ವಿವಾದಕ್ಕೆ ಕಾರಣವಾದ ಅನ್ಯ ಕೋಮಿನ ಧ್ವಜ!

ತಿರುಮಲ ಬೆಟ್ಟದಲ್ಲಿ ಒಂದು ನಿರ್ದಿಷ್ಟ ಕೋಮಿಗೆ ಸೇರಿದ ಧ್ವಜವೊಂದು ತೀವ್ರ ವಿವಾದ ಸೃಷ್ಟಿಸಿದೆ.ಮಾಧ್ಯಮಗಳ  ಮಾಹಿತಿ ಮೇರೆಗೆ ಬಾವುಟವನ್ನು ಪರಿಶೀಲನೆ ನಡೆಸಿರುವ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ಧ್ವಜ  ಇಸ್ಲಾಂ ಧರ್ಮಕ್ಕೆ ಸೇರಿದ್ದು ಎಂದು ಗುರುತಿಸಿ ಅದನ್ನು ತೊಲಗಿಸಿದ್ದಾರೆ.

ಪ್ರಸ್ತುತ ಬೆಟ್ಟದಲ್ಲಿ ಬಾವುಟ ನೆಟ್ಟವರ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ತಿರುಮಲದ ಪಾಪವಿನಾಶನಂ ಮಾರ್ಗಮಧ್ಯದಲ್ಲಿ ಇರುವ ಜಪಾಲಿ ತೀರ್ಥದ ಬಳಿ ಅಪರಿಚಿತ ವ್ಯಕ್ತಿಗಳು ಧ್ವಜವನ್ನು ನೆಟ್ಟು ಹೋಗಿದ್ದಾರೆ.

ಭಾನುವಾರ ಸಂಜೆ ಇದು ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ. ಕೂಡಲೇ ಮಾಧ್ಯಮ ಮಿತ್ರರು ತನಿಖಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಟಿಟಿಡಿ ತನಿಖಾಧಿಕಾರಿಗಳು ಅಲ್ಲಿಂದ ಧ್ವಜವನ್ನು ತೆರವುಗೊಳಿಸಿದ್ದಾರೆ. ನೆಟ್ಟ ಬಾವುಟ ಯಾವ ಧರ್ಮಕ್ಕೆ ಸೇರಿದ್ದು ಎಂದು ಖಚಿತವಾಗಿ ತಿಳಿದಿಲ್ಲವಾದರೂ ತನಿಖಾ ಅಧಿಕಾರಿಗಳು ಮಾತ್ರ ಅದು ಇಸ್ಲಾಂ ಧರ್ಮಕ್ಕೆ ಸೇರಿದ್ದು ಎಂದು ತಿಳಿಸಿದ್ದಾರೆ.

ಟಿಟಿಡಿ ವಿಜಿಲೆನ್ಸ್  ಸೆಕ್ಟಾರ್-3 ಎವಿ ಅಂಡ್ ಎಸ್ಓ ವೆಂಟಾದ್ರಿ ಮಾಧ್ಯಮಗಳೊಂದಿಗೆ ಮಾತನಾಡಿ ” ಅಪರಿಚಿತ ವ್ಯಕ್ತಿಗಳು ಜಪಾಲಿ ತೀರ್ಥದ ಬಳಿ ಇಸ್ಲಾಂ ಧರ್ಮಕ್ಕೆ ಸೇರಿದ್ದ ಧ್ವಜವನ್ನು ನೆಟ್ಟು ಹೋಗಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದು, ಅವರ ಆದೇಶಾನುಸಾರ ಮುಂದಿನ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ನಡುವೆ ಜಪಾಲಿ ತೀರ್ಥದ ಬಳಿ ನೆಡಲಾಗಿದ್ದ ಬಾವುಟ ಉತ್ತರ ಭಾರತದ ಕೆಲವು ಹಿಂದು ಸಮುದಾಯಗಳಿಗೆ ಸೇರಿರಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಇದೇ ನಿಜವಾದರೆ ಇಸ್ಲಾಂ ಧರ್ಮದ ಬಾವುಟ ಎಂಬ ವಿವಾದ ದೂರವಾಗಲಿದೆ.

ಅದೇನೆ ಇರಲಿ, ಟಿಟಿಡಿಯ ಅನುಮತಿ ಪಡೆಯದೇ ಧ್ವಜ ನೆಟ್ಟದ್ದು ತೀವ್ರ ವಿವಾದಕ್ಕೆ ಗುರಿಯಾಗಿರುವುದಂತೂ ನಿಜ.  ಇದು ಹೀಗೆ ಮುಂದುವರೆದರೆ ಮತೋನ್ಮಾದ ಹೆಚ್ಚಾಗಿ ತಿರುಮಲ ಪಾವಿತ್ರ್ಯತೆಗೆ ಧಕ್ಕೆ ಬರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

 Related posts

Leave a Comment