ತಿರುಪತಿ ತಿಮ್ಮಪ್ಪನ ಜನ್ಮ ಚರಿತ್ರೆ ಇಲ್ಲಿದೆ

ನಮ್ಮ  ನಕ್ಷತ್ರಮಂಡಲವು, ವಿಷ್ಣು ಚಕ್ರದ ಆಕಾರದಲ್ಲಿದೆ. ಈ ಚಕ್ರಾಕಾರದ ಒಂದು ಅಂಚಿನಲ್ಲಿ ಇರುವುದೇ ಸೂರ್ಯ ಮಂಡಲ. ಸೂರ್ಯನಂತಹ, ಕೋಟ್ಯಂತರ ನಕ್ಷತ್ರಗಳು ಸೌರ ಮಂಡಲದಲ್ಲಿವೆ. ಇದನ್ನೇ ನಕ್ಷತ್ರಪುಂಜ ಅಥವಾ ನಕ್ಷತ್ರ ಮಂಡಲ ಎಂದು ಕರೆಯಲಾಗುತ್ತದೆ. ಇವುಗಳ ಮಧ್ಯೆ ಇರುವ ಮಕರ ರಾಶಿಯ ಶ್ರವಣ ನಕ್ಷತ್ರದಿಂದಲೇ ಶ್ರೀ ಮಹಾವಿಷ್ಣು ಭುವಿಗಿಳಿದು ಬಂದ ಎಂಬುದು ಪುರಾಣ ಐತಿಹ್ಯ. ಹೀಗಾಗಿ, ಶ್ರೀನಿವಾಸನ ಜನ್ಮ ನಕ್ಷತ್ರವನ್ನ ಶ್ರವಣ ನಕ್ಷತ್ರ ಎಂದು ಕರೆಯಲಾಗುತ್ತದೆ. ಈ ದಿವ್ಯ ವಿಮಾನದ ಪ್ರತಿರೂಪವೇ ಇಂದಿನ ಆನಂದ ನಿಲಯ ವಿಮಾನ. ಆ ದಿವ್ಯ ವಿಮಾನ, ಇಂದಿಗೂ, ಮಾನವನಿಗೆ ಅದೃಶ್ಯವಾಗಿ, ನಾರಾಯಣಗಿರಿಯಲ್ಲಿ ನಿಕ್ಷಿಪ್ತವಾಗಿ ಇದೆ ಎಂದು ಪುರಾಣಗಳ ಮೂಲಕ ತಿಳಿದು ಬರುತ್ತದೆ.ಶ್ರೀವೆಂಕಟೇಶ್ವರ ಸ್ವಾಮಿಯ ದಿವ್ಯಮಂಗಳ ಸಾಲಿಗ್ರಾಮ ಶಿಲಾ ಸ್ವರೂಪ, ಸುಮಾರು ಒಂಬತ್ತೂವರೆ ಅಡಿ ಎತ್ತರವಿದೆ. ಶುಕ್ರವಾರ ನಡೆಯುವ ಅಭಿಷೇಕದ ಸೇವೆಯಲ್ಲಿ, ಸ್ವಾಮಿಯ ದಿವ್ಯಮಂಗಳ ಸ್ವರೂಪದ ದರ್ಶನ ಪಡೆಯಬಹುದು. ಶ್ರೀನಿವಾಸ ಎಂಬ ನಾಮದ ಪ್ರತೀಕವಾಗಿ, ಶ್ರೀಗಳ ವೃಕ್ಷಸ್ಥಳದ ಬಲಭಾಗದಲ್ಲಿ, ಲಕ್ಷ್ಮೀದೇವಿ ನೆಲೆಸಿದ್ದಾಳೆ. ಆಗಮ ಶಾಸ್ತ್ರದಲ್ಲೂ ಮಹಾವಿಷ್ಣುವಿನ ಬಲ ವೃಕ್ಷಸ್ಥಳದಲ್ಲಿ ಶ್ರೀವತ್ಸ ಎಂಬ ಮಚ್ಛೆಯಾಗಿ, ಮಾತೃಶ್ರೀ ನೆಲೆಸಿದ್ದಾರೆ. ಪ್ರಲಾಂಬಯಜ್ಞೋಪವಿತ, ಶಂಕಚಕ್ರ ಸಮೇತ, ವೃಕ್ಷಸ್ಥಳದಲ್ಲಿರುವ ಶ್ರೀವತ್ಸವೂ ಸಹ, ಮಹಾವಿಷ್ಣುವಿನ ಬಗ್ಗೆ ತಿಳಿಸುವ ಶಿಲ್ಪಶಾಸ್ತ್ರ ಸೂತ್ರವಾಗಿದೆ.

ನಿರಂತರ ದೈವ ಚಿಂತನೆಯಿಂದ, ಸ್ವಾರ್ಥರಹಿತ ಪೂಜೆಗಳಿಂದ,  ಪವಿತ್ರ ಗಾಯತ್ರಿ ಮಂತ್ರ ಜಪದಿಂದ, ಪರಮ ನಿಗೂಢವಾದ ಆಗಮಸೂಕ್ತಿಗಳೊಂದಿಗೆ, ತನ್ನನ್ನು ತಾನು ಶ್ರೀ ನಾರಾಯಣನಾಗಿ, ಅವಗಾಹನೆ ಮಾಡಿಕೊಂಡು, ಶ್ರೀಗಳ ಅರ್ಚತಾವತಾರಕ್ಕೆ ಆರಾಧನೆ ಮಾಡುವ ಯೋಗ್ಯತೆಯನ್ನ ಸಂಪಾದಿಸಿಕೊಂಡಿರುವವರು ಮಾತ್ರವೇ, ಗರ್ಭಾಲಯ ಪ್ರವೇಶಿಸಬಹುದು. ಹಾಗೇ, ಪರಮಾತ್ಮನ ದೇಹ ಸ್ಪರ್ಶಿಸಲು ಅರ್ಹತೆಯೂ ಅವರಿಗಷ್ಟೇ ಇರುತ್ತದೆ. ಲೌಕಿಕವಾದ ಭಾವನೆಗಳು ಸಹಾ ಪರಮಾತ್ಮನ ಬಿಂಬವನ್ನ ಮಲಿನ ಮಾಡಿ, ದಿವ್ಯ ತೇಜಸ್ಸನ್ನು ಕುಗ್ಗಿಸಿ, ದೈವ ಸಾನಿಧ್ಯವನ್ನ ಭಕ್ತರಿಗೆ ದೊರೆಯದಂತೆ ಮಾಡುತ್ತದೆ.

ಗರ್ಭಗುಡಿಯ ಮತ್ತು ಆಲಯದ ಪಾವಿತ್ರ್ಯತೆಯನ್ನು ಕಾಪಾಡುವ ಪ್ರಕ್ರಿಯೆ ಕೂಡಾ, ಅರ್ಚಕರ ಹೆಗಲ ಮೇಲಿರುತ್ತದೆ. ಪರಮಾತ್ಮನ ಚತುರ್ಭುಜ. ಅವುಗಳನ್ನ ಶುಕ್ರವಾರದ ಅಭಿಷೇಕದ ಸಂದರ್ಭದಲ್ಲಿ ದರ್ಶನ ಮಾಡಬಹುದು. ಆ ನಂತರ, ಮಾಡುವ ಅಲಂಕಾರದಲ್ಲಿ, ಪೀತಾಂಬರಗಳಿಂದ, ಪುಷ್ಪಾಲಂಕಾರದಿಂದ, ಶ್ರೀಗಳು ಹಿಡಿದಿರುವ ಬಾಹುಗಳು ಗೋಚರವಾಗುವುದಿಲ್ಲ.

ಸ್ವಾಮಿಯ ಪ್ರಸಾದವನ್ನ ಭಕ್ತಿಯಿಂದ ಸ್ವೀಕರಿಸುವ ಎಲ್ಲರೂ ಶ್ರೀನಿವಾಸನ ಭಕ್ತರೇ. ಭಕ್ತಿ ಎಂಬುದು, ಪೂರ್ವಜನ್ಮದ ಸುಕೃತ. ಜಾತಿ, ಮತಗಳೆಂಬುದು ಈ ಜನ್ಮದ ಮೂಲಕ ನಮ್ಮ ದೇಹಕ್ಕೆ ಲಭಿಸಿದೆ ಅಷ್ಟೇ. ಆದ್ರೆ, ಆತ್ಮಕ್ಕೆ ಜಾತಿ, ಮತಗಳ ಬೇಧ ಭಾವ ಇರುವುದಿಲ್ಲ.

Thirupati

 Related posts

Leave a Comment