ತಿರಚನೂರ ಶ್ರೀ ಪದ್ಮಾವತಿ ಅಮ್ಮವನವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅರ್ಜಿತ ಸೇವಾ ಸಮಿತಿ ಸುಲಭವಾಗಿ ತಿರುಮಲದದಲ್ಲಿ ಸೇವಾ ಟಿಕೆಟ್ ನ್ನು ನೀಡುವ ವ್ಯವಸ್ಥೆ ಮಾಡಲಾಗಿದೆಂದು ಟಿಟಿಡಿಯ ಜೆ.ಇ.ಒ ಶ್ರೀ ಪಿ ಬಾಸ್ಕರ್ ಹೇಳಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವಾ ಟಿಕೆಟ್ ವಿತರಣೆ ಮತ್ತು ಮಾಹಿತಿಯನ್ನು ನೀಡಲು ಅಲ್ಲಲ್ಲಿ ಕೌಂಟರ್ ಗಳನ್ನು ತೆರೆಯಲಾಗಿದೆ. ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ನೀಡುವಲ್ಲಿ ನಮ್ಮ ಟಿಟಿಡಿಯ ಸಿಬ್ಬಂದಿಯೂ ಕಾರ್ಯ ಮಾಡುತ್ತಿದ್ದಾರೆಂದು ಟಿಟಿಡಿಯ ಅಧಿಕಾರಿ ತಿಳಿಸಿದರು. ಕೌಂಟರ್ ನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸೂಚನಾ ಮಾಹಿತಿ ಫಲಕಗಳನ್ನು ಕೂಡಾ ಅಳವಡಿಸಿದ್ದಾರೆ. ಟಿಟಿಡಿಯ ಅಧಿಕಾರಿ ಶ್ರೀ ಸಿ. ರಮಣ, ಆಡಳಿತಾಧಿಕಾರಿ ಶ್ರೀ ರವಿ ಪ್ರಸಾದ್, ಶ್ರೀ ವೇಣುಗೋಪಾಲ ಎನ್, ಶ್ರೀ ರಾಮಕೃಷ್ಣ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Read MoreCategory: Latest
ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮ ಶತಮಾನೋತ್ಸವ ಆಚರಣೆ
ಹರಿಕಥಾ ಪಿತಾಮಹ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣ ದಾಸು ಅವರು ಅಪರೂಪದ 180 ದಾಸವಿಧ ರಂಗ ನವತಿ ಕಸುಮ ಮಂಜರಿ ರಾಗಗಳನ್ನು ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಕಾಣಿಕೆ ಕೊಟ್ಟಿದ್ದಾರೆ. ಇವರ ಕುರಿತಾದ ಇಂತಹದೊಂದು ಸಂಗೀತದ ಕಾರ್ಯಕ್ರವು 84 ವರ್ಷಗಳ ನಂತರ ಮಹತಿ ಸಭಾಂಗಣದಲ್ಲಿ ಬುಧವಾರ ಸಾಯಂಕಾಲ ಜರುಗಿತು. ಹರಿಕಥಾ ವಿದ್ವಾಂಸ ಶ್ರೀ ಅಜ್ಜದ ಆದಿ ಭಟ್ಟಲ್ ನಾರಾಯಣರವರ 152 ನೇ ಜನ್ಮದಿನ ಅಂಗವಾಗಿ ಎಸ್. ವ್ಹಿ ಸಂಗೀತ ಮತ್ತು ನೃತ್ಯ ಕಾಲೇಜು ವತಿಯಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಮಹಾರಾಣಿ ಕಾಲೇಜಿನ 9 ಜನರ ತಂಡ ಮತ್ತು ಶ್ರೀವ್ ಕಾಂತಮ್ ನಾಗೇಂದ್ರ ಶಾಸ್ತ್ರಿ ಅವರ ನೇತ್ವತೃದಲ್ಲಿ 90 ದಾಸವಿಧ ರಂಗ ನವತಿ ಕಸುವ ಮಂಜರಿಯ ಒಳಗೊಂಡಿರುವ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ರಾಗಮಾಲಿಕೆ 90 ರಾಗಗಳನ್ನು ಕಲಾವಿದರು ತಮ್ಮ ಮುಖದ ಅಭಿವ್ಯಕ್ತಿಯ್ನು ಮತ್ತು ನೃತ್ಯದ ಮೂಲಕ ಪ್ರದರ್ಶಿಸಿ…
Read Moreಬ್ರಹ್ಮತ್ಸೋವ ಪೂರ್ವ ಸಿದ್ಧತೆ
ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದ ವಿತರಣೆಯಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಟಿಟಿಡಿ ಸಿಬ್ಬಂದಿಗೆ ಇಓ ಸಾಂಬಶಿವ ಹೇಳಿದರು. ಬ್ರಹ್ಮತ್ಸೋವದ ಆರಂಭಕ್ಕೂ ಮುನ್ನವೇ ಟಿಟಿಡಿಯ ವಿವಿಧ ವಿಭಾಗಗಳಲ್ಲಿ ಬಾಕಿ ಉಳಿದ ಕೆಲಸಗಳತ್ತ ಗಮನಕೊಡಬೇಕು, ಇನ್ನುಳಿಂದತೆ ಕಟ್ಟಡ , ವಿದುತ್ಯ್ ಹೀಗೆ ಇವೆಲ್ಲ ಕಾರ್ಯಗಳು ಬೇಗನೆ ಮುಗಿಯಬೇಕೆಂದು ಅಧಿಕಾರಿಗಳು ಕರೆ ನೀಡಿದರು. ಭಕ್ತರಿಗೆ ಅನುಕೂಲವಾಗುವ ಹಾಗೇ ಲಡ್ಡು ಕೌಂಟರ್ ಗಳನ್ನು ನಿರ್ಮಾಣ ಮಾಡುವುದಕ್ಕೆ, ಆದಷ್ಟು ಬೇಗನೆ ಸಿಬ್ಬಂದಿಯೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದೆಂದು ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದರು. ಅಕ್ಟೋಬರ್ ನಲ್ಲಿ ನಡೆಯಲಿರರುವ ವಾರ್ಷಿಕ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪತ್ರಿದಿನ ಲಡ್ಡುಗಳನ್ನು ನೀಡವುದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಲಡ್ಡುಗಳನ್ನು ತಯಾರಿಸಲಾಗಿದೆಂದು ಟಿಟಿಡಿಯ ಈಒ ಸಾಂಬಶಿವ ಹೇಳಿದರು. ಲಗೇಜ್ ಕೌಟಂರ್ ಗಳನ್ನು ಹೆಚ್ಚಿಸುವುದಲ್ಲದೆ, ಮೂಲಭೂತವಾದ ಎಲ್ಲಾ ಅವಶ್ಯಕತೆಗಳನ್ನು ಕಲ್ಪಿಸುವುದಾಗಿ ಟಿಟಿಡಿಯ ಸಿಬ್ಬಂದಿ ಸೃಷ್ಟಪಡಿಸಿದೆ.
Read Moreತೆಲಗು ನಾಡಿನ ಹೆಮ್ಮೆ: ಅಜ್ಜದ ಆಧಿಭಟ್ಲಾ ನಾರಾಯಣದಾಸು
ಹರಿಕಥಾ ವಿದ್ವಾಂಸ ಅಜ್ಜದ ಆಧಿಭಟ್ಲಾ ನಾರಾಯಣದಾಸು ಅವರ 152 ನೇ ಜನ್ನದಿನದ ವಾರ್ಷಿಕೋತ್ಸವ ಸೋಮವಾರ ಸಾಯಂಕಾಲ ಮಹತಿ ಸಭಾಂಗಣದಲ್ಲಿ ಆಚರಣೆ ಮಾಡುವ ಮೂಲಕ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು. ಹರಿಕಥಾ ಪಿತಾಮಹ ಅಜ್ಜದ ಆಧಿಭಟ್ಲಾ ನಾರಾಯಣದಾಸುವರು ತೆಲುಗು, ಸಂಸ್ಕೃತ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್ ಇತ್ಯಾದಿ ಮತ್ತು ಕವನ, ಸಂಗೀತ, ಭಾಷಾಶಾಸ್ತ್ರ, ತತ್ವಶಾಸ್ತ್ರ ಮತ್ತು ನೃತ್ಯ ಸೇರಿದಂತೆ ಎಂಟು ಭಾಷೆಗಳಲ್ಲಿ ಸಾಧನೆ ಮಾಡಿದ ಬಹುಮುಖಿ ಪ್ರತಿಭೆಯ. ಅವರು ನಿಸ್ಸಂದೇಹವಾಗಿ ನಮ್ಮ ತೆಲಗು ನಾಡಿನ ಹೆಮ್ಮೆ ಎಂದು ಕಾರ್ಯಕ್ರಮದ ಸಂಯೋಕರಾದ ತೆರಿಗೊಂಡ ವೆಂಬಬಾಬು ಮಾತನಾಡಿದರು. ಗುಂಟೂರು ಸರ್ಕಾರದ ಪದವಿ ಕಾಲೇಜ್ ಪ್ರಾಂಶುಪಾಲ ಡಾ ನಾಗಲಕ್ಷ್ಮೀ ಹರಿಕಥಾ ಬಗ್ಗೆ ಕುರಿತು ಮಾತನಾಡಿದರು. ಎಸ್.ವಿ.ಮೂಸಿಕ್ಯ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಮತಿ ವಾಯ್.ವ್ಹಿ.ಎಸ್.ಪದ್ಮಾವತಿ, ಸಹ ಪ್ರಾಧ್ಯಾಪಕರಾದ ಚಲ್ಲಾ ಪ್ರಭಾವತಿ, ಶ್ರೀ ಸುಧಾಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Read Moreವಿಜಯವಾಡ ವೆಂಕಟೇಶ್ವರ ದೇವಾಲಯಕ್ಕೆ ಆಂಧ್ರ, ತೆಲಂಗಾಣ ರಾಜ್ಯಪಾಲ
ಟಿಟಿಡಿ, ವಿಜಯವಾಡದಲ್ಲಿ ನಿರ್ಮಿಸಿರುವ, ತಿರುಪತಿಯನ್ನೇ ಹೋಲುವ ವೆಂಕಟೇಶ್ವರ ದೇವಾಲಯಕ್ಕೆ ಇಂದು ಗಣ್ಯರು ಭೇಟಿ ಕೊಟ್ಟಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮತ್ತು ಕುಟುಂಬ, ದೇವಾಲಯಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಆಂಧ್ರದ ಕೃಷಿ ಸಚಿವ ಪುಲ್ಲಾ ರಾವ್, ಈ ಸಂದರ್ಭದಲ್ಲಿದ್ದರು. ಇದೇ ವೇಳೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎನ್.ವಿ.ರಮಣ ಅವರು ಕೂಡಾ, ದೇವಾಲಯಕ್ಕೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ, ಟಿಟಿಡಿ ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ರಾಜು, ಸುಧಾಕರ್ ರಾವ್, ರಾಜೇಂದ್ರುಡು ಉಪಸ್ಥಿತರಿದ್ದರು.
Read Moreಕಾಲಿದ್ದೇ ಬೆಟ್ಟ ಹತ್ತೋದು ಕಷ್ಟ.. ಇನ್ನು ಉರುಳಿಕೊಂಡು…! ? ಗೋವಿಂದಾಯ ನಮಃ
ಇವರ ಹೆಸರು ಪೊನ್ನಾಲ ಸುಧಾಕರ್. ಊರು ತಿರುಚನೂರ್. ತಿರುಪತಿಯಿಂದ 21 ಕಿಲೋ ಮೀಟರ್ ದೂರದ ತಿರುಚನೂರ್ ನಲ್ಲಿ ಸುಧಾಕರ್ ಕೇಬಲ್ ಆಪರೇಟರ್. 44 ವರ್ಷದ ಪೊನ್ನಲ ಸುಧಾಕರ್, ವಿಶಿಷ್ಟ ಸಾಧನೆಯೊಂದನ್ನ ಮಾಡಿದ್ದಾರೆ. ಉರುಳು ಸೇವೆ ಮಾಡುತ್ತಲೇ, ತಿರುಚನೂರ್ ನಿಂದ ತಿರುಪತಿ ಬೆಟ್ಟ ಹತ್ತಿದ್ದಾರೆ. 21 ಕಿಲೋ ಮೀಟರ್ ದೂರವನ್ನ ಉರುಳುಸೇವೆ ಮೂಲಕ ಮುಟ್ಟಲು 65 ಗಂಟೆಗಳನ್ನ ತೆಗೆದುಕೊಂಡಿದ್ದಾರೆ. ಪೊನ್ನಲ ಸುಧಾಕರ್, ಪೊಲಿಯೋ ಪೀಡಿತ. ಒಂದು ಕಾಲು ಸಂಪೂರ್ಣವಾಗಿ ಸ್ವಾಧೀನದಲ್ಲಿ ಇಲ್ಲ. ಇಂಥಾ ಸ್ಥಿತಿಯಲ್ಲಿ, ಉರುಳುಸೇವೆ ಮಾಡುತ್ತಾ, 21 ಕಿಲೋ ಮೀಟರ್ ಬಂದಿದ್ದಾರೆ. ಇಷ್ಟೇ ಅಲ್ಲ, ತಿರುಮಲದಿಂದ ತಿರುಪತಿಗೆ 3800 ಮೆಟ್ಟಿಲುಗಳನ್ನೂ, ಉರುಳಿಕೊಂಡೇ ಹತ್ತಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ 12 : 49ಕ್ಕೆ ತಿರುಚನೂರ್ ನಿಂದ ಉರುಳುಸೇವೆ ಆರಂಭಿಸಿದ ಪೊನ್ನಲ ಸುಧಾಕರ್, ಭಾನುವಾರ ಸಂಜೆ 6:30ಕ್ಕೆ ತಿರುಪತಿ ಒಡೆಯನ ಮುಂದಿದ್ದಾರೆ. ತಿರುಪತಿ ತಿಮ್ಮಪ್ಪನ ಮೆಚ್ಚಿನ ಬಣ್ಣವಾದ ಹಳದಿ ಕಲರ್…
Read Moreತಿರುಪತಿ : ದೇವಾಲಯದ ಮುಂಭಾಗವೇ ವೆಂಕಣ್ಣ ಡಾಲರ್ ಕೌಂಟರ್
ತಿರುಪತಿ ತಿಮ್ಮಪ್ಪನ ಹಚ್ಚೆ ಇರುವ ವೆಂಕಣ್ಣ ಡಾಲರ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗೇ, ಈ ವಿಷಯದಲ್ಲಿ ಭಕ್ತರನ್ನ ಮೋಸ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ, ಖುದ್ದು ಟಿಟಿಡಿ, ಈ ಬಗ್ಗೆ ವಿಶೇಷ ಗಮನ ಕೊಟ್ಟಿದೆ. ತಿಮ್ಮಪ್ಪನ ಹಚ್ಚೆ ಇರುವ ಚಿನ್ನದ, ಬೆಳ್ಳಿ ಹಾಗೂ ಕಂಚಿನ ನಾಣ್ಯಗಳ ಮಾರಾಟವನ್ನು ದೇವಾಲಯದ ಎದುರಿಗೆ ಇರುವ ಬ್ಯಾಂಕ್ ಕೌಂಟರ್ ನಲ್ಲೇ ತೆರೆಯುವಂತೆ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಭಕ್ತರು ಮೋಸ ಹೋಗುವುದು ತಪ್ಪುತ್ತದೆ ಎಂದಿದ್ದಾರೆ. ಜೊತೆಗೆ, ಭಕ್ತರಿಗೆ ಮಾಹಿತಿ ಒದಗಿಸಲು, ಅಲ್ಲಲ್ಲಿ, ಸ್ವಯಂಸೇವಕರನ್ನ ಬಳಸಿಕೊಳ್ಳುವಂತೆಯೂ, ಸಾಂಬಶಿವರಾವ್ ಸೂಚಿಸಿದ್ದಾರೆ.
Read Moreತಿಮ್ಮಪ್ಪನ ಭಕ್ತರಿಗೆ ಬಿಸಿಲ ಝಳ ತಟ್ಟದಿರಲು ತಣ್ಣೀರ ಸಿಂಪಡಿಕೆ
ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಗಂಟೆ ಗಟ್ಟಲೇ ನಿಲ್ಲುವ ಭಕ್ತರು ದಣಿಯದಂತೆ, ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿದೆ. ಧರ್ಮ ದರ್ಶನವೂ ಸೇರಿದಂತೇ, ಇತರೇ ಕೌಂಟರ್ ಗಳ ಬಳಿ, ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಸಿಲ ಝಲ ಹೆಚ್ಚಾದಂತೆ, ಭಕ್ತರು ದಣಿಯುವ ಸಾಧ್ಯತೆ ಇರುತ್ತದೆ. ಇಂತಹ ಕಡೆಗಳಲ್ಲಿ, ಬಹುಬೇಗನೇ ಬೆಳೆಯುವ ಸಸಿಗಳನ್ನ ನೆಡಲೂ, ಅರಣ್ಯಾಧಿಕಾರಿಗಳಿಗೆ ಸಾಂಬಶಿವರಾವ್ ಸೂಚಿಸಿದ್ದಾರೆ. ಜೊತೆಗೆ, ಭಕ್ತರ ಮೇಲೆ ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲೂ, ತೋಟಗಾರಿಕೆ ಇಲಾಖೆಗೆ ಸೂಚಿಸಿದ್ದಾರೆ. 300 ರೂಪಾಯಿಯ ದರ್ಶನಕ್ಕೆ ತೆರಳುವ ಭಕ್ತರ ಹಣೆಗೆ ಉಚಿತವಾಗಿ, ನಾಮ ಹಾಕುವ ವ್ಯವಸ್ಥೆ ಮಾಡುವಂತೆಯೂ, ಸಾಂಬಶಿವರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Read Moreತಿರುಪತಿ ಭೇಟಿ ಅನುಭವ : ಭಕ್ತರ ಮನದಿಂಗಿತ ತಿಳಿಯಲಿರುವ ಟಿಟಿಡಿ
ತಿರುಪತಿಗೆ ಭೇಟಿ ಕೊಡುವ ಭಕ್ತರ ಮನದಿಂಗಿತ ಅರಿಯಲು ಟಿಟಿಡಿ ಮುಂದಾಗಿದೆ. ತಿರುಪತಿಗೆ ದೇಶ, ವಿದೇಶಗಳಿಂದ ಬರುವ ಭಕ್ತರನ್ನ ಸಂದರ್ಶಿಸಿ, ತಿರುಪತಿ ಭೇಟಿ ವೇಳೆ ಅವರಿಗಾದ ಅನುಭವ ಹಾಗೂ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ನೇರವಾಗಿ ಭಕ್ತರಿಂದಲೇ ಅಭಿಪ್ರಾಯ ಸಂಗ್ರಹಿಸಲೂ ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಿದೆ. ತಿರುಪತಿಯ ಅನ್ನಮಯ್ಯ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ, ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ. ಸಾಂಬಶಿವರಾವ್, ಈ ವಿಷಯ ತಿಳಿಸಿದ್ದಾರೆ.. ತಿರುಪತಿಗೆ ಭೇಟಿ ಕೊಡುವ ಹೆಚ್ಚಿನ ಭಕ್ತರು ದಕ್ಷಿಣ ಭಾರತೀಯರೇ ಆಗಿರುತ್ತಾರೆ. ದಿನವೊಂದಕ್ಕೆ, ಒಂದು ಲಕ್ಷ ಭಕ್ತರು, ತಿರುಪತಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ವಸತಿ, ಸಾರಿಗೆ ವ್ಯವಸ್ಥೆ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಕೌಂಟರ್ ವ್ಯವಸ್ಥೆ, ಪ್ರಸಾದ ವ್ಯವಸ್ಥೆ, ಹೀಗೇ ಎಲ್ಲದರ ಬಗ್ಗೆಯೂ ಐಐಟಿ ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ಆ ಬಳಿಕ,…
Read Moreಸಸ್ಯರಾಶಿಯಲ್ಲಿ ಅರಳಿದ್ದಾನೆ ಶ್ರೀಕೃಷ್ಣ
ಟಿಟಿಡಿ ಅಧಿಕಾರಿಗಳ ಕಲ್ಪನೆಯ ಸಸ್ಯ ಪ್ರಪಂಚಕ್ಕೆ, ಭಾರೀ ಜನ ಮೆಚ್ಚುಗೆ ಸಿಕ್ಕಿದೆ. ವಿಜಯವಾಡದ ಪಿ.ಡಬ್ಲ್ಯು.ಡಿ ಗ್ರೌಂಡ್ ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರ ಹರಿದುಬರುತ್ತಿದೆ. ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ. ಸಾಂಬಶಿವರಾವ್ ಹಾಗೂ ಜಂಟಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಶ್ರೀನಿವಾಸ ರಾಜು ಅವರ ಕಲ್ಪನೆಯ ಪ್ರದರ್ಶನ ಇದು. ವಿಜಯವಾಡದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ರಚನಾತ್ಮಕ ಕಾರ್ಯಕ್ಕೆ, ವೀಕ್ಷಕರು ಭೇಷ್ ಎಂದಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ, ಬಲಿ ಚಕ್ರವರ್ತಿ, ವಾಮನ, ಈಶ್ವರ, ನಂದಿ, ಗರುಡ ಹೀಗೆ ನಾನಾ ದೇವತೆಗಳು ಸಸ್ಯರಾಶಿಯಲ್ಲಿ ಮೂಡಿದ್ದಾರೆ. ಇಷ್ಟೇ ಅಲ್ಲ, ಶ್ರೀಕೃಷ್ಣ, ಗೋವರ್ಧನ ಗಿರಿಯನ್ನ ಎತ್ತಿಹಿಡಿದಿರುವ ರೂಪಕವೂ, ಸಸ್ಯರಾಶಿಯಲ್ಲಿ ಮೈದಳೆದಿದೆ. ಹಾಗೂ ಲವ – ಕುಶ, ರಾಮಾಯಣವನ್ನ ನಿರೂಪಣೆ ಮಾಡುತ್ತಿರುವ ದೃಶ್ಯ ಕಾವ್ಯವೂ ಬಹಳ ಜನಾಕರ್ಷಣೆಯಾಗಿದೆ. ಇದರೊಂದಿಗೆ, ನವಿಲು, ಆನೆ ಮತ್ತು ಇತರೇ ಪ್ರಾಣಿಗಳನ್ನೂ ಸಸ್ಯದಲ್ಲೇ ಅರಳಿಸಲಾಗಿದೆ.
Read More