ಗೋವುಗಳ ಸಂರಕ್ಷಣೆಗೆ ಮುಂದಾದ ತಿರುಪತಿ ದೇವಸ್ಥಾನ.

ತಿರುಪತಿ: ಗೋವುಗಳ ಹತ್ಯೆಯನ್ನು ತಡೆಯಲು ಹಾಗೂ ಗೋವುಗಳನ್ನು ಸಂರಕ್ಷಿಸಲು ಮುಂದಾಗಿರುವ ತಿರುಮಲ ತಿರುಪತಿ ದೇವಸ್ಥಾನವು ಶೀಘ್ರದಲ್ಲಿಯೇ ಹಿಂದೂ ಧರ್ಮದಲ್ಲಿ ಗೋವುಗಳ ಮಹತ್ವವನ್ನು ತಿಲಿಪಡಿಸುವ ಪುಸ್ತಕವೊಂದನ್ನು ಹೊರತರುವುದಾಗಿ ಹೇಳಿದೆ.ಶುಕ್ರವಾರದಂದು ದೇವಸ್ಥಾನ ಮಂಡಳಿಯ ಕಾರ್ಯಕಾರಿ ಅಧಿಕಾರಿ ದೇವಸ್ಥಾನದ ಭಕ್ತಾದಿಗಳೊಂದಿಗೆ ಫೋನ್-ಇನ್ ಕಾರ್ಯಕ್ರಮದ ವೇಳೆ ಆಂಧ್ರ ಪ್ರದೇಶದ ಚಿತ್ತೊರಿನ ನಾರಾಯಣ ಸ್ವಾಮಿ ಯವರ ಅಹವಾಲನ್ನು ಫೋನ್ ಮೂಲಕ ಸ್ವೀಕರಿಸಿದರು.

ಗೋವುಗಳ ಹಿಂಸಾತ್ಮಕ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನವು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡರು. ಇದಕ್ಕೆ ಉತ್ತರ ನೀಡಿದ ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಗೋವುಗಳ ಪೂಜೆಯು ದೇವಸ್ಥಾನದಲ್ಲಿ ಪ್ರತಿ ವರ್ಷದ ಕಾಣುಮ ದಿನ (ಸಂಕ್ರಾಂತಿ ದಿನ) ದಂಡು ಆಚರಿಸಲ್ಪಡುತ್ತಿದೆ. ಅಷ್ಟೇ ಅಲ್ಲದೆ ಗೋವುಗಳ ಸಂರಕ್ಷಣೆಯ ಬಗ್ಗೆ ಹಾಗೂ ಹಿಂದೂ ಧರ್ಮದಲ್ಲಿ ಅದರ ಮಹತ್ವದ ಬಗ್ಗೆ ತಿಳಿಪಡಿಸಲು ಶೀಘ್ರವೇ ಪುಸ್ತಕವೊಂದನ್ನು ತರುವುದಾಗಿ ಹಾಗೂ ಗೋವುಗಲ್ ಸಂರಕ್ಷಣೆ ಅತ್ಯಂತ ಮುಖ್ಯ ಕಾರ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ.Related posts

Leave a Comment