ತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ  

ಸತತ ನಾಲ್ಕು ದಿನ ರಜೆ. ನಿನ್ನೆ ಶುಕ್ರವಾರದಿಂದಲೇ, ತಿರುಪತಿಗೆ ಭಕ್ತ ಸಾಗರ ಹರಿದು ಬರುತ್ತಿದೆ. ನಿನ್ನೆ, ಶುಕ್ರವಾರ, ವರ ಮಹಾಲಕ್ಷ್ಮಿ ವ್ರತ. ತಿರುಚನೂರ್ ನ ಪದ್ಮಾವತಿ ಅಮ್ಮ ಸನ್ನಿಧಿಗೆ ಅಪಾರ ಭಕ್ತಸ್ತೋಮ ಆಗಮಿಸಿತ್ತು. ಇಂದೂ ಕೂಡಾ, ಭಕ್ತರ ಸಂಖ್ಯೆ ಬಹಳ. ಇಂದು ಶನಿವಾರವಾದ್ದರಿಂದ, ಸಹಜವಾಗೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ. ಅದಲ್ಲದೇ, ಇಂದೂ ಕೂಡಾ ಸರ್ಕಾರಿ ರಜೆ. ನಾಳೆ ಭಾನುವಾರ, ನಾಳಿದ್ದು ಸೋಮವಾರ ಸ್ವಾತಂತ್ರ್ಯೋತ್ಸವ. ಹೀಗಾಗಿ, ತಿರುಪತಿಗೆ ಭೇಟಿ ಕೊಡುವವರ ಭಕ್ತರ ಸಂಖ್ಯೆ ದಿನಕ್ಕೆ ಒಂದೂವರೆ ಲಕ್ಷ ದಾಟಿದೆ. ಮೊದಲೇ ನಿರ್ಧರಿಸಿದಂತೆ, ತಿರುಪತಿಯಲ್ಲಿ, ಟಿಟಿಡಿ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗೆ, ವಸತಿ ತೊಂದರೆ ಆಗದಂತೆ ನಿಗಾ ವಹಿಸಿದೆ. ತಿಮ್ಮಪ್ಪನ ದರ್ಶನ ಪಡೆದ ಭಕ್ತರು, ಅಂದಿನ ದಿನವೇ, ವಸತಿ ಖಾಲಿ ಮಾಡಿ, ಇತರೇ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ಟಿಟಿಡಿ ಮನವಿಗೆ, ಭಕ್ತಸ್ತೋಮ ಸ್ಪಂದಿಸಿದೆ. ಜೊತೆಗೆ, ತಿರುಪತಿ ಹಾಗೂ ತಿರುಮಲದಲ್ಲಿ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಯೂ ವೈದ್ಯರು ಲಭ್ಯರಿದ್ದಾರೆ. ಹೋಟೆಲ್ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲೂ ಸ್ವಚ್ಛತೆಗೆ ಎಂದಿನಂತೇ ಗಮನ ಕೊಡಲಾಗಿದೆ. ಭದ್ರತೆಯನ್ನೂ, ಹೆಚ್ಚಿಸಲಾಗಿದೆ.  PTI1_Tirumala

 Related posts

Leave a Comment