ನವೆಂಬರ್ 7. 1979. ಅಂದು ತಿರುಪತಿಯಲ್ಲಿ ನಡೆದದ್ದಾದರೂ ಏನು…?

ಅಂದು ನವೆಂಬರ್ 7. 1979. ಮಧ್ಯರಾತ್ರಿ. ಇಡೀ ತಿರುಪತಿ ಗಾಢ ನಿದ್ರೆಯಲ್ಲಿತ್ತು. ಕಾಡಿನ ಕಡೆಯಿಂದಲೂ ಯಾವ ಶಬ್ಧವೂ ಇಲ್ಲ. ಬಹಳ ಭೀತಿ ಹುಟ್ಟಿಸುವಂತಹ ನಿಶ್ಯಬ್ಧತೆ. ಇದ್ದಕ್ಕಿದ್ದಂತೇ, ತಿರುಪತಿ ತಿಮ್ಮಪ್ಪನ ದೇವಾಲಯದ ಒಳಗಿನಿಂದ ಬೃಹತ್ ಗಾತ್ರದ ಕಂಚಿನ ಗಂಟೆ ಹೊಡೆದುಕೊಳ್ಳಲಾರಂಭಿಸಿತು. ಸಾಮಾನ್ಯ ಮಾನವರು, ನಿತ್ಯ ಗಂಟೆ ಬಾರಿಸುವುದಕ್ಕಿಂತ, ವೇಗವಾಗಿ, ಗಂಟೆಯ ಸದ್ದು ಬರುತ್ತಿತ್ತು. ಆ ನೀರವ ಮೌನದಲ್ಲಿ ಈ ಗಂಟೆಯ ಶಬ್ಧ, ಇಡೀ ತಿರುಪತಿ ಬೆಟ್ಟವನ್ನ ಆವರಿಸಿತು. ಗಂಟೆಯ ನಿನಾದ ಕೇಳಿದ, ಭದ್ರತಾ ಸಿಬ್ಬಂದಿ, ತಿರುಪತಿ ಪೊಲೀಸರು, ಅರ್ಚಕರು, ಟಿಟಿಡಿ ಅಧಿಕಾರಿಗಳು ಎಲ್ಲರೂ ದೇವಾಲಯದ ಮುಂದಿನ ಭಾಗಕ್ಕೆ ಓಡಿ ಬಂದರು. ಈ ಗಂಟೆ, ತಿಮ್ಮಪ್ಪನ ಗರ್ಭಗುಡಿಯ ಚಿನ್ನದ ಬಾಗಿಲಿನ ಎದುರಿಗೇ ಇದೆ. ಒಂದೇ ಸಮನೇ, ಗಂಟೆ ಬಾರಿಸುತ್ತಿತ್ತು. ಎಲ್ಲರೂ, ಇದೇನಪ್ಪ, ಇಷ್ಟೊತ್ತಿನಲ್ಲಿ, ದೇವಾಲಯದ ಗಂಟೆ ಬಾರಿಸುತ್ತಿರುವವರು ಯಾರು ಎಂದು ಆಶ್ಚರ್ಯಚಕಿತರಾದರು. ಅಷ್ಟೊತ್ತಿನಲ್ಲಿ ಒಳಗೆ ಹೋಗುವಂತೆಯೂ ಇಲ್ಲ. ಪರಮಾತ್ಮನಿಗೆ ನಿದ್ರಾಭಂಗ ಆದರೆ ಎಂಬ ಆತಂಕ. ಮುಂಜಾನೆ, ಸುಪ್ರಭಾತ ಸೇವೆಗೆ ಮುನ್ನವಷ್ಟೇ, ದೇವಾಲಯದ ಬಾಗಿಲು ತೆರೆಯಬೇಕು. ಸರಿ, ಮುಂಜಾನೆ, 4 ಗಂಟೆ ಹೊತ್ತಿನವರೆಗೂ ಅರ್ಚಕರು, ಪೊಲೀಸರು, ಟಿಟಿಡಿ ಅಧಿಕಾರಿಗಳು ಎಲ್ಲರೂ ಕಾದರು. 4 ಗಂಟೆ ಆಗ್ತಾ ಇದ್ದಂತೆ, ಎಂದಿನ ವಿಧಿ ವಿಧಾನ ಪೂರೈಸಿ, ದೇವಾಲಯದ ಒಳಗೆ ಹೋಗಲಾಯ್ತು. ಪೊಲೀಸರು, ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರು. ಅರ್ಚಕರೂ, ದೇವಾಲಯದ ಮೂಲೆ ಮೂಲೆ ತಡಕಾಡಿದರು. ಒಳಗೆ ಯಾರೂ ಇಲ್ಲ. ಹಾಗಾದ್ರೆ, ಆ ಮಧ್ಯರಾತ್ರಿಯಲ್ಲಿ, ದೇವಾಲಯದ ಒಳಗೆ ಗಂಟೆ ಬಾರಿಸಿದ್ದು ಯಾರು….? ಆ ನಿಗೂಢತೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

Related posts

Leave a Comment