ತಿರುಚನ್ನೂರ್ ನಲ್ಲಿ ಹೊಸ ಲಡ್ಡು ಕೌಂಟರ್

ತಿರುಚನ್ನೂರಿನ ಶ್ರೀ ಪದ್ಮಾವತಿ ಅಮ್ಮನವರ ದೇವಾಲಯದಲ್ಲಿ ಲಡ್ಡು ವಿತರಣೆಯ ಹೊಸ ಕೌಂಟರ್ ತೆರೆಯಲಾಗಿದೆ. ಈ ಮೊದಲಿದ್ದ ಕೌಂಟರ್ ನಲ್ಲಿ ಸ್ಥಳಾವಕಾಶ ಕಡಿಮೆ ಇದ್ದುದರಿಂದ ಇಕ್ಕಟ್ಟಾಗಿತ್ತು. ಹೀಗಾಗಿ, ಟಿಟಿಡಿ ಅಧ್ಯಕ್ಷ ಡಾ. ಸಾಂಬಶಿವರಾವ್, ಹೊಸ ಕೌಂಟರ್ ತೆರೆಯಲು ಮುಂದಾಗಿದ್ದರು. ಅದರಂತೆ, ಚೆನ್ನೈನ ಭಕ್ತರೊಬ್ಬರು, ಹೊಸ ಕಟ್ಟಡಕ್ಕಾಗಿ 80 ಲಕ್ಷ ರೂಪಾಯಿಗಳನ್ನ ದಾನವಾಗಿ ನೀಡಿದ್ದರು. ಈಗ ಸುಸಜ್ಜಿತವಾದ ಕಟ್ಟಡದಲ್ಲಿ ಹೊಸ ಕೌಂಟರ್ ಆರಂಭವಾಗಿದೆ. ಭಕ್ತರು, ಬಾರ್ – ಕೋಡೆಡ್ ಕೂಪನ್ ಗಳ ಮೂಲಕ ಲಡ್ಡುಗಳನ್ನ ಪಡೆಯುತ್ತಿದ್ದಾರೆ.

Related posts

Leave a Comment