ವೈಶಾಖ ತಿಂಗಳು ತಿರುಮಲದಲ್ಲಿ ಸಾಲು ಸಾಲು ಉತ್ಸವಗಳು

ವೈಶಾಖ ತಿಂಗಳು ತಿರುಮಲದಲ್ಲಿ ಸಾಲು ಸಾಲು ಉತ್ಸವಗಳು

ತಿರುಮಲ: ವೈಶಾಕ ತಿಂಗಳಿನಲ್ಲಿ ೫ ಮಹಾನ್ ಸಂತರು ಮತ್ತು ಇಬ್ಬರು ಹಿಂದೂ ಆರಾಧಕರ ಜಯಂತಿಗಳು ಬರುವುದರಿಂದ ಈ ತಿಂಗಳನ್ನು ಪವಿತ್ರ ತಿಂಗಳೆಂದು ಭಾವಿಸಲಾಗುತ್ತದೆ. ಮೇ  ತಿಂಗಳಿನಲ್ಲಿ ತಿರುಪತಿ ತಿರುಮಲದಲ್ಲಿ ಸಾಲು ಸಾಲು ಜಯಂತಿಗಳು ಆಚರಣೆಗೊಳ್ಳಲಿವೆ. ಮೇ ತಿಂಗಳ ೧೦ನೆ ತಾರೀಖಿನಂದು ವಿಶಿಷ್ಟ ದ್ವೈತ ಮತ ಪ್ರತಿಪಾದಿಸಿದ ರಾಮಾನುಜಾಚಾರ್ಯರ ಜಯಂತಿ ಬಂದರೆ, ಮೇ ೧೧ರಂದು ದ್ವೈತ ತತ್ವಜ್ಞಾನದ ಮತ್ತೋರ್ವ ಸಮಾಜ ಸುಧಾರಕ ಶಂಕರಾಚಾರ್ಯರ ಜಯಂತಿ ಬರಲಿದೆ. ಮೇ ೨೦ ರಂದು ಸಂತೆ ಮಾತೃಶ್ರೀ ತರಿಗೊಂಡ ವೆಂಗಾಂಬ ಅವರ ೨೮೬ನೆ ಜಯಂತಿ ತಿರುಮಲದಲ್ಲಿ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ. ಇದೇದಿನ ನರಸಿಂಹ ಸ್ವಾಮಿ ಜಯಂತಿಯೂ ತಿರುಮಲದಲ್ಲಿ ನಡೆಯಲಿದೆ. ಮಲಯಪ್ಪ ಸ್ವಾಮಿ ಉತ್ಸವವೂ ಇದೇ ಸಂಧರ್ಭದಲ್ಲಿ ನೆರವೇರಲಿದೆ. ಇನ್ನು ಮೇ ೨೧ ರಂದು ಮತ್ತೋರ್ವ ಸಂತ ಶ್ರೀ ತಲ್ಲಪಾಕ ಅಣ್ಣಮಾಚಾರ್ಯ ಜಯಂತಿ ಉತ್ಸವ ತಿರುಮಲ ದೇವಸ್ಥಾನದಲ್ಲಿ ನಡೆದರೆ, ಮೇ ೩೧ ರಂದು ಹನುಮಾನ್ ಜಯಂತಿ…

Read More

ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪುಷ್ಪಯಾಗಂ ಮೆರಗು

ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪುಷ್ಪಯಾಗಂ ಮೆರಗು

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಅಂಗವಾಗಿ ತಿರುಪತಿಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಒಂದಾದ ಪುಷ್ಪಯಾಗಂ ಉತ್ಸವದಿಂದಾಗಿ ತಿರುಪತಿಯ ಕೋದಂಡ ರಾಮ ಸ್ವಾಮಿ ದೇವಸ್ಥಾನ ಬುಧವಾರ ಸಂಜೆ ವರ್ಣರಂಜಿತವಾಗಿ ಗೋಚರಿಸಿತು. ಉತ್ಸವದ ಸಲುವಾಗಿ ಸುಮಾರು ಐದು ಟನ್ ಗಳಷ್ಟು ವೈವಿಧ್ಯಮಯ ಪುಷ್ಪಗಳನ್ನು ವಿಶೇಷ ಪೂಜಾ ಸ್ಥಳದಲ್ಲಿರುವ ಶ್ರೀರಾಮ, ಸೀತಾದೇವಿ ಮತ್ತು ಲಕ್ಷ್ಮಣ ಮೂರ್ತಿಗಳಿಗೆ ಅರ್ಪಿಸಲಾಯಿತು. ಮಧ್ಯಾಹ್ನ ೨ರಿಂದ ೪ರ ವರೆಗೆ ಜರುಗಿದ ಈ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನ ಕಾರ್ಯಕಾರಿ ಸಮಿತಿಯ ಅಧಿಕಾರಿ ಮುನಿಲಕ್ಷ್ಮಿ, ಸೂಪರಿನ್ಟೆನ್ಡೆಂಟ್ ಉಮಾ ಮಹೇಶ್ವರ ರೆಡ್ಡಿ ಪಾಲ್ಗೊಂಡಿದ್ದರು.

Read More

ತಿರುಪತಿ ರಾಮಾನುಜ ಸಂಚಾರ ರಥ ಸಂಚರಿಸಲಿರುವ ಸ್ಥಳಗಳು

ತಿರುಪತಿ ರಾಮಾನುಜ ಸಂಚಾರ ರಥ ಸಂಚರಿಸಲಿರುವ ಸ್ಥಳಗಳು

ತಿರುಪತಿ: ರಾಮಾನುಜಾಚಾರ್ಯರ ೧೦೦೦ನೆ ಜನ್ಮದಿನಾಚರಣೆಯ ಪ್ರಯುಕ್ತ ಸಂಚಾರ ಆರಂಭಿಸುತ್ತಿರುವ ರಾಮಾನುಜ ಸಂಚಾರ ರಥದ ಮಾರ್ಗಸೂಚಿಯನ್ನು ತಿರುಪತಿ ದೇವಾಲಯದ ಜಂಟಿ ಕಾರ್ಯಕಾರಿ ಸಮಿತಿ ಅಧಿಕಾರಿ ಪಿ. ಭಾಸ್ಕರ್ ಪರಾಮರ್ಶಿಸಿದರು. ರಥದೊಂದಿಗೆ ಸಾಥ್ ನೀಡಲಿರುವ ತಂಡವನ್ನು ಉದ್ದೇಶಿಸಿ ಮಾತನಾಡಿದ ಪಿ. ಭಾಸ್ಕರ್, ರಥ ಹಾದು ಹೋಗಲಿರುವ ವಿವಿಧ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪ್ರಮುಖ ಪುರಾತನ ದೇವಾಲಯಗಳಿಗೆ ತಲುಪಿಸುವ ಮೂಲಕ ರಥ ಸಂಚಾರದ ಬಗ್ಗೆ ಪ್ರಚಾರ ನೀಡುವಂತೆ ತಿಳಿಸಿದರು. ಮೇ ೧೦ರಂದು ತಿರುಮಲದಿಂದ ಸಂಚಾರ ಆರಂಭಿಸಿರುವ ರಾಮಾನುಜ ಸಂಚಾರ ರಥ ಮೇ ೧೨ರಂದು ಕಡಪ ಜಿಲ್ಲೆಯ ಒಂಟಿ ಮಠಕ್ಕೆ ಬಂದು ತಲುಪಿದೆ. ಮೇ ೧೫ ರಂದು ಬೆಂಗಳೂರಿಗೆ ತಲುಪುವುದರ ಒಳಗಾಗಿ ಕುಮೂಲ್ ಜಿಲ್ಲೆಯ ಅಲ್ಲಗದ್ದ ನಂದ್ಯಾಲ್ ಮತ್ತು ಅನಂಥಪುರಂ ಮದಕಸಿರಕ್ಕೆ ಬಂದು ಸೇರಲಿದೆ. ಅಲ್ಲಿಂದ ಮೇ ೧೫ ರಿಂದ ೧೭ರ ಮಧ್ಯದಲ್ಲಿ ಸಂಚಾರ ರಥ ಮೇಲುಕೋಟೆ, ಮೈಸೂರು, ನಂಜನಗೂಡು, ಕೇರಳ ತಲುಪಲಿದೆ….

Read More

ಡಿ ಪಿ ಅನಂತ್ – ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ

ಡಿ ಪಿ ಅನಂತ್ – ಮುಖ್ಯಮಂತ್ರಿ ಸಿದ್ಧರಾಮಯ್ಯ  ಭೇಟಿ

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಆಡಳಿತ ಮಂಡಲಿಯಲ್ಲಿ  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಡಿ ಪಿ ಅನಂತ್ ಅವರು ಬುಧವಾರ  ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು  ಭೇಟಿ ಮಾಡಿದರು. ಅನಂತ್ ಅವರು ಈ ಸಂಧರ್ಭದಲ್ಲಿ ಶ್ರೀನಿವಾಸದೇವರ ಶೇಷವಸ್ತ್ರ ಹಾಗೂ ಪ್ರಸಾದವನ್ನು ನೀಡಿದರು. ಅನಂತ್ ಅವರ ಮತ್ತು  ತಿ.ತಿ.ದೇವಸ್ಥಾನಗಳ ಆಡಳಿತ ಮಂಡಲಿಯ ಸೇವಾ ಅವಧಿಯನ್ನು ಕಳೆದ ತಿಂಗಳು  ಆಂದ್ರಪ್ರದೇಶ ಸರ್ಕಾರ  ಒಂದು ವರ್ಷಕ್ಕೆ  ವಿಸ್ತರಣೆ ಮಾಡಿತ್ತು.  

Read More

ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಬಿಡುಗಡೆ.

ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಬಿಡುಗಡೆ.

ತಿರುಪತಿ: ಶ್ರೀ ಪದ್ಮಾವತಿ ಸಮಿತ ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವದ ಪೋಸ್ಟರ್ ಅನ್ನು ದೇವಸ್ಥಾನ ಸಮಿತಿಯ ಜಂಟಿ ಕಾರ್ಯಕಾರಿ ಅಧಿಕಾರಿ ಪಿ.ಭಾಸ್ಕರ್ ಬಿಡುಗಡೆಗೊಳಿಸಿದರು. ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಮೇ೧೯ ರಿಂದ ೨೭ರ ವರೆಗೆ ನಡೆಯಲಿದ್ದು, ದ್ವಜಾರೋಹನ ಮೇ ೧೯, ಗರುಡ ಸೇವೆ ಮೇ ೨೩ ಮತ್ತು ರಥೋತ್ಸವ ಮೇ ೨೭ರಂದು ನಡೆಯಲಿದೆ.

Read More

ತಿರುಪತಿಯಲ್ಲಿ ಆಂಧ್ರ ಇನ್ಕ್ಯಬೇಶನ್ ಕೇಂದ್ರ.

ತಿರುಪತಿಯಲ್ಲಿ ಆಂಧ್ರ ಇನ್ಕ್ಯಬೇಶನ್ ಕೇಂದ್ರ.

ತಿರುಪತಿ: ಆಂಧ್ರ ಪ್ರದೇಶ ವನ್ನು ಉತ್ತಮ ಸ್ಟಾರ್ಟ್ ಅಪ್ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಲೋಬಲ್ ಕಮರ್ಷಿಯಲೈಸೇಶನ್ ಗ್ರೂಪ್ ಸಂಸ್ಥೆಯು ತಿರುಪತಿಯಲ್ಲಿ ಶೀಘ್ರವೇ ಒಂದು ಇನ್ಕ್ಯಬೇಶನ್ ಕೇಂದ್ರವನ್ನು ಸ್ಥಾಪಿಸಲು ಯೋಜನೆ ಹೂಡಿದೆ. ಆಂಧ್ರ ಪ್ರದೇಶ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿರುವ ಕೇಂದ್ರವು ಮುಂದಿನ ಹಲವು ತಿಂಗಳ ಮಟ್ಟಿಗೆ ಕಾರ್ಯದಲ್ಲಿ ಮಗ್ನವಾಗಲಿದೆ. ಸುಮಾರು 100 ಕ್ಕೂ ಹೆಚ್ಚಿನ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಸೇವೆ ನೀಡಲು ಉದ್ದೇಶಿಸಲಾಗಿದ್ದು ಭಾರತಿಯ ಮಾರುಕಟ್ಟೆಗೆ ಈ ಕೇಂದ್ರವು ಬಹಳ ಅವಶ್ಯಕಯವೆಂದು ತಿಳಿಯಲಾಗಿದೆ.

Read More

ಮೇ ತಿಂಗಳಿನಲ್ಲಿ ನಡೆಯುವ ತಿರುಪತಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು.

ಮೇ ತಿಂಗಳಿನಲ್ಲಿ ನಡೆಯುವ ತಿರುಪತಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು.

ಮೇ 01: ಶ್ರೀ ಭಾಷ್ಯಕರ್ಲ ಉತ್ಸವಂ ಆರಂಭ. ಮೇ 03: ಮತತ್ರಯ ಏಕಾದಶಿ. ಮೇ 05: ಮಾಸ ಶಿವರಾತ್ರಿ. ಮೇ 06: ಸರ್ವ ಅಮಾವಾಸ್ಯ. ಮೇ 08: ಚಂದ್ರ ದರ್ಶನಂ. ಮೇ 09: ಅಕ್ಷಯ ತೃತೀಯ, ಸಿಂಹಾಚಲ ಚಂದನೋತ್ಸವಂ, ಪರಶುರಾಮ ಜಯಂತಿ. ಮೇ 10: ಶ್ರೀ ರಾಮಾನುಜ ಜಯಂತಿ. ಮೇ 11: ಶ್ರೀ ರಾಮ ಜಯಂತಿ, ಶ್ರೀ ಶಂಕರ ಜಯಂತಿ, ಕೃತ್ತಿಕ ಕರ್ತೆ. ಮೇ 12: ನಮ್ಮಲ್ವರ್. ಮೇ 14: ವ್ರಿಶಭ ಸಂಕ್ರಮಣಂ. ಮೇ 16: ಶ್ರೀ ಪದ್ಮಾವತಿ ಶ್ರೀನಿವಾಸಲು ಪರಿಣಯಂ. ಮೇ 20: ನೃಸಿಂಹ ಜಯಂತಿ, ತರಿಗೊಂಡ ವೆಂಕಮಂಬ ಜಯಂತಿ. ಮೇ 21: ವೈಶಾಕ ಪೂರ್ಣಿಮಾ, ಅನ್ನಮಾಚಾರ್ಯ ಜಯಂತಿ, ಶ್ರೀ ಕೂರ್ಮ ಜಯಂತಿ. ಮೇ 31: ಶ್ರೀ ಹನುಮ ಜಯಂತಿ.    

Read More

ವಸಂತೋತ್ಸವಂ ಆಚರಣೆಯ ಎರಡನೇ ದಿನಕ್ಕೆ ಕಾಲಿಟ್ಟ ಸ್ವರ್ಣ ರಥಂ.

ವಸಂತೋತ್ಸವಂ ಆಚರಣೆಯ ಎರಡನೇ ದಿನಕ್ಕೆ ಕಾಲಿಟ್ಟ ಸ್ವರ್ಣ ರಥಂ.

ತಿರುಮಲದಲ್ಲಿ ನಡೆಯುತ್ತಿರುವ ವಸಂತೋತ್ಸವಂ ವಾರ್ಷಿಕ ಮಹೋತ್ಸವದಲ್ಲಿ ಮಲಯಪ್ಪ ಸ್ವಾಮಿಯ ರಥ ಮಹೋತ್ಸವವು ತನ್ನ ಸ್ವರ್ಣ ರಥ ಯಾತ್ರೆಯು ಎರಡನೇ ದಿನಕ್ಕೆ ಕಾಲಿಟ್ಟಿದೆ. 30 ಅಡಿಯ ದೇವಸನ ಪೀಠಮ್ ಸ್ವರ್ಣ ರಥ ದಲ್ಲಿ ಕುಳ್ಳಿರಿಸಿರುವ ಸ್ವಾಮಿಯ ಮೂರ್ತಿಯು ಮಾಡ ರಸ್ತೆಯ ಮೂಲಕ ಪ್ರದಕ್ಷಿಣೆ ಹಾಕಲಿದೆ. ಭಕ್ತಾದಿಗಳ ಗೋವಿಂದ ನಾಮ ಘೋಷಣೆಯ ಮೂಲಕ ರಥವು ಪ್ರದಕ್ಷಿಣೆ ಕೈಗೊಂಡಿದೆ.

Read More

ಶ್ರೀ ಬಾಲಾಜಿ ಆರೋಗ್ಯವರಪ್ರಸಾದಿನಿ ಗೆ ೨೦ ಲಕ್ಷ ರೂಪಾಯಿ ದೇಣಿಗೆ.

ಶ್ರೀ ಬಾಲಾಜಿ ಆರೋಗ್ಯವರಪ್ರಸಾದಿನಿ ಗೆ ೨೦ ಲಕ್ಷ ರೂಪಾಯಿ ದೇಣಿಗೆ.

ನೆಲ್ಲೋರಿನ ಉದ್ಯಮಿ ಶ್ರೀ ರಾಮಯ್ಯ ನಾಯ್ಡು ರವರು ತಿರುಮಲ ದೇವಸ್ಥಾನದ ಶ್ರೀ ಬಾಲಾಜಿ ಆರೋಗ್ಯವರಪ್ರಸಾದಿನಿ ಯೋಜನೆ ೨೦ ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.  

Read More

ಮೇ 10 ರಿಂದ ರಾಮಾನುಜಾಚಾರ್ಯ ಜನ್ಮ ಸಹಸ್ರಮಾನೋತ್ಸವ.

ಮೇ 10 ರಿಂದ ರಾಮಾನುಜಾಚಾರ್ಯ ಜನ್ಮ ಸಹಸ್ರಮಾನೋತ್ಸವ.

ತಿರುಪತಿ: ದಾರ್ಶನಿಕ ಹಾಗೂ ವೈಷ್ಣವ ಧರ್ಮದ ತತ್ವಜ್ಞಾನಿ ರಾಮಾನುಜಾಚಾರ್ಯರ ತತ್ವ ಸಿದ್ಧಾಂತಗಳನ್ನು ಹರಡುವ ದೃಷ್ಟಿಯಿಂದ ತಿರುಮಲ ತಿರುಪತಿ ದೇವಸ್ಥಾನವು ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವವನ್ನು ಮೇ 10 ರಿಂದ ಆಚರಿಸಲು ನಿರ್ಧರಿಸಿದೆ. ೧೧ನೆ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಯನ್ನು ತಮ್ಮ ವಚನ ಹಾಗೂ ಸಿದ್ಧಾಂತದ ಮೂಲಕವೇ ರಾಮಾನುಜಾಚಾರ್ಯರು ಅನುಷ್ಟಾನಕ್ಕೆ ತಂದಿದ್ದರು ಭಕ್ತಿ ಪಂತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ದೇವರಲ್ಲಿನ ನಂಬಿಕೆಗೆ ಯಾವುದೇ ಧರ್ಮ, ಘನತೆ ಹಾಗೂ ಜಾತಿಗಳ ತೊದಕಿರುವುದಿಲ್ಲ ವೆಂದು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಕ ಸಾಮಾಜಿಕ ಸುಧಾರಣೆಯನ್ನು ಸಾಕಾರಗೊಳಿಸಿದ ಇವರು ೧೨೦ ವರ್ಷಗಳ ಕಾಲ ಬದುಕಿ ತಮ್ಮ ಕೊನೆಯುಸಿರಿನವರೆಗೆ ಸಮಾನತೆಗಾಗಿ ಶ್ರಮಿಸಿದರು. ಹಲವಾರು ದೇವಸ್ಥಾನಗಳಿಗೆ ಯಾತ್ರೆ ನಡೆಸುತ್ತ ಅಸ್ಪ್ರುಷ್ಯತೆಯನ್ನು ಹೋಗಲಾಡಿಸುವಲ್ಲಿಯೂ ಇವರ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ, ದೇಶದ ಉದ್ದಗಲಕ್ಕೆ ಇರುವ ಒಟ್ಟು ೧೦೬ ತಿರುಪತಿ ದೇವ ಮಂದಿರ ಗಳಲ್ಲಿ ಇವರ ಜನ್ಮ ಸಹ್ಸ್ರಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ….

Read More