ ತೋಟಗಳಿಗೆ ಸಂಬಂಧಿಸಿದಂತೆ, ಗಾರ್ಡನ್ ಉಪನಿರ್ದೇಶಕರು ಶ್ರೀ ಶ್ರೀನಿವಾಸಲು ಜೊತೆಗೆ ಟಿಟಿಡಿ ಇ.ಒ ಶುಕ್ರವಾರ ತಿರುಮಲದಲ್ಲಿ ಸೈಟ್ ಪರಿಶೀಲಿಸಿದರು. ಏತನ್ಮಧ್ಯೆ ವರ್ಣರಂಜಿತ ಎಲೆಗಳು ಮತ್ತು ಶ್ರೀವಾರು, ಶಂಖ, ಚಕ್ರ ಮತ್ತು ಆನಂದ ನಿಲಯಂ ಸೇರಿದಂತೆ ಆಧ್ಯಾತ್ಮಿಕ ಪರಿಕಲ್ಪನೆಗಳು ಹೂಗಳು ಒಳಗೊಂಡ ಈ ಅನನ್ಯ ತೋಟಗಳು ತಯಾರಾಗುತ್ತವೆ. ಲೇಪಾಕ್ಷಿ ಮತ್ತು ಫಿಲ್ಟರ್ ಅಪ್ ಶಿಬಿರಗಳು ಮತ್ತು ವಾರ್ಷಿಕ ಬ್ರಹ್ಮೋತ್ಸವ ವಿಶೇಷ ಆಕರ್ಷಣೆಯಾಗಿದೆ. ಮುರಾಲ್ ಉದ್ಯಾನವನ ಈ ತಿಂಗಳ ಕೊನೆಯಲ್ಲಿ ತಯಾರಾಗಬೇಕು. ಬೆಂಗಳೂರು ಮೂಲದ ವಿನ್ಯಾಸ ತಜ್ಞ ದಾನಿ ಶ್ರೀ…
Read More‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು
64 ವರ್ಷಗಳ ಇತಿಹಾಸ ಹೊಂದಿರುವ ಟಿಟಿಡಿಯ ಶ್ರಿ ಪದ್ಮಾವತಿ ಮಹಿಳಾ ಪದವಿ ಮತ್ತು ಸಾತ್ನಕೋತ್ತರ ಕಾಲೇಜ ದಾಖಲೆಯೊಂದನ್ನು ನಿರ್ಮಿಸಿದೆ. ಕಾಲೇಜಿನಲ್ಲಿ ಸತತ 12 ಗಂಟೆಗಳ ಕಾಲ “ಶ್ರೀ ವೈಷ್ಣವ ಭಕ್ತಿ ತತ್ವಂ” ವಿಷಯದ ಕುರಿತಾದ ವಿಷಯ ಮಂಡನೆಯನ್ನು ಆಯೋಜಿಸಲಾಗಿತ್ತು. ಇಂತಹದೊಂದು ಸಾಧನೆಯೂ ಈಗ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಬುಧವಾರಂದು ದಾಖಲಾಗಿದೆಂದು ಕಾಲೇಜಿನ ಅಧಿಕಾರಿ ವರ್ಗದವರೂ ತಿಳಿಸಿದರು. ವಿವಿಧ ವಿಭಾಗಳಿಂದ ಬಂದತ್ತ ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು. ಅದರಲ್ಲಿ ಬಹುಮುಖ್ಯವಾಗಿ ಆಯ್ದುಕೊಂಡ ವಿಷಯಗಳಲ್ಲಿ ರಾಮಾಯಣ, ಭಾರತಂ, ಭಾಗವತಮ್, ರಾಮಾನುಜಾಚಾರ್ಯರು, ಅನ್ನಮಾಚಾರ್ಯರು ಇವುಗಳೇ ಆಗಿದ್ದವು. ಕಾಲೇಜಿನ ಸಿಬ್ಬಂದಿ 200 ಜನರ ಜೊತೆಗೆ ಸಂಶೋಧಕ ವಿದ್ಯಾರ್ಥಿಗಳನ್ನು ಹೊರತುಪಡಿಸಿ 550 ಜನ ಮಹಿಳೆಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ದಾಖಲೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದಲ್ಲದೆ, ಜನರಲ್ಲಿ ಆಧ್ಯಾತ್ಮಿಕ ಜಾನ್ಞವನ್ನು ಬಿತ್ತುವ ಕೆಲಸವನ್ನು ಟಿಟಿಡಿಯ ಮಹಿಳಾ…
Read Moreಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ
ಹರಿಕಥಾ ಪಿತಾಮಹ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣ ದಾಸು ಅವರು ಅಪರೂಪದ 180 ದಾಸವಿಧ ರಂಗ ನವತಿ ಕಸುಮ ಮಂಜರಿ ರಾಗಗಳನ್ನು ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಕಾಣಿಕೆ ಕೊಟ್ಟಿದ್ದಾರೆ. ಇವರ ಕುರಿತಾದ ಇಂತಹದೊಂದು ಸಂಗೀತದ ಕಾರ್ಯಕ್ರವು 84 ವರ್ಷಗಳ ನಂತರ ಮಹತಿ ಸಭಾಂಗಣದಲ್ಲಿ ಬುಧವಾರ ಸಾಯಂಕಾಲ ಜರುಗಿತು. ಹರಿಕಥಾ ವಿದ್ವಾಂಸ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮದಿನ ಅಂಗವಾಗಿ ಎಸ್. ವ್ಹಿ ಸಂಗೀತ ಮತ್ತು ನೃತ್ಯ ಕಾಲೇಜು ವತಿಯಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಮಹಾರಾಣಿ ಕಾಲೇಜಿನ 9 ಜನರ ತಂಡ ಮತ್ತು ಶ್ರೀವ್ ಕಾಂತಮ್ ನಾಗೇಂದ್ರ ಶಾಸ್ತ್ರಿ ಅವರ ನೇತ್ವತೃದಲ್ಲಿ 90 ದಾಸವಿಧ ರಂಗ ನವತಿ ಕಸುವ ಮಂಜರಿಯ ಒಳಗೊಂಡಿರುವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ರಾಗಮಾಲಿಕೆ 90 ರಾಗಗಳನ್ನು ಕಲಾವಿದರು ತಮ್ಮ ಮುಖದ ಅಭಿವ್ಯಕ್ತಿಯ್ನು ಮತ್ತು ನೃತ್ಯದ ಮೂಲಕ ಪ್ರದರ್ಶಿಸಿ…
Read Moreಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ
ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್…
Read Moreಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…
ದಿವ್ಯಾ ದೊಮ್ಮರಾಜು. 14 ವರ್ಷದ ಈಕೆ, ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕಾದಲ್ಲೇ. ಟೆನ್ನಿಸ್ ನಲ್ಲಿ ಇಂಟರ್ ಸ್ಕೂಲ್ ಚಾಂಪಿಯನ್. ಪೇಂಟಿಂಗ್ ನಲ್ಲೂ ದಿವ್ಯಾ, ಒಳ್ಳೇ ಹೆಸರು ಮಾಡಿದ್ದಾಳೆ. ಮುಂದಿನ ತಿಂಗಳು, ದಿವ್ಯಾ ಹತ್ತನೇ ತರಗತಿಗೆ ಎಂಟ್ರಿ ಪಡೆಯುತ್ತಾಳೆ. ಆದ್ರೆ, ದಿವ್ಯಾಗೆ ನಿತ್ಯವೂ ಏನೋ ಕೊರಗು. ತಮ್ಮ ಹುಟ್ಟೂರಿನ ಬಗ್ಗೆ, ಪ್ರತಿದಿನವೂ ಕನಸು, ಅದೇ ಕನವರಿಕೆ. ದಿವ್ಯಾಳ ತಂದೆ ಉದಯ್ ದೊಮ್ಮರಾಜು, ಎಸ್.ವಿ.ಯು ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಬಹಳ ವರ್ಷಗಳ ಹಿಂದೆಯೇ ಅಮೆರಿಕಾಗೆ ಹೋಗಿ ನೆಲೆಸಿದ್ದಾರೆ. ಅಮೆರಿಕಾಗೆ ಹೋದರೂ, ಹುಟ್ಟೂರು ತಿರುಪತಿಯ ನಂಟು ಬಿಟ್ಟಿಲ್ಲ. ಅಮೆರಿಕಾದ ಸಂಸ್ಕೃತಿಯ ನಡುವೆಯೇ ಬೆಳೆದರೂ, ದಿವ್ಯಾಗೆ ಭಾರತೀಯ ಪರಂಪರೆ, ಸಂಪ್ರದಾಯದ ಬಗ್ಗೆ ಅಪಾರ ಗೌರವ. ಹೀಗಾಗೇ, ಅಮೆರಿಕಾದಲ್ಲೇ ಭರತನಾಟ್ಯಂ ಕಲಿತಿದ್ದಾಳೆ. ಅದೆಷ್ಟೇ ಕಷ್ಟವಾದರೂ ಸರಿಯೇ. ತನ್ನ ಭರತನಾಟ್ಯಂ ರಂಗಪ್ರವೇಶ, ತಿರುಪತಿಯಲ್ಲೇ, ಅದೂ ತಿಮ್ಮಪ್ಪನ ಪಾದಾರವಿಂದಗಳಲ್ಲೇ ಆಗಬೇಕು ಎಂಬುದು ದಿವ್ಯಾಳ ಕನಸು. ಮಗಳ…
Read Moreತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?
ಟಿಟಿಡಿ, ಬ್ಯಾಂಕ್ ಗಳಲ್ಲಿ ಮತ್ತಷ್ಟು ಚಿನ್ನ ಠೇವಣಿ ಹೂಡಿಕೆಗೆ, ಮುಂದಾಗಿದೆ. ಸದ್ಯಕ್ಕೆ ಒಂದು ಸಾವಿರ ಕೆ.ಜಿ. ಚಿನ್ನವನ್ನ ಠೇವಣಿಯಾಗಿಡಲು ಟಿಟಿಡಿ ಸಿದ್ದವಾಗಿದೆ. ಆದ್ರೆ, ಬ್ಯಾಂಕ್ ಗಳೇ ಮುಂದೆ ಬರುತ್ತಿಲ್ಲ. ಟಿಟಿಡಿಯ ಠೇವಣಿ ಇಟ್ಟ ಚಿನ್ನಕ್ಕೆ, ಅದರ ಬೇಡಿಕೆಯಂತೆಯೇ, ಬಡ್ಡಿ ನೀಡಬೇಕಿದೆ. ಇದು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತಿಲ್ಲ. ಈಗ ಮತ್ತೆ ಒಂದು ಸಾವಿರ ಕೆ.ಜಿ.ಚಿನ್ನದ ಠೇವಣಿ ಇಡಲು ಟಿಟಿಡಿ ಮುಂದಾಗಿದೆಯಾದ್ರೂ, ಬ್ಯಾಂಕ್ ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಹಿರಿಯ ಅಧಿಕಾರಿಗಳು, ಬ್ಯಾಂಕ್ ಗಳ ಉನ್ನತಾಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಅವರಿಂದ, ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ಇನ್ನೆರಡು ತಿಂಗಳಿನಲ್ಲಿ, ಟಿಟಿಡಿ ಅಕೌಂಟ್ ಗೆ ಮತ್ತೆ 400 ( ನಾಲ್ಕು ನೂರು ) ಕೆ.ಜಿ. ಚಿನ್ನ ಸಂಗ್ರಹವಾಗಲಿದೆ. ಈಗ, ಇಷ್ಟೊಂದು ಅಪಾರ ಪ್ರಮಾಣದ ಚಿನ್ನವನ್ನ ಠೇವಣಿ ಇಡುವುದೇ, ಟಿಟಿಡಿಗೆ ಪ್ರಯಾಸದ…
Read Moreತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್
ಇನ್ನು, ಕೆಲವೇ ಕೆಲವು ದಿನಗಳಷ್ಟೇ. ತಿರುಪತಿಯ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯಲಿವೆ. ದುಬೈನಿಂದ ತಿರುಪತಿ, ತಿರುಪತಿಯಿಂದ ದುಬೈ ಹಾಗೂ ಯೂರೋಪ್ ರಾಷ್ಟ್ರಗಳಿಗೆ ನೇರ ವಿಮಾನಯಾನ ಏರ್ಪಡಲಿದೆ. ಜೊತೆಗೆ, ಅಮೆರಿಕಾದಿಂದಲೂ ತಿರುಪತಿಗೆ ನೇರ ವಿಮಾನ ಹಾರಾಟಕ್ಕೂ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ, ತಿರುಪತಿ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್, ಇಮಿಗ್ರಷನ್ ವಿಭಾಗ ಸೇರಿದಂತೆ, ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ನೇಮಕ ಹಾಗೂ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿರಬೇಕಾದ ಸವಲತ್ತುಗಳನ್ನ ಒದಗಿಸಿದ ಬಳಿಕ, ವಿದೇಶೀ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ.
Read Moreತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ
ಸತತ ನಾಲ್ಕು ದಿನ ರಜೆ. ನಿನ್ನೆ ಶುಕ್ರವಾರದಿಂದಲೇ, ತಿರುಪತಿಗೆ ಭಕ್ತ ಸಾಗರ ಹರಿದು ಬರುತ್ತಿದೆ. ನಿನ್ನೆ, ಶುಕ್ರವಾರ, ವರ ಮಹಾಲಕ್ಷ್ಮಿ ವ್ರತ. ತಿರುಚನೂರ್ ನ ಪದ್ಮಾವತಿ ಅಮ್ಮ ಸನ್ನಿಧಿಗೆ ಅಪಾರ ಭಕ್ತಸ್ತೋಮ ಆಗಮಿಸಿತ್ತು. ಇಂದೂ ಕೂಡಾ, ಭಕ್ತರ ಸಂಖ್ಯೆ ಬಹಳ. ಇಂದು ಶನಿವಾರವಾದ್ದರಿಂದ, ಸಹಜವಾಗೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ. ಅದಲ್ಲದೇ, ಇಂದೂ ಕೂಡಾ ಸರ್ಕಾರಿ ರಜೆ. ನಾಳೆ ಭಾನುವಾರ, ನಾಳಿದ್ದು ಸೋಮವಾರ ಸ್ವಾತಂತ್ರ್ಯೋತ್ಸವ. ಹೀಗಾಗಿ, ತಿರುಪತಿಗೆ ಭೇಟಿ ಕೊಡುವವರ ಭಕ್ತರ ಸಂಖ್ಯೆ ದಿನಕ್ಕೆ ಒಂದೂವರೆ ಲಕ್ಷ ದಾಟಿದೆ. ಮೊದಲೇ ನಿರ್ಧರಿಸಿದಂತೆ, ತಿರುಪತಿಯಲ್ಲಿ, ಟಿಟಿಡಿ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗೆ, ವಸತಿ ತೊಂದರೆ ಆಗದಂತೆ ನಿಗಾ ವಹಿಸಿದೆ. ತಿಮ್ಮಪ್ಪನ ದರ್ಶನ ಪಡೆದ ಭಕ್ತರು, ಅಂದಿನ ದಿನವೇ, ವಸತಿ ಖಾಲಿ ಮಾಡಿ, ಇತರೇ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ಟಿಟಿಡಿ ಮನವಿಗೆ, ಭಕ್ತಸ್ತೋಮ ಸ್ಪಂದಿಸಿದೆ. ಜೊತೆಗೆ, ತಿರುಪತಿ ಹಾಗೂ ತಿರುಮಲದಲ್ಲಿ ಆರೋಗ್ಯ…
Read More