‘ಬುಕ್ ಆಫ್ ರೇಕಾರ್ಡ್’ ನಲ್ಲಿ ದಾಖಲಾದ ಮಹಿಳಾ ಕಾಲೇಜು

TTD-WOMENS-COLLEGE-MAKES-IT-INTERNATIONAL-WONDER-BOOK-OF-RECORD-copy

64 ವರ್ಷಗಳ ಇತಿಹಾಸ ಹೊಂದಿರುವ ಟಿಟಿಡಿಯ ಶ್ರಿ ಪದ್ಮಾವತಿ ಮಹಿಳಾ ಪದವಿ ಮತ್ತು ಸಾತ್ನಕೋತ್ತರ ಕಾಲೇಜ ದಾಖಲೆಯೊಂದನ್ನು ನಿರ್ಮಿಸಿದೆ. ಕಾಲೇಜಿನಲ್ಲಿ ಸತತ 12 ಗಂಟೆಗಳ ಕಾಲ “ಶ್ರೀ ವೈಷ್ಣವ ಭಕ್ತಿ ತತ್ವಂ” ವಿಷಯದ ಕುರಿತಾದ ವಿಷಯ ಮಂಡನೆಯನ್ನು ಆಯೋಜಿಸಲಾಗಿತ್ತು. ಇಂತಹದೊಂದು ಸಾಧನೆಯೂ ಈಗ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಬುಧವಾರಂದು ದಾಖಲಾಗಿದೆಂದು ಕಾಲೇಜಿನ ಅಧಿಕಾರಿ ವರ್ಗದವರೂ ತಿಳಿಸಿದರು.



ವಿವಿಧ ವಿಭಾಗಳಿಂದ ಬಂದತ್ತ ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು. ಅದರಲ್ಲಿ ಬಹುಮುಖ್ಯವಾಗಿ ಆಯ್ದುಕೊಂಡ ವಿಷಯಗಳಲ್ಲಿ ರಾಮಾಯಣ, ಭಾರತಂ, ಭಾಗವತಮ್, ರಾಮಾನುಜಾಚಾರ್ಯರು, ಅನ್ನಮಾಚಾರ್ಯರು ಇವುಗಳೇ ಆಗಿದ್ದವು. ಕಾಲೇಜಿನ ಸಿಬ್ಬಂದಿ 200 ಜನರ ಜೊತೆಗೆ ಸಂಶೋಧಕ ವಿದ್ಯಾರ್ಥಿಗಳನ್ನು ಹೊರತುಪಡಿಸಿ 550 ಜನ ಮಹಿಳೆಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ದಾಖಲೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದಲ್ಲದೆ, ಜನರಲ್ಲಿ ಆಧ್ಯಾತ್ಮಿಕ ಜಾನ್ಞವನ್ನು ಬಿತ್ತುವ ಕೆಲಸವನ್ನು ಟಿಟಿಡಿಯ ಮಹಿಳಾ ಕಾಲೇಜು ಮಾಡಿದೆ. ಇದು ನಿಜಕ್ಕೂ ಮೆಚ್ಚುಗೆಯ ಕಾರ್ಯವೆಂದು ಟಿಟಿಡಿಯ ಇ.ಒ ಡಾ. ಸಾಂಬಶಿವ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟಿಟಿಡಿಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತಿದ್ದರು.



Related posts

Leave a Comment