ತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?

ಟಿಟಿಡಿ, ಬ್ಯಾಂಕ್ ಗಳಲ್ಲಿ ಮತ್ತಷ್ಟು ಚಿನ್ನ ಠೇವಣಿ ಹೂಡಿಕೆಗೆ, ಮುಂದಾಗಿದೆ. ಸದ್ಯಕ್ಕೆ ಒಂದು ಸಾವಿರ ಕೆ.ಜಿ. ಚಿನ್ನವನ್ನ ಠೇವಣಿಯಾಗಿಡಲು ಟಿಟಿಡಿ ಸಿದ್ದವಾಗಿದೆ. ಆದ್ರೆ, ಬ್ಯಾಂಕ್ ಗಳೇ ಮುಂದೆ ಬರುತ್ತಿಲ್ಲ. ಟಿಟಿಡಿಯ ಠೇವಣಿ ಇಟ್ಟ ಚಿನ್ನಕ್ಕೆ, ಅದರ ಬೇಡಿಕೆಯಂತೆಯೇ, ಬಡ್ಡಿ ನೀಡಬೇಕಿದೆ. ಇದು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತಿಲ್ಲ. ಈಗ ಮತ್ತೆ ಒಂದು ಸಾವಿರ ಕೆ.ಜಿ.ಚಿನ್ನದ ಠೇವಣಿ ಇಡಲು ಟಿಟಿಡಿ ಮುಂದಾಗಿದೆಯಾದ್ರೂ, ಬ್ಯಾಂಕ್ ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಹಿರಿಯ ಅಧಿಕಾರಿಗಳು, ಬ್ಯಾಂಕ್ ಗಳ ಉನ್ನತಾಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಅವರಿಂದ, ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ಇನ್ನೆರಡು ತಿಂಗಳಿನಲ್ಲಿ, ಟಿಟಿಡಿ ಅಕೌಂಟ್ ಗೆ ಮತ್ತೆ 400 ( ನಾಲ್ಕು ನೂರು ) ಕೆ.ಜಿ. ಚಿನ್ನ ಸಂಗ್ರಹವಾಗಲಿದೆ. ಈಗ, ಇಷ್ಟೊಂದು ಅಪಾರ ಪ್ರಮಾಣದ ಚಿನ್ನವನ್ನ ಠೇವಣಿ ಇಡುವುದೇ, ಟಿಟಿಡಿಗೆ ಪ್ರಯಾಸದ ಕೆಲಸವಾಗಿದೆ. ಈಗಾಗಲೇ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1311 ಕೆ.ಜಿ  ಚಿನ್ನವನ್ನ ಟಿಟಿಡಿ ಠೇವಣಿಯಾಗಿಟ್ಟಿದೆ.KANTABHARANAMRelated posts

Leave a Comment