ತಿರುಪತಿ ಅನ್ನ ಸಂತರ್ಪಣೆ : ಸಾಂಬಶಿವರಾವ್ ರಿಂದ ಭಕ್ತರ ಅಭಿಪ್ರಾಯ ಸಂಗ್ರಹ

ಟಿಟಿಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಬಶಿವರಾವ್, ಬೆಳಿಗ್ಗೆ ತಿರುಮಲದಲ್ಲಿ ಭಕ್ತರ ಅಭಿಪ್ರಾಯ ಸಂಗ್ರಹಿಸಿದರು. ಅನ್ನ ಸಂತರ್ಪಣೆ ಕೇಂದ್ರದ ಕಟ್ಟಡಕ್ಕೆ ಆಗಮಿಸಿದ ಅವರು, ಅಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಪಾದರಕ್ಷೆಗಳನ್ನ ಕಂಡು ಅಸಮಾಧಾನಗೊಂಡರು. ಕೂಡಲೇ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದರು. ಅನ್ನ ಸಂತರ್ಪಣೆ ಕಟ್ಟಡದಲ್ಲಿ, ಎಷ್ಟೇ ಭಕ್ತರೂ ಬಂದರೂ, ಅವರ ಪಾದರಕ್ಷೆ ಬಿಡಲು, ಸ್ಟ್ಯಾಂಡ್ ನಿರ್ಮಿಸಲು, ಸೂಚಿಸಿದರು. ಇದಾದ ಬಳಿಕ,  300 ರೂಪಾಯಿ ಟಿಕೆಟ್ ಕೌಂಟರ್ ಬಳಿಗೆ ಬಂದರು. ಅಲ್ಲಿ ಭಕ್ತರ ಅಹವಾಲು ಕೇಳಿದರು. ಆಗಬಹುದಾದ, ಬದಲಾವಣೆಗಳ ಬಗ್ಗೆ ಸಲಹೆಗಳನ್ನೂ ಕೇಳಿದರು. ನಂತರ, ಅನ್ನ ಸಂತರ್ಪಣೆಯ ಅಡುಗೆ ಕೋಣೆಗೆ ಹೋದ ಸಾಂಬಶಿವರಾವ್, ಅನ್ನ ಸಂತರ್ಪಣೆಗೆ ಬಳಸುತ್ತಿರುವ ಅಕ್ಕಿ ಹಾಗೂ ಇತರೇ ಸಾಮಾಗ್ರಿಗಳ ಗುಣಮಟ್ಟವನ್ನೂ ಪರಿಶೀಲಿಸಿದ್ದಾರೆ.eo inspection at annaprasadam complexRelated posts

Leave a Comment