ಅಮೆರಿಕಾದಲ್ಲೂ ನೆಲೆ ನಿಂತಿದ್ದಾನೆ ಶ್ರೀನಿವಾಸ

ಪೆನಿಸಿಲ್ವೇನಿಯಾ. ಅಮೆರಿಕದ ಈ ಸುಂದರ ಮಲೆನಾಡಿನಲ್ಲಿ, ಪರಮಾತ್ಮ ಶ್ರೀನಿವಾಸ ನೆಲೆಸಿದ್ದಾನೆ. ಪೆನ್ ಹಿಲ್ಸ್ ನಡುವೆ, ಶ್ರೀನಿವಾಸನ ಬೃಹತ್ ದೇವಾಲಯವಿದೆ. 1976ರಲ್ಲೇ, ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸುಂದರ ಗಿರಿ ಶಿಖರಗಳ ನಡುವೆ, ವೆಂಕಟೇಶ್ವರನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಅಮೆರಿಕಾದಲ್ಲಿರುವ ಭಾರತೀಯರ ಪಾಲಿಗೆ, ಇದೇ ತಿರುಪತಿ. ತಿರುಪತಿಯಲ್ಲಿ ಹೇಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆಯೋ, ಆ ರೀತಿಯಲ್ಲೇ, ಇಲ್ಲಿಯೂ ಪೂಜೆ ನಡೆಯುತ್ತವೆ. ವಾರಾಂತ್ಯದಲ್ಲಿ, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕ. ಈ ದೇವಾಲಯ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯೂ ಕೈ ಜೋಡಿಸಿದೆ. ತಿರುಪತಿ ವೆಂಕಟೇಶ್ವರ ದೇವಾಲಯ ಮಾದರಿಯಲ್ಲೇ, ಇದನ್ನೂ ಸಹ ನಿರ್ಮಿಸಲಾಗಿದೆ. ಸುಬ್ಬುಲಕ್ಷ್ಮಿ ಅವರ ಸುಪ್ರಭಾತ, ಪೆನಿಸಿಲ್ವೇನಿಯಾದ ಈ ದೇವಾಲಯದ ಮೂಲಕವೇ, ಇಡೀ ಅಮೆರಿಕಾದಲ್ಲಿ ಹಬ್ಬಿದೆ.

Related posts

Leave a Comment