ಸಸ್ಯರಾಶಿಯಲ್ಲಿ ಅರಳಿದ್ದಾನೆ ಶ್ರೀಕೃಷ್ಣ

ಸಸ್ಯರಾಶಿಯಲ್ಲಿ ಅರಳಿದ್ದಾನೆ ಶ್ರೀಕೃಷ್ಣ

ಟಿಟಿಡಿ ಅಧಿಕಾರಿಗಳ ಕಲ್ಪನೆಯ ಸಸ್ಯ ಪ್ರಪಂಚಕ್ಕೆ, ಭಾರೀ ಜನ ಮೆಚ್ಚುಗೆ ಸಿಕ್ಕಿದೆ. ವಿಜಯವಾಡದ ಪಿ.ಡಬ್ಲ್ಯು.ಡಿ ಗ್ರೌಂಡ್ ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರ ಹರಿದುಬರುತ್ತಿದೆ. ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ. ಸಾಂಬಶಿವರಾವ್ ಹಾಗೂ ಜಂಟಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಶ್ರೀನಿವಾಸ ರಾಜು ಅವರ ಕಲ್ಪನೆಯ ಪ್ರದರ್ಶನ ಇದು. ವಿಜಯವಾಡದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ರಚನಾತ್ಮಕ ಕಾರ್ಯಕ್ಕೆ, ವೀಕ್ಷಕರು ಭೇಷ್ ಎಂದಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ, ಬಲಿ ಚಕ್ರವರ್ತಿ, ವಾಮನ, ಈಶ್ವರ, ನಂದಿ, ಗರುಡ ಹೀಗೆ ನಾನಾ ದೇವತೆಗಳು ಸಸ್ಯರಾಶಿಯಲ್ಲಿ ಮೂಡಿದ್ದಾರೆ. ಇಷ್ಟೇ ಅಲ್ಲ, ಶ್ರೀಕೃಷ್ಣ, ಗೋವರ್ಧನ ಗಿರಿಯನ್ನ ಎತ್ತಿಹಿಡಿದಿರುವ ರೂಪಕವೂ, ಸಸ್ಯರಾಶಿಯಲ್ಲಿ ಮೈದಳೆದಿದೆ. ಹಾಗೂ ಲವ – ಕುಶ, ರಾಮಾಯಣವನ್ನ ನಿರೂಪಣೆ ಮಾಡುತ್ತಿರುವ ದೃಶ್ಯ ಕಾವ್ಯವೂ ಬಹಳ ಜನಾಕರ್ಷಣೆಯಾಗಿದೆ. ಇದರೊಂದಿಗೆ, ನವಿಲು, ಆನೆ ಮತ್ತು ಇತರೇ ಪ್ರಾಣಿಗಳನ್ನೂ ಸಸ್ಯದಲ್ಲೇ ಅರಳಿಸಲಾಗಿದೆ.

Read More

ತಿರುಪತಿ : ಶ್ರಾವಣ ಪವಿತ್ರ್ಯೋತ್ಸವದಲ್ಲಿ ಸಾವಿರಾರು ಭಕ್ತರು

ತಿರುಪತಿ : ಶ್ರಾವಣ ಪವಿತ್ರ್ಯೋತ್ಸವದಲ್ಲಿ ಸಾವಿರಾರು ಭಕ್ತರು

ತಿರುಪತಿಯಲ್ಲಿ ಶ್ರಾವಣ ಮಾಸದ ಪವಿತ್ರ್ಯೋತ್ಸವವ ಇಂದು ಅಂತ್ಯಗೊಂಡಿತು. ಮಂಗಳವಾರ ಬೆಳಿಗ್ಗೆ, 9ರಿಂದ 11 ಗಂಟೆಯವರೆಗೂ, ವಿವಿಧ ಪೂಜೆ ಪುನಸ್ಕಾರ ನಡೆಯಿತು. ಶ್ರೀನಿವಾಸ ಉತ್ಸವ ಮೂರ್ತಿಗೆ, ಮೊಸರು, ಜೇನು, ಎಳನೀರು, ಹಳದಿ ಲೇಪನ ಹಾಗೂ ಶ್ರೀಗಂಧದ ಅಭಿಷೇಕ ನೆರವೇರಿತು. ಸಾವಿರಾರು ಭಕ್ತಾಧಿಗಳು ಮುಂಜಾನೆಯಿಂದಲೇ ನಡೆದ ಹೋಮ, ಹವನದಲ್ಲಿ ಪಾಲ್ಗೊಂಡಿದ್ದರು. ಟಿಟಿಡಿಯ ಅಧಿಕಾರಿ ಹಾಗೂ ಸಿಬ್ಬಂದಿ ಕೂಡಾ ಪವಿತ್ರ್ಯೋತ್ಸವದಲ್ಲಿ ಭಾಗವಹಿಸಿದ್ದರು.

Read More

ಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…

ಅಮೆರಿಕಾದ ಮೊಗ್ಗು… ತಿರುಪತಿಯಲ್ಲಿ ಅರಳಿತು…

  ದಿವ್ಯಾ ದೊಮ್ಮರಾಜು. 14 ವರ್ಷದ ಈಕೆ, ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕಾದಲ್ಲೇ. ಟೆನ್ನಿಸ್ ನಲ್ಲಿ ಇಂಟರ್ ಸ್ಕೂಲ್ ಚಾಂಪಿಯನ್. ಪೇಂಟಿಂಗ್ ನಲ್ಲೂ ದಿವ್ಯಾ, ಒಳ್ಳೇ ಹೆಸರು ಮಾಡಿದ್ದಾಳೆ. ಮುಂದಿನ ತಿಂಗಳು, ದಿವ್ಯಾ ಹತ್ತನೇ ತರಗತಿಗೆ ಎಂಟ್ರಿ ಪಡೆಯುತ್ತಾಳೆ. ಆದ್ರೆ, ದಿವ್ಯಾಗೆ ನಿತ್ಯವೂ ಏನೋ ಕೊರಗು. ತಮ್ಮ ಹುಟ್ಟೂರಿನ ಬಗ್ಗೆ, ಪ್ರತಿದಿನವೂ ಕನಸು, ಅದೇ ಕನವರಿಕೆ. ದಿವ್ಯಾಳ ತಂದೆ ಉದಯ್ ದೊಮ್ಮರಾಜು, ಎಸ್.ವಿ.ಯು ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಬಹಳ ವರ್ಷಗಳ ಹಿಂದೆಯೇ ಅಮೆರಿಕಾಗೆ ಹೋಗಿ ನೆಲೆಸಿದ್ದಾರೆ. ಅಮೆರಿಕಾಗೆ ಹೋದರೂ, ಹುಟ್ಟೂರು ತಿರುಪತಿಯ ನಂಟು ಬಿಟ್ಟಿಲ್ಲ. ಅಮೆರಿಕಾದ ಸಂಸ್ಕೃತಿಯ ನಡುವೆಯೇ ಬೆಳೆದರೂ, ದಿವ್ಯಾಗೆ ಭಾರತೀಯ ಪರಂಪರೆ, ಸಂಪ್ರದಾಯದ ಬಗ್ಗೆ ಅಪಾರ ಗೌರವ. ಹೀಗಾಗೇ, ಅಮೆರಿಕಾದಲ್ಲೇ ಭರತನಾಟ್ಯಂ ಕಲಿತಿದ್ದಾಳೆ. ಅದೆಷ್ಟೇ ಕಷ್ಟವಾದರೂ ಸರಿಯೇ. ತನ್ನ ಭರತನಾಟ್ಯಂ ರಂಗಪ್ರವೇಶ, ತಿರುಪತಿಯಲ್ಲೇ, ಅದೂ ತಿಮ್ಮಪ್ಪನ ಪಾದಾರವಿಂದಗಳಲ್ಲೇ ಆಗಬೇಕು ಎಂಬುದು ದಿವ್ಯಾಳ ಕನಸು. ಮಗಳ…

Read More