ಸಾವಿರ ವರ್ಷದಿಂದಲೂ ಈ ದೀಪ ಉರಿಯುತ್ತಲೇ ಇದೆ!

ನಿಮಗೆ ಗೊತ್ತಾ. ತಿಮ್ಮಪ್ಪ, ಗರ್ಭಗುಡಿಯ ಯಾವ ಮೂಲೆಯಲ್ಲಿ ನಿಂತಿದ್ದಾನೆ ಎಂದು? ನೀವಂದುಕೊಂಡಂತೆ, ಶ್ರೀನಿವಾಸ, ಗರ್ಭಗುಡಿಯ ಮಧ್ಯಭಾಗದಲ್ಲಿ ನಿಂತಿಲ್ಲ. ಗರ್ಭಗುಡಿಯ ಬಲಭಾಗದಲ್ಲಿದ್ದಾನೆ ವೆಂಕಟೇಶ್ವರ. ಕುಬೇರ ಮೂಲೆಯಿಂದ ಪರಮಾತ್ಮನ ದರ್ಶನಕ್ಕೆ ಹೋಗುವಾಗ, ನಿಮಗೆ ಇದು, ಅನುಭವಕ್ಕೆ ಬರುತ್ತದೆ. ಇನ್ನೂ ಸೋಜಿಗದ ಸಂಗತಿ ಎಂದ್ರೆ, ಗರ್ಭಗುಡಿಯಲ್ಲಿ ಮಿನುಗುತ್ತಿರುವ ಉಯ್ಯಾಲೆ ದೀಪ. ಈ ದೀಪ, ಎಂದಿಗೂ ಆರುವುದೇ ಇಲ್ಲ. ಇದನ್ನ ಯಾವಾಗ ಹಚ್ಚಿಡಲಾಯ್ತು ಎಂಬ ಬಗ್ಗೆ ತಿರುಪತಿ ದಾಖಲೆಯಲ್ಲಿಯೂ ಇಲ್ಲ. ಒಂದು ನಂಬಿಕೆ ಪ್ರಕಾರ, ಸಾವಿರ ವರ್ಷದಿಂದಲೂ ಈ ನಂದಾದೀಪ ಪ್ರಜ್ವಲಿಸುತ್ತಲೇ ಇದೆ. ನಿಜಕ್ಕೂ, ಆ ವೈಕುಂಠವಾಸನ ಮಹಿಮೆ ಅಪಾರವಲ್ಲವೇ? 

 Related posts

Leave a Comment