ಬ್ರಹ್ಮತ್ಸೋವ ಪೂರ್ವ ಸಿದ್ಧತೆ

ಬ್ರಹ್ಮತ್ಸೋವ ಪೂರ್ವ ಸಿದ್ಧತೆ

ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದ ವಿತರಣೆಯಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಟಿಟಿಡಿ ಸಿಬ್ಬಂದಿಗೆ ಇಓ ಸಾಂಬಶಿವ ಹೇಳಿದರು. ಬ್ರಹ್ಮತ್ಸೋವದ ಆರಂಭಕ್ಕೂ ಮುನ್ನವೇ ಟಿಟಿಡಿಯ ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದ ಕೆಲಸಗಳತ್ತ ಗಮನಕೊಡಬೇಕು, ಇನ್ನುಳಿಂದತೆ ಕಟ್ಟಡ , ವಿದುತ್ಯ್ ಹೀಗೆ ಇವೆಲ್ಲ ಕಾರ್ಯಗಳು ಬೇಗನೆ ಮುಗಿಯಬೇಕೆಂದು ಅಧಿಕಾರಿಗಳು ಕರೆ ನೀಡಿದರು. ಭಕ್ತರಿಗೆ ಅನುಕೂಲವಾಗುವ ಹಾಗೇ ಲಡ್ಡು ಕೌಂಟರ್ ಗಳನ್ನು ನಿರ್ಮಾಣ ಮಾಡುವುದಕ್ಕೆ, ಆದಷ್ಟು ಬೇಗನೆ ಸಿಬ್ಬಂದಿಯೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದೆಂದು ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದರು. ಅಕ್ಟೋಬರ್ ನಲ್ಲಿ ನಡೆಯಲಿರರುವ ವಾರ್ಷಿಕ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪತ್ರಿದಿನ ಲಡ್ಡುಗಳನ್ನು ನೀಡವುದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಲಡ್ಡುಗಳನ್ನು ತಯಾರಿಸಲಾಗಿದೆಂದು ಟಿಟಿಡಿಯ ಈಒ ಸಾಂಬಶಿವ ಹೇಳಿದರು. ಲಗೇಜ್ ಕೌಟಂರ್ ಗಳನ್ನು ಹೆಚ್ಚಿಸುವುದಲ್ಲದೆ, ಮೂಲಭೂತವಾದ ಎಲ್ಲಾ ಅವಶ್ಯಕತೆಗಳನ್ನು ಕಲ್ಪಿಸುವುದಾಗಿ ಟಿಟಿಡಿಯ ಸಿಬ್ಬಂದಿ ಸೃಷ್ಟಪಡಿಸಿದೆ.

Read More

ಉತ್ತಮ ಸೇವೆಗೆ ಹೆಚ್ಚಿನ ಆದ್ಯತೆ : ಟಿಟಿಡಿ

ಉತ್ತಮ ಸೇವೆಗೆ ಹೆಚ್ಚಿನ ಆದ್ಯತೆ : ಟಿಟಿಡಿ

ಟಿಟಿಡಿಗೆ ಭೇಟಿ ನೀಡುವ ಯಾತ್ರಿಕರು ಬಹುಸಂಖ್ಯೆಯಿಂದ ಕೂಡಿದ್ದು, ಆದ್ದರಿಂದ ಅತ್ಯುತ್ತಮ ಸೇವೆಗಳನ್ನು ಒದಗಿಸುವಲ್ಲಿ ಯಾವಾಗಲೂ ಟಿಟಿಡಿಯ ಕಾರ್ಯ ಮಾಡುತ್ತದೆಂದು ಡಾ.ಸಾಂಬಶಿವ ಹೇಳಿದರು. ದಿವ್ಯ ದರ್ಶನಕ್ಕಾಗಿ ಆಗಮಿಸುವ ಯಾತ್ರಿಗಳಿಗೆ ಉಚಿತ ಪ್ರವಾಸಿ ಮಂದಿರ ಕಲ್ಪಿಸುವ ಮೂಲಕ ಯಾತ್ರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವು ಮೂಲಕ ವಾರ್ಷಿಕ ಬ್ರಹೋತ್ಸವಕ್ಕೆ ಬರುವ ಭಕ್ತ ಸಮೂಹಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನ ಮಾಡಲಾಗಿದೆಂದು ಮಾಧ್ಯಮಗಳಿಗೆ ಟಿಟಿಡಿಯ ಅಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರಿ ಕೋದಂಡ ರಾಮ ರಾವ್, ಶ್ರೀ ರಾಮಚಂದ್ರ ರೆಡ್ಡಿ, ಶ್ರೀ ರವೀಂದ್ರ ರೆಡ್ಡಿ, ಆರೋಗ್ಯ ಅಧಿಕಾರಿ ಡಾ ಶಮಿರ್ತಾ ಉಪಸ್ಥಿತರಿದ್ದರು.

Read More

ಬರ್ಮಿಂಗ್ ಹ್ಯಾಮ್ ನಲ್ಲಿ ಬಾಲಾಜಿ ರಥೋತ್ಸವ

ಬರ್ಮಿಂಗ್ ಹ್ಯಾಮ್ ನಲ್ಲಿ ಬಾಲಾಜಿ ರಥೋತ್ಸವ

ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಈಗ ಹಬ್ಬದ ಸಡಗರ. ಬ್ರಿಟನ್ ಭಾರತೀಯರೆಲ್ಲರೂ ಒಂದೆಡೆ ಸೇರಿ, ಹಬ್ಬ ಆಚರಿಸುತ್ತಿದ್ದಾರೆ. ಆಗಸ್ಟ್ 4ರಿಂದಲೇ ಬಾಲಾಜಿ ಬ್ರಹ್ಮೋತ್ಸವಂ ನಡೆಯುತ್ತಿದೆ. ಆಗಸ್ಟ್ 7 ರವರೆಗೂ ಈ ಉತ್ಸವ ನಡೆಯಲಿದೆ. ಬ್ರಿಟನ್ ನಲ್ಲಿರುವ ಭಾರತೀಯರು, ಬ್ರಹ್ಮೋತ್ಸವಂನಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ, ಬಾಲಾಜಿ ಕಲ್ಯಾಣೋತ್ಸವವೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಪ್ರತೀ ವರ್ಷವೂ ನಡೆಯುವ, ಈ ಉತ್ಸವ, ಬ್ರಿಟನ್ ಜನರನ್ನೂ ಆಕರ್ಷಿಸಿದೆ.  

Read More

ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಬಿಡುಗಡೆ.

ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಬಿಡುಗಡೆ.

ತಿರುಪತಿ: ಶ್ರೀ ಪದ್ಮಾವತಿ ಸಮಿತ ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಅನ್ನು ದೇವಸ್ಥಾನ ಸಮಿತಿಯ ಜಂಟಿ ಕಾರ್ಯಕಾರಿ ಅಧಿಕಾರಿ ಪಿ.ಭಾಸ್ಕರ್ ಬಿಡುಗಡೆಗೊಳಿಸಿದರು. ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮೇ೧೯ ರಿಂದ ೨೭ರ ವರೆಗೆ ನಡೆಯಲಿದ್ದು, ದ್ವಜಾರೋಹನ ಮೇ ೧೯, ಗರುಡ ಸೇವೆ ಮೇ ೨೩ ಮತ್ತು ರಥೋತ್ಸವ ಮೇ ೨೭ರಂದು ನಡೆಯಲಿದೆ.

Read More