ತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?

ತಿಮ್ಮಪ್ಪನ ಸಾವಿರ ಕೆ.ಜಿ.ಚಿನ್ನ ತೆಗೆದುಕೊಳ್ಳೋರು ಯಾರು.. ?

ಟಿಟಿಡಿ, ಬ್ಯಾಂಕ್ ಗಳಲ್ಲಿ ಮತ್ತಷ್ಟು ಚಿನ್ನ ಠೇವಣಿ ಹೂಡಿಕೆಗೆ, ಮುಂದಾಗಿದೆ. ಸದ್ಯಕ್ಕೆ ಒಂದು ಸಾವಿರ ಕೆ.ಜಿ. ಚಿನ್ನವನ್ನ ಠೇವಣಿಯಾಗಿಡಲು ಟಿಟಿಡಿ ಸಿದ್ದವಾಗಿದೆ. ಆದ್ರೆ, ಬ್ಯಾಂಕ್ ಗಳೇ ಮುಂದೆ ಬರುತ್ತಿಲ್ಲ. ಟಿಟಿಡಿಯ ಠೇವಣಿ ಇಟ್ಟ ಚಿನ್ನಕ್ಕೆ, ಅದರ ಬೇಡಿಕೆಯಂತೆಯೇ, ಬಡ್ಡಿ ನೀಡಬೇಕಿದೆ. ಇದು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತಿಲ್ಲ. ಈಗ ಮತ್ತೆ ಒಂದು ಸಾವಿರ ಕೆ.ಜಿ.ಚಿನ್ನದ ಠೇವಣಿ ಇಡಲು ಟಿಟಿಡಿ ಮುಂದಾಗಿದೆಯಾದ್ರೂ, ಬ್ಯಾಂಕ್ ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಟಿಟಿಡಿ ಹಿರಿಯ ಅಧಿಕಾರಿಗಳು, ಬ್ಯಾಂಕ್ ಗಳ ಉನ್ನತಾಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಅವರಿಂದ, ಯಾವುದೇ ಉತ್ತರ ಬಂದಿಲ್ಲ ಎನ್ನಲಾಗಿದೆ. ಇನ್ನೆರಡು ತಿಂಗಳಿನಲ್ಲಿ, ಟಿಟಿಡಿ ಅಕೌಂಟ್ ಗೆ ಮತ್ತೆ 400 ( ನಾಲ್ಕು ನೂರು ) ಕೆ.ಜಿ. ಚಿನ್ನ ಸಂಗ್ರಹವಾಗಲಿದೆ. ಈಗ, ಇಷ್ಟೊಂದು ಅಪಾರ ಪ್ರಮಾಣದ ಚಿನ್ನವನ್ನ ಠೇವಣಿ ಇಡುವುದೇ, ಟಿಟಿಡಿಗೆ ಪ್ರಯಾಸದ…

Read More

ತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್

ತಿರುಪತಿ : ಕೆಲವೇ ದಿನಗಳಲ್ಲಿ ಇಳಿಯಲಿವೆ ಇಂಟರ್ ನ್ಯಾಷನಲ್ ಫ್ಲೈಟ್ಸ್

ಇನ್ನು, ಕೆಲವೇ ಕೆಲವು ದಿನಗಳಷ್ಟೇ. ತಿರುಪತಿಯ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಬಂದಿಳಿಯಲಿವೆ. ದುಬೈನಿಂದ ತಿರುಪತಿ, ತಿರುಪತಿಯಿಂದ ದುಬೈ ಹಾಗೂ ಯೂರೋಪ್ ರಾಷ್ಟ್ರಗಳಿಗೆ ನೇರ ವಿಮಾನಯಾನ ಏರ್ಪಡಲಿದೆ. ಜೊತೆಗೆ, ಅಮೆರಿಕಾದಿಂದಲೂ ತಿರುಪತಿಗೆ ನೇರ ವಿಮಾನ ಹಾರಾಟಕ್ಕೂ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.  ಕೇಂದ್ರ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ, ತಿರುಪತಿ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್, ಇಮಿಗ್ರಷನ್ ವಿಭಾಗ ಸೇರಿದಂತೆ, ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ನೇಮಕ ಹಾಗೂ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿರಬೇಕಾದ ಸವಲತ್ತುಗಳನ್ನ ಒದಗಿಸಿದ ಬಳಿಕ, ವಿದೇಶೀ ವಿಮಾನಗಳಿಗೆ ಗ್ರೀನ್ ಸಿಗ್ನಲ್ ಸಿಗಲಿದೆ.   

Read More

ತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ  

ತಿಮ್ಮಪ್ಪನ ಸನ್ನಿಧಿಗೆ ಹರಿದುಬರುತ್ತಿದೆ ಭಕ್ತ ಸಾಗರ  

ಸತತ ನಾಲ್ಕು ದಿನ ರಜೆ. ನಿನ್ನೆ ಶುಕ್ರವಾರದಿಂದಲೇ, ತಿರುಪತಿಗೆ ಭಕ್ತ ಸಾಗರ ಹರಿದು ಬರುತ್ತಿದೆ. ನಿನ್ನೆ, ಶುಕ್ರವಾರ, ವರ ಮಹಾಲಕ್ಷ್ಮಿ ವ್ರತ. ತಿರುಚನೂರ್ ನ ಪದ್ಮಾವತಿ ಅಮ್ಮ ಸನ್ನಿಧಿಗೆ ಅಪಾರ ಭಕ್ತಸ್ತೋಮ ಆಗಮಿಸಿತ್ತು. ಇಂದೂ ಕೂಡಾ, ಭಕ್ತರ ಸಂಖ್ಯೆ ಬಹಳ. ಇಂದು ಶನಿವಾರವಾದ್ದರಿಂದ, ಸಹಜವಾಗೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ. ಅದಲ್ಲದೇ, ಇಂದೂ ಕೂಡಾ ಸರ್ಕಾರಿ ರಜೆ. ನಾಳೆ ಭಾನುವಾರ, ನಾಳಿದ್ದು ಸೋಮವಾರ ಸ್ವಾತಂತ್ರ್ಯೋತ್ಸವ. ಹೀಗಾಗಿ, ತಿರುಪತಿಗೆ ಭೇಟಿ ಕೊಡುವವರ ಭಕ್ತರ ಸಂಖ್ಯೆ ದಿನಕ್ಕೆ ಒಂದೂವರೆ ಲಕ್ಷ ದಾಟಿದೆ. ಮೊದಲೇ ನಿರ್ಧರಿಸಿದಂತೆ, ತಿರುಪತಿಯಲ್ಲಿ, ಟಿಟಿಡಿ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಭಕ್ತರಿಗೆ, ವಸತಿ ತೊಂದರೆ ಆಗದಂತೆ ನಿಗಾ ವಹಿಸಿದೆ. ತಿಮ್ಮಪ್ಪನ ದರ್ಶನ ಪಡೆದ ಭಕ್ತರು, ಅಂದಿನ ದಿನವೇ, ವಸತಿ ಖಾಲಿ ಮಾಡಿ, ಇತರೇ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ಟಿಟಿಡಿ ಮನವಿಗೆ, ಭಕ್ತಸ್ತೋಮ ಸ್ಪಂದಿಸಿದೆ. ಜೊತೆಗೆ, ತಿರುಪತಿ ಹಾಗೂ ತಿರುಮಲದಲ್ಲಿ ಆರೋಗ್ಯ…

Read More