ತಿಮ್ಮಪ್ಪನ ಭಕ್ತರಿಗೆ ಬಿಸಿಲ ಝಳ ತಟ್ಟದಿರಲು ತಣ್ಣೀರ ಸಿಂಪಡಿಕೆ

ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಗಂಟೆ ಗಟ್ಟಲೇ ನಿಲ್ಲುವ ಭಕ್ತರು ದಣಿಯದಂತೆ, ಕ್ರಮ ಕೈಗೊಳ್ಳಲು ಟಿಟಿಡಿ ಮುಂದಾಗಿದೆ. ಧರ್ಮ ದರ್ಶನವೂ ಸೇರಿದಂತೇ, ಇತರೇ ಕೌಂಟರ್ ಗಳ ಬಳಿ, ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಬಶಿವರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಸಿಲ ಝಲ ಹೆಚ್ಚಾದಂತೆ, ಭಕ್ತರು ದಣಿಯುವ ಸಾಧ್ಯತೆ ಇರುತ್ತದೆ. ಇಂತಹ ಕಡೆಗಳಲ್ಲಿ, ಬಹುಬೇಗನೇ ಬೆಳೆಯುವ ಸಸಿಗಳನ್ನ ನೆಡಲೂ, ಅರಣ್ಯಾಧಿಕಾರಿಗಳಿಗೆ ಸಾಂಬಶಿವರಾವ್ ಸೂಚಿಸಿದ್ದಾರೆ. ಜೊತೆಗೆ, ಭಕ್ತರ ಮೇಲೆ ತಣ್ಣೀರು ಚಿಮುಕಿಸುವ ಸ್ಪ್ರಿಂಕ್ಲರ್ಸ್ ಅಳವಡಿಸಲೂ, ತೋಟಗಾರಿಕೆ ಇಲಾಖೆಗೆ ಸೂಚಿಸಿದ್ದಾರೆ. 300 ರೂಪಾಯಿಯ ದರ್ಶನಕ್ಕೆ ತೆರಳುವ ಭಕ್ತರ ಹಣೆಗೆ ಉಚಿತವಾಗಿ, ನಾಮ ಹಾಕುವ ವ್ಯವಸ್ಥೆ ಮಾಡುವಂತೆಯೂ, ಸಾಂಬಶಿವರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ThirupatiRelated posts

Leave a Comment