ತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್

ಇನ್ನು, ಕೆಲವೇ ಕೆಲವು ದಿನಗಳಷ್ಟೇ. ತಿರುಪತಿಯ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯಲಿವೆ. ದುಬೈನಿಂದ ತಿರುಪತಿ, ತಿರುಪತಿಯಿಂದ ದುಬೈ ಹಾಗೂ ಯೂರೋಪ್ ರಾಷ್ಟ್ರಗಳಿಗೆ ನೇರ ವಿಮಾನಯಾನ ಏರ್ಪಡಲಿದೆ. ಜೊತೆಗೆ, ಅಮೆರಿಕಾದಿಂದಲೂ ತಿರುಪತಿಗೆ ನೇರ ವಿಮಾನ ಹಾರಾಟಕ್ಕೂ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.  ಕೇಂದ್ರ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ, ತಿರುಪತಿ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್, ಇಮಿಗ್ರಷನ್ ವಿಭಾಗ ಸೇರಿದಂತೆ, ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ನೇಮಕ ಹಾಗೂ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿರಬೇಕಾದ ಸವಲತ್ತುಗಳನ್ನ ಒದಗಿಸಿದ ಬಳಿಕ, ವಿದೇಶೀ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. Tirupathi-international-airport Related posts

Leave a Comment