ನಿಜರೂಪ ದರ್ಶನಕ್ಕೆ ಲಕ್ಷ್ಮೀದೇವಿ ಬರುತ್ತಾಳೆ ಗೊತ್ತಾ…!

Thirupati

ಲಕ್ಷ್ಮೀದೇವಿ, ಸದಾ ಪರಮಾತ್ಮನ ಹೃದಯ ಕಮಲದಲ್ಲೇ ಇರುತ್ತಾಳೆ. ಶ್ರೀನಿವಾಸನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳೆ. ತಿರುಪತಿ ತಿಮ್ಮಪ್ಪನ ವ್ರಕ್ಷಸ್ಥಳವನ್ನ ಸದಾ ಶ್ರೀಗಂಧದಿಂದ ಲೇಪಿಸಿರಲಾಗುತ್ತದೆ. ಪ್ರತೀ ಗುರುವಾರ, ಮುಂಜಾನೆ ಸುಪ್ರಭಾತ ಸೇವೆಗೂ ಮುನ್ನ, ನಿಜರೂಪ ದರ್ಶನದ ವೇಳೆ, ಶ್ರೀನಿವಾಸನ ವ್ರಕ್ಷಸ್ಥಳದ ಮೇಲಿನ ಶ್ರೀಗಂಧದ ಲೇಪನವನ್ನ ತೆಗೆಯಲಾಗುತ್ತದೆ. ಆಗ, ಆ ಶ್ರೀಗಂಧದಲ್ಲಿ, ಲಕ್ಷ್ಮೀದೇವಿ ಅಚ್ಚೊತ್ತಿರುತ್ತದೆ. ಸದಾ ವೆಂಕಟೇಶ್ವರನ ಎದೆಯ ಮೇಲೇ ಇರುವ ಲಕ್ಷ್ಮೀದೇವಿ, ಶ್ರೀಗಂಧದಲ್ಲಿ ಒಡ ಮೂಡಿರುತ್ತಾಳೆ. ಪ್ರತೀ ಗುರುವಾರವೂ, ಲಕ್ಷ್ಮೀದೇವಿ ಅಚ್ಚೊತ್ತಿರುವ ಶ್ರೀಗಂಧವನ್ನು ಮಾರಾಟ ಮಾಡಲಾಗುತ್ತದೆ. ಇದನ್ನ ಕೊಳ್ಳಲು ಬಹಳ ಪೈಪೋಟಿಯೇ ಇರುತ್ತದೆ. 

 Related posts

Leave a Comment