ತಿರಪತಿಯ ಗೋ ಸಂರಕ್ಷಣಾ ಶಾಲೆ ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಾರ್ಪಾಡು

ಗೋ ಸಂರಕ್ಷಣಾ ಶಾಲೆಯನ್ನು ರಾಷ್ಟ್ರೀಯ ಗೋ ಸಂಶೋಧನಾ ಕೇಂದ್ರವನ್ನಾಗಿ ಮಾಡಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಸಾಂಬಶಿವ ಇಂದು ಶ್ರೀ ವೆಂಕಟೇಶ್ವರ ಗೋ ಸಂಕ್ಷರಣೆ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು.ಆಂಧ್ರ ಪ್ರದೇಶ ಮತ್ತು ತೆಲಂಗಾಣದ 23 ಜಿಲ್ಲೆಗಳಲ್ಲಿ ಇಂದು ಗೋಕುಲಾಷ್ಟಮಿಯನ್ನು ಆಚರಿಸುವ ಮೂಲಕ ಇಂತಹ ಹಬ್ಬಗಳು ಹಸುವಿನ ಮಹತ್ವ, ನಮ್ಮ ದೇಶದ ಧಾರ್ಮಿಕ ಸಾಮಾಜಿಕ-ಆರ್ಥಿಕ ಇತಿಹಾಸವನ್ನು ಬಿಂಬಿಸುತ್ತವೆಂದು ಟಿಟಿಡಿಯ ಈಓ ಈ ಸಂದರ್ಭದಲ್ಲಿ ಹೇಳಿದರು.
gokulastami5-copyಹಳ್ಳಿಕಾರ್, ಕಫಿಲ ಗೋವು, ಹರಿಯಾಣ, ಸಾಹಿವಾಲ್ ಮತ್ತು ರತಿ ಇಂತಹ ಹಲವಾರು ತಳಿಯ ಗೋವುಗಳು ಇಲ್ಲಿದ್ದು ಅವುಗಳನ್ನು ಸಂರಕ್ಷಿಸುವ ಜೊತೆಗೆ 75 ಉನ್ನತ ತಳಿಯ ಗೋವುಗಳು ಇಲ್ಲಿವೆ. ಶ್ರಿ ವೆಂಕಟೇಶ್ವರ ಗೋ ಶಾಲೆಯೂ ಪವಿತ್ರ ಹಸುಗಳನ್ನು ಸಂಕ್ಷಿಸುವ ಕೆಲಸವನ್ನುಮಾಡುತ್ತಿದೆ. ಗೋ ಸಂರಕ್ಷಣಾ ಶಾಲೆಗೆ ಇದುವರೆಗೂ 8.1 ಕೋಟಿ ರೂ ದೇಣಿಗೆಯೂ ಕೂಡಾ ಲಭಿಸಿದೆಂದು ಟಿಟಿಡಿಯ ಸಿಬ್ಬಂದಿ ತಿಳಿಸಿದ್ದಾರೆ. ಗೋವಿನ ಸೆಗಣಿ ಮತ್ತು ಮೂತ್ರವೂ ಸರ್ವ ಶ್ರೇಷ್ಠವಾದದ್ದು ಇದನ್ನು ಆರೋಗ್ಯ ದೃಷ್ಟಿಯಿಂದ ಈಗಾಗಲೇ ಔಷಧಿಗಾಗಿ ದೇಶ್ಯಾದಂತ ಬಳಸುತ್ತಿದ್ದಾರೆ.

ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳನ್ನು ಆರಾಧಿಸುವ ಮೂಲಕ ಪೂಜಿಸುತ್ತಾರೆ ಈ ನಿಟ್ಟಿನಲ್ಲಿ ಇವುಗಳ ಸಂರಕ್ಷಣೆಯ ಕೆಲಸ ಅತ್ಯಗತ್ಯ. ಹಾಗೂ ನಮ್ಮ ಗೋ ಶಾಲೆಯಲ್ಲಿ ಹಸುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ಮುನ್ನಚ್ಚೆರಿಕೆ ಕ್ರಮಗಳನ್ನು  ಕೈಗೊಳ್ಳಲಾಗುವುದೆಂದು ಟಿಟಿಡಿಯ ಜೆ.ಈ.ಓ ಪೊಲ್ ಬಾಸ್ಕರ್ ತಿಳಿಸಿದರು.Related posts

Leave a Comment