ನವ ದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯರ ಆರಾಧನೆಯು ನವರಾತ್ರಿಯ ವೈಶಿಷ್ಯತೆಗಳಲ್ಲಿ ಒಂದು. ನವರಾತ್ರಿ ಆರಣೆಯ ಒಂಬತ್ತು ದಿನಗಳ ಒಂದೊಂದು ದಿನದ ಆಚರಣೆಗೆ ಅದರದೇಯಾದ ವಿಶೇಷತೆ ಇದೆ. ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರ ಮೂಲಕ ಆರಂಭ ಮಾಡಲಾಗುತ್ತದೆ. ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಹಚ್ಚುತ್ತಾರೆ. ನಂತರ ಗೊಂಬೆಗಳನ್ನು, ಶಕ್ತಿ ದೇವತೆಯರನ್ನು ಪ್ರತಿಷ್ಠಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿದೇವತೆಗಳನ್ನು ನಿಯಮ ಬದ್ದವಾಗಿ ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಅಷ್ಟೋತ್ತರಗಳ ಪೂಜೆ ಮಾಡಲಾಗುತ್ತದೆ. ತಿರುಪತಿಯಲ್ಲಿ ಕುಡ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೊದಲ ಮೂರು ದಿನಗಳ ಕಾಲ ದೇವಿಯನ್ನು ರೌದ್ರವತಾರದಲ್ಲಿ ಪೂಜಿಸಲಾಗುತ್ತದೆ. ಮೂರನೆಯ ದಿನದಂದು ಮಹಿಷಾಸುರ ಮರ್ದಿನಿ ರೂಪವನ್ನು ಪೂಜಿಸಲಾಗುತ್ತದೆ. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ…
Read MoreCategory: TTD
ವಿವಿಧ ರಾಜ್ಯಗಳಲ್ಲಿ ನವರಾತ್ರಿಯ ಆಚರಣೆ
ಕರ್ನಾಟಕದಲ್ಲಿ ನವರಾತ್ರಿ ಆಚರಣೆ ಹೇಗೆ? ನವರಾತ್ರಿಯ ಸಮಯದಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯ ಒಂಭತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ ಹತ್ತನೇಯ ದಿನ ಶಮಿವೃಕ್ಷಕ್ಕೆ ಪೂಜಿಯನ್ನು ಸಲ್ಲಿಸಿ ಶಮಿ(ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ದಸರಾ ಆಚರಣೆಯ ಪದ್ದತಿ. ಹತ್ತನೆಯ ದಿನ ಅಂದರೆ ಅಶ್ವಯಜ ಶುದ್ದ ಪ್ರತಿಪದೆಯ ದಿನ ಮೈಸೂರಿನಲ್ಲಿ ಇರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಬಂಗಾಳದಲ್ಲಿ ನವರಾತ್ರಿಯ ಸಂಭ್ರಮ ಬಂಗಾಳದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ. ದುರ್ಗಾ ಮಾತೆಯ ಒಂಭತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಗೌರಿ ಮತ್ತು ಸಿದ್ದಿರಾತ್ರಿಯನ್ನು ಆರಾಧಿಸಲಾಗುತ್ತದೆ. ಷಷ್ಠಿಯಿಂದ ದಶಮಿಯವರೆಗೆ ದುರ್ಗಾದೇವಿಯ ಪೂಜಿಯನ್ನು ಆಚರಿಸಲಾಗುತ್ತದೆ. ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕಾರ ಮಾಡಿ ಅವರಿಗೆ ಪಾದ ಪೂಜೆ ಮಾಡಿ ಮೃಷ್ಟಾನ್ನ ಭೋಜನ ನೀಡುತ್ತಾರೆ. …
Read Moreಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನಆಧ್ಯಾತ್ಮಿಕತೆಗೆ ತಿರುಪತಿಯಲ್ಲಿ ವಿನಾಯಕ ವನ
ತಿಮ್ಮಪ್ಪನ ದರ್ಶನಕ್ಕೆ ಹೋದ ಭಕ್ತಾದಿಗಳಿಗೆ ಇನ್ನು ಮುಂದೆ ಬಾಲಾಜಿಯ ದರ್ಶನದ ಜೊತೆಗೆ ವಿನಾಯಕನ ಆಧ್ಯಾತ್ಮಿಕ ವನವನ್ನು ದರ್ಶನ ಮಾಡುವ ಭಾಗ್ಯವು ಲಭಿಸಿದೆ. ಟಿಟಿಡಿಯ ಅರಣ್ಯ ಇಲಾಖೆಯಿಂದ ತಿರುಮಲಾ ಘಾಟ್ನಲ್ಲಿ ಹೊಸ ಆಧ್ಯಾತ್ಮಿಕ ವನವೊಂದನ್ನು ಅಭಿವೃದ್ದಿ ಪಡಿಸಲಾಗಿದೆ. `ವಿನಾಯಕ ವನಂ’ ಎಂಬ ಹೆಸರಿನಲ್ಲಿ ಅಭಿವೃದ್ದಿ ಪಡಿಸಲಾಗಿರುವ ಈ ವನವನ್ನು ಆಲಿಪರಿ ಅರಣ್ಯದ ಬಳಿಯ `ಎಕಾವಷ್ಟಮಿ ಪತ್ರ ವನಂ’ನ ಎರಡನೇ ಘಾಟ್ನ ವಿನಾಯಕ ದೇವಸ್ಥಾನದ ಪಕ್ಕ ನಿರ್ಮಿಸಲಾಗಿದೆ. ಹೊಸದಾಗಿ ಸುಂದರವಾಗಿ ನಿರ್ಮಾಣವಾಗಿರುವ ಈ ವಿನಾಯಕ ವನಂನಲ್ಲಿ 21 ಬಗೆಯ ಪ್ರಮುಖ ವಿಧದ ಎಲೆಗಳಿಂದ ಕಲ್ಪನಾತ್ಮಕವಾಗಿ ಅಭಿವೃದ್ದಿ ಪಡಿಸಲಾಗಿದೆ. 300 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿನಾಯಕ ವನಂ ಶೇಷಾಚಲ ಶ್ರೇಣಿಗಳ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ವಿಘ್ನನಿವಾರಕ ಗಣೇಶನ ದಿನ ನಿತ್ಯ ಪೂಜೆ, ಗಣೇಶ ಚತುರ್ಥಿಗೆ ವಿನಾಯಕ ವನಂನಲ್ಲಿರುವ ತುಳಸಿ, ವಿಷ್ಣುಕ್ರಾಂತ, ದೇವದಾರು,…
Read Moreದೇಶದಲ್ಲಿಯೇ ಪ್ರಥಮ ಮುರಾಲ್ ಉದ್ಯಾನವನ
ತಿರುಮಲ: ದೇಶದಲ್ಲಿಯೇ ಪ್ರಥಮ ಬಾರಿಗೆ ತಿರುಮಲದಲ್ಲಿ ಲಂಬವಾದ ಮುರಾಲ್ ಉದ್ಯಾನವನ ನಿರ್ಮಾಣ ಮಾಡಲು ಟಿಟಿಡಿ ತಿರ್ಮಾನ ಕೈಗೊಂಡಿದೆ. ತಿರುಮಲ ದೇವಸ್ಥಾನ ಬಳಿ ಲಂಬ್ ಮುರಾಲ್ ಉದ್ಯಾನವನ ನಿರ್ಮಾಣ. ನವೀನ ಪರಿಕಲ್ಪನೆ ಆಫ್ ಶಿಬಿರಗಳನ್ನು ನಡೆಸಲು ಅನುಕೂಲಕರವಾಗುತ್ತದೆ ಎಂದು ಟಿಟಿಡಿ ಇಒ ಡಾ ಡಿ ಸಾಂಬಶಿವ ರಾವ್ ತಿಳಿಸಿದ್ದಾರೆ. ಈ ಪರಿಕಲ್ಪನಾ ತೋಟಗಳಿಗೆ ಸಂಬಂಧಿಸಿದಂತೆ, ಗಾರ್ಡನ್ ಉಪನಿರ್ದೇಶಕರು ಶ್ರೀ ಶ್ರೀನಿವಾಸಲು ಜೊತೆಗೆ ಟಿಟಿಡಿ ಇ.ಒ ಶುಕ್ರವಾರ ತಿರುಮಲದಲ್ಲಿ ಸೈಟ್ ಪರಿಶೀಲಿಸಿದರು. ಏತನ್ಮಧ್ಯೆ ವರ್ಣರಂಜಿತ ಎಲೆಗಳು ಮತ್ತು ಶ್ರೀವಾರು, ಶಂಖ, ಚಕ್ರ ಮತ್ತು ಆನಂದ ನಿಲಯಂ ಸೇರಿದಂತೆ ಆಧ್ಯಾತ್ಮಿಕ ಪರಿಕಲ್ಪನೆಗಳು ಹೂಗಳು ಒಳಗೊಂಡ ಈ ಅನನ್ಯ ತೋಟಗಳು ತಯಾರಾಗುತ್ತವೆ. ಲೇಪಾಕ್ಷಿ ಮತ್ತು ಫಿಲ್ಟರ್ ಅಪ್ ಶಿಬಿರಗಳು ಮತ್ತು ವಾರ್ಷಿಕ ಬ್ರಹ್ಮೋತ್ಸವ ವಿಶೇಷ ಆಕರ್ಷಣೆಯಾಗಿದೆ. ಮುರಾಲ್ ಉದ್ಯಾನವನ ಈ ತಿಂಗಳ ಕೊನೆಯಲ್ಲಿ ತಯಾರಾಗಬೇಕು. ಬೆಂಗಳೂರು ಮೂಲದ ವಿನ್ಯಾಸ ತಜ್ಞ ದಾನಿ ಶ್ರೀ…
Read More‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು
64 ವರ್ಷಗಳ ಇತಿಹಾಸ ಹೊಂದಿರುವ ಟಿಟಿಡಿಯ ಶ್ರಿ ಪದ್ಮಾವತಿ ಮಹಿಳಾ ಪದವಿ ಮತ್ತು ಸಾತ್ನಕೋತ್ತರ ಕಾಲೇಜ ದಾಖಲೆಯೊಂದನ್ನು ನಿರ್ಮಿಸಿದೆ. ಕಾಲೇಜಿನಲ್ಲಿ ಸತತ 12 ಗಂಟೆಗಳ ಕಾಲ “ಶ್ರೀ ವೈಷ್ಣವ ಭಕ್ತಿ ತತ್ವಂ” ವಿಷಯದ ಕುರಿತಾದ ವಿಷಯ ಮಂಡನೆಯನ್ನು ಆಯೋಜಿಸಲಾಗಿತ್ತು. ಇಂತಹದೊಂದು ಸಾಧನೆಯೂ ಈಗ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಬುಧವಾರಂದು ದಾಖಲಾಗಿದೆಂದು ಕಾಲೇಜಿನ ಅಧಿಕಾರಿ ವರ್ಗದವರೂ ತಿಳಿಸಿದರು. ವಿವಿಧ ವಿಭಾಗಳಿಂದ ಬಂದತ್ತ ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು. ಅದರಲ್ಲಿ ಬಹುಮುಖ್ಯವಾಗಿ ಆಯ್ದುಕೊಂಡ ವಿಷಯಗಳಲ್ಲಿ ರಾಮಾಯಣ, ಭಾರತಂ, ಭಾಗವತಮ್, ರಾಮಾನುಜಾಚಾರ್ಯರು, ಅನ್ನಮಾಚಾರ್ಯರು ಇವುಗಳೇ ಆಗಿದ್ದವು. ಕಾಲೇಜಿನ ಸಿಬ್ಬಂದಿ 200 ಜನರ ಜೊತೆಗೆ ಸಂಶೋಧಕ ವಿದ್ಯಾರ್ಥಿಗಳನ್ನು ಹೊರತುಪಡಿಸಿ 550 ಜನ ಮಹಿಳೆಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ದಾಖಲೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದಲ್ಲದೆ, ಜನರಲ್ಲಿ ಆಧ್ಯಾತ್ಮಿಕ ಜಾನ್ಞವನ್ನು ಬಿತ್ತುವ ಕೆಲಸವನ್ನು ಟಿಟಿಡಿಯ ಮಹಿಳಾ…
Read Moreಭಕ್ತರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್
ತಿರಚನೂರ ಶ್ರೀ ಪದ್ಮಾವತಿ ಅಮ್ಮವನವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅರ್ಜಿತ ಸೇವಾ ಸಮಿತಿ ಸುಲಭವಾಗಿ ತಿರುಮಲದದಲ್ಲಿ ಸೇವಾ ಟಿಕೆಟ್ ನ್ನು ನೀಡುವ ವ್ಯವಸ್ಥೆ ಮಾಡಲಾಗಿದೆಂದು ಟಿಟಿಡಿಯ ಜೆ.ಇ.ಒ ಶ್ರೀ ಪಿ ಬಾಸ್ಕರ್ ಹೇಳಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವಾ ಟಿಕೆಟ್ ವಿತರಣೆ ಮತ್ತು ಮಾಹಿತಿಯನ್ನು ನೀಡಲು ಅಲ್ಲಲ್ಲಿ ಕೌಂಟರ್ ಗಳನ್ನು ತೆರೆಯಲಾಗಿದೆ. ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ನೀಡುವಲ್ಲಿ ನಮ್ಮ ಟಿಟಿಡಿಯ ಸಿಬ್ಬಂದಿಯೂ ಕಾರ್ಯ ಮಾಡುತ್ತಿದ್ದಾರೆಂದು ಟಿಟಿಡಿಯ ಅಧಿಕಾರಿ ತಿಳಿಸಿದರು. ಕೌಂಟರ್ ನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸೂಚನಾ ಮಾಹಿತಿ ಫಲಕಗಳನ್ನು ಕೂಡಾ ಅಳವಡಿಸಿದ್ದಾರೆ. ಟಿಟಿಡಿಯ ಅಧಿಕಾರಿ ಶ್ರೀ ಸಿ. ರಮಣ, ಆಡಳಿತಾಧಿಕಾರಿ ಶ್ರೀ ರವಿ ಪ್ರಸಾದ್, ಶ್ರೀ ವೇಣುಗೋಪಾಲ ಎನ್, ಶ್ರೀ ರಾಮಕೃಷ್ಣ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Read Moreತೆಲಗು ನಾಡಿನ ಹೆಮ್ಮೆ: ಅಜ್ಜದ ಆಧಿಭಟ್ಲಾ ನಾರಾಯಣದಾಸು
ಹರಿಕಥಾ ವಿದ್ವಾಂಸ ಅಜ್ಜದ ಆಧಿಭಟ್ಲಾ ನಾರಾಯಣದಾಸು ಅವರ 152 ನೇ ಜನ್ನದಿನದ ವಾರ್ಷಿಕೋತ್ಸವ ಸೋಮವಾರ ಸಾಯಂಕಾಲ ಮಹತಿ ಸಭಾಂಗಣದಲ್ಲಿ ಆಚರಣೆ ಮಾಡುವ ಮೂಲಕ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು. ಹರಿಕಥಾ ಪಿತಾಮಹ ಅಜ್ಜದ ಆಧಿಭಟ್ಲಾ ನಾರಾಯಣದಾಸುವರು ತೆಲುಗು, ಸಂಸ್ಕೃತ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್ ಇತ್ಯಾದಿ ಮತ್ತು ಕವನ, ಸಂಗೀತ, ಭಾಷಾಶಾಸ್ತ್ರ, ತತ್ವಶಾಸ್ತ್ರ ಮತ್ತು ನೃತ್ಯ ಸೇರಿದಂತೆ ಎಂಟು ಭಾಷೆಗಳಲ್ಲಿ ಸಾಧನೆ ಮಾಡಿದ ಬಹುಮುಖಿ ಪ್ರತಿಭೆಯ. ಅವರು ನಿಸ್ಸಂದೇಹವಾಗಿ ನಮ್ಮ ತೆಲಗು ನಾಡಿನ ಹೆಮ್ಮೆ ಎಂದು ಕಾರ್ಯಕ್ರಮದ ಸಂಯೋಕರಾದ ತೆರಿಗೊಂಡ ವೆಂಬಬಾಬು ಮಾತನಾಡಿದರು. ಗುಂಟೂರು ಸರ್ಕಾರದ ಪದವಿ ಕಾಲೇಜ್ ಪ್ರಾಂಶುಪಾಲ ಡಾ ನಾಗಲಕ್ಷ್ಮೀ ಹರಿಕಥಾ ಬಗ್ಗೆ ಕುರಿತು ಮಾತನಾಡಿದರು. ಎಸ್.ವಿ.ಮೂಸಿಕ್ಯ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ವಾಯ್.ವ್ಹಿ.ಎಸ್.ಪದ್ಮಾವತಿ, ಸಹ ಪ್ರಾಧ್ಯಾಪಕರಾದ ಚಲ್ಲಾ ಪ್ರಭಾವತಿ, ಶ್ರೀ ಸುಧಾಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Read Moreಕೃಷ್ಣ ಪುಷ್ಕರ್ ದಲ್ಲಿ ಉತ್ತಮ ವೈದಕೀಯ ಸೇವೆ
ಟಿಟಿಡಿ ರನ್ ಎಸ್.ವಿ. ಆಯುರ್ವೇದ ಆಸ್ಪತ್ರೆಯಲ್ಲಿ ಇತ್ತೀಚಿನ ಕೃಷ್ಣ ಪುಷ್ಕರ್ ಸಂದರ್ಭದಲ್ಲಿ ವಿಜಯವಾಡ ಲಾರ್ಡ್ ಪ್ರಕೃತಿ ಟೆಂಪಲ್ ಭೇಟಿ ನೀಡಿದ ಭಕ್ತರಿಗೆ ಉತ್ತಮವಾದ ವೈದ್ಯಕೀಯ ಸೇವೆಗಳುನ್ನು ನೀಡುವ ಮೂಲಕ ಗಮನ ಸೆಳೆಯಿತು. ಉಚಿತವಾಗಿ ಔಷದ ವಿತರಣೆ ಮತ್ತು ವೈದಕೀಯ ಸಲಹೆಗಳನ್ನು ನೀಡಲಾಗಿದೆ. ಬಂದಿರುವ 9211 ಭಕ್ತರಿಗೂ ಸೇವೆಯನ್ನು ನೀಡಿದ್ದೇವೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ ವಿ ಪಾರ್ವತಿ ದೇವಿ, ತಿಳಿಸಿದರು. ಹಿರಿಯ ವೈದ್ಯಾಧಿಕಾರಿ ಡಾ. ವಾವರ್ತಿ ದೇವಿ ಮತ್ತು ಡಾ.ಆರ್ ರವೀಂದ್ರ ಕುಮಾರ್, ಡಾ.ಜಿ ಪದ್ಮಾವತಿ ಹಾಗೂ ಶುಶ್ರೂಷಾ ತಂಡ ಪುಷ್ಕರ್ ಸಂದರ್ಭದಲ್ಲಿ ವೈದಕೀಯ ಸೇವೆಯನ್ನು ಒದಗಿಸಿದವು.
Read Moreವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ
ಟಿಟಿಡಿ, ವಿಜಯವಾಡದಲ್ಲಿ ನಿರ್ಮಿಸಿರುವ, ತಿರುಪತಿಯನ್ನೇ ಹೋಲುವ ವೆಂಕಟೇಶ್ವರ ದೇವಾಲಯಕ್ಕೆ ಇಂದು ಗಣ್ಯರು ಭೇಟಿ ಕೊಟ್ಟಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮತ್ತು ಕುಟುಂಬ, ದೇವಾಲಯಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಆಂಧ್ರದ ಕೃಷಿ ಸಚಿವ ಪುಲ್ಲಾ ರಾವ್, ಈ ಸಂದರ್ಭದಲ್ಲಿದ್ದರು. ಇದೇ ವೇಳೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎನ್.ವಿ.ರಮಣ ಅವರು ಕೂಡಾ, ದೇವಾಲಯಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ, ಟಿಟಿಡಿ ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ರಾಜು, ಸುಧಾಕರ್ ರಾವ್, ರಾಜೇಂದ್ರುಡು ಉಪಸ್ಥಿತರಿದ್ದರು.
Read Moreತಿರುಪತಿ : ದೇವಾಲಯದ ಮುಂಭಾಗವೇ ವೆಂಕಣ್ಣ ಡಾಲರ್ ಕೌಂಟರ್
ತಿರುಪತಿ ತಿಮ್ಮಪ್ಪನ ಹಚ್ಚೆ ಇರುವ ವೆಂಕಣ್ಣ ಡಾಲರ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗೇ, ಈ ವಿಷಯದಲ್ಲಿ ಭಕ್ತರನ್ನ ಮೋಸ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ, ಖುದ್ದು ಟಿಟಿಡಿ, ಈ ಬಗ್ಗೆ ವಿಶೇಷ ಗಮನ ಕೊಟ್ಟಿದೆ. ತಿಮ್ಮಪ್ಪನ ಹಚ್ಚೆ ಇರುವ ಚಿನ್ನದ, ಬೆಳ್ಳಿ ಹಾಗೂ ಕಂಚಿನ ನಾಣ್ಯಗಳ ಮಾರಾಟವನ್ನು ದೇವಾಲಯದ ಎದುರಿಗೆ ಇರುವ ಬ್ಯಾಂಕ್ ಕೌಂಟರ್ ನಲ್ಲೇ ತೆರೆಯುವಂತೆ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಭಕ್ತರು ಮೋಸ ಹೋಗುವುದು ತಪ್ಪುತ್ತದೆ ಎಂದಿದ್ದಾರೆ. ಜೊತೆಗೆ, ಭಕ್ತರಿಗೆ ಮಾಹಿತಿ ಒದಗಿಸಲು, ಅಲ್ಲಲ್ಲಿ, ಸ್ವಯಂಸೇವಕರನ್ನ ಬಳಸಿಕೊಳ್ಳುವಂತೆಯೂ, ಸಾಂಬಶಿವರಾವ್ ಸೂಚಿಸಿದ್ದಾರೆ.
Read More