ಮನೆಯಲ್ಲೇ ಕುಳಿತು ತಿಮ್ಮಪ್ಪನ ಹುಂಡಿಗೆ ಕಾಸು ಹಾಕಿ

ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಗುಡ್ ನ್ಯೂಸ್. ತಿರುಪತಿಗೆ ಹೋದರೂ, ಅಲ್ಲಿ ದರ್ಶನಕ್ಕೆ ಗಂಟೆ ಗಟ್ಟಲೇ ಕಾಯಬೇಕು. ಲಡ್ಡು ಬೇಕಂದ್ರೆ ಕಾಯಬೇಕು. ಉಳಿದುಕೊಳ್ಳಲು ರೂಂ ಸಿಗೋಲ್ಲ. ಒಂದು ದಿನಕ್ಕೆ ಮಿನಿಮಮ್ ಎಪ್ಪತ್ತು ಸಾವಿರ ಭಕ್ತರು ಭೇಟಿ ನೀಡುವಾಗ,ಇಷ್ಟೊಂದು ಗೊಂದಲ ಸಹಜ. ಇದೆಲ್ಲವನ್ನೂ ಮನಗಂಡ ಟಿಟಿಡಿ, ಈಗ ಮತ್ತಷ್ಟು ಸುಧಾರಿತ ವೆಬ್ ಸೈಟ್ ಲಾಂಚ್ ಮಾಡಿದೆ.  ಆನ್ ಲೈನ್ ನಲ್ಲೇ ಹುಂಡಿಗೆ ಹಣ ಹಾಕುವುದು, ದಾನ ಮಾಡುವುದು, ಶೀಘ್ರ ದರ್ಶನ, ಆನ್ ಲೈನ್ ನಲ್ಲೇ ರೂಂ ಬುಕ್ಕಿಂಗ್ ಇವೆಲ್ಲಾ ಸುಲಭವಾಗಲಿದೆ. ಇಂದು, ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಾ, ಸಾಂಬಶಿವರಾವ್, ಈ ನೂತನ ವೆಬ್ ಸೈಟ್ ನ ಪ್ರಾಯೋಗಿಕ ಟೆಸ್ಟ್ ನಡೆಸಿದರು.ಕೆಲವೇ ದಿನಗಳಲ್ಲಿ ಇದನ್ನ ಭಕ್ತರಿಗೆ ಪರಿಚಯಿಸಲಾಗುವುದು.

Related posts

Leave a Comment