ತಿರುಪತಿಯಲ್ಲಿ ಟಿಡಿಪಿ ಮೆಗಾ ಸಮಾವೇಶ ಆರಂಭ!

ತಿರುಪತಿ: ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ಮೂರು ದಿನಗಳ ಮಹಂದು (ಮೆಗಾ ಸಮಾವೇಶ) ಶುಕ್ರವಾರ ತಿರುಪತಿ ದೇವಾಲಯ ಆವರಣದಲ್ಲಿ ಆರಂಭಗೊಂಡಿತು.ತೆಲಂಗಾಣ ಮತ್ತು ಆಂದ್ರ ಪ್ರದೇಶದಿಂದ ಆಗಮಿಸಿದ್ದ ಬೃಹತ್ ಸಂಖ್ಯೆಯ ಪಕ್ಷದ ಮುಖಂಡರು ಮತ್ತು  ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಟಿಡಿಪಿ ಪಕ್ಷವು ಆಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವಾದರೆ, ತೆಲಂಗಾಣದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ.

ಟಿಡಿಪಿ ಪಕ್ಷದ  ಅಧ್ಯಕ್ಷ ಮತ್ತು ಆಂದ್ರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಎನ್.ಚಂದ್ರಬಾಬು ನಾಯ್ಡು ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆಗೆ ಎನ್.ಟಿ. ರಾಮ ರಾವ್ ಅವರ ಛಾಯಾಚಿತ್ರ ಪ್ರದರ್ಶನ ಮಳಿಗೆಯೊಂದನ್ನೂ ಉದ್ಘಾಟನೆ ಗೈದರು.Related posts

Leave a Comment