ಭಕ್ತರ ಅನುಕೂಲಕ್ಕೆ ಹೊಸ ತಂತ್ರಾಂಶ.

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಗೆ ಉದಾರ ಹೃದಯದಿದ ದಾನ ನೀಡುತ್ತಿರುವ ದಾನಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಎಸ್ ಎಂ ಎಸ್  ಅಲರ್ಟ್  ತತ್ರಾಂಶವೊಂದನ್ನು ಸಿದ್ಧಪಡಿಸುವಂತೆ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಾ. ಸಾಂಬಶಿವರಾವ್ ಅವರು ಅಧಿಕಾರಿಗಳನ್ನು ಆದೇಶಿಸಿದ್ದಾರೆ.

ತಿರುಮಲದ  ಅನ್ನಮಯ್ಯ ಭವದಲ್ಲಿ ಮಂಗಳವಾರ ನಡೆದ ವಾರದ ಸಭೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಅವರು ಅವರು ಈ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ತಿಮ್ಮಪ್ಪನ ದರ್ಶನಕ್ಕೆ ಬರುವ ದಾನಿಗಳಿಗೆ ದರ್ಶನ, ವಸತಿ, ಪ್ರಸಾದ ವಿತರಣೆ ಮುಂತಾದ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವುದಲ್ಲದೇ ಅವರು ಹಿಂತಿರುಗಿ ಹೋಗುವಾಗ ಪಡೆದುಕೊಂಡ ಸೌಲಭ್ಯಗಳ ಮಾಹಿತಿ ನೀಡುವಂತಹ ಎಸ್ ಎಂ ಎಸ್ ಅಲರ್ಟ್ ರೂಪದ ತಂತ್ರಾಂಶವೊಂದನ್ನು ಸಿದ್ದಪಡಿಸಲು ಅವರು ಆದೇಶಿಸಿದರು. ಈ ರೀತಿ ವಿಧಾನದಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚುವುದಲ್ಲದೇ ದಾನಿಗಳಿಗೆ ಮಾಹಿತಿಯನ್ನೂ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೇ ಎರಡನೇ ಕನುಮ ರಸ್ತೆಯಲ್ಲಿ ನಡೆಯುತ್ತಿರು ಕಾಮಗಾರಿಗಳನ್ನು  ಅವರು ಪರಿಶೀಲನೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬೇಸಿಗೆ ರಜೆಯಲ್ಲಿ ಯಾತ್ರರ್ಥಿಗಳ ಸಂಖ್ಯೆ ಹೆಚ್ಚಾಗುವುದರಿಂದ ಸುಗಮ ದರ್ಶನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಶನಿವಾರ ,ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಭಕ್ತರ ಸರತಿ ಸಾಲುಗಳು ಹೆಚ್ಚಾಗುತ್ತಿಲ್ಲ, ವಾರಾಂತ್ಯದಲ್ಲಿ ಹೆಚ್ಚಾಗುವ ಸರತಿ ಸಾಲುಗಳನ್ನು ನಿಯಂತ್ರಿಸಲು ಸೂಕ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಿರುಮಲ ಜೆಇವೊ ಕೆ.ಎಸ್. ಶ್ರೀನಿವಾಸರಾಜು ಬೇಸಿಗೆ ರಜೆಯಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರು, ವಸತಿ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಟ್ರಸ್ಟ್ ನ ಎಲ್ಲ ವಿಭಾಗಗಳು ಕೃಷಿ ಮಾಡುತ್ತಿವೆ ಎಂದು ತಿಳಿಸಿದರು.

ಸಭೆಯಲ್ಲಿ ಟಿಟಿಡಿಯ ಮುಖ್ಯ ಇಂಜಿನಿಯರ್ ಶ್ರೀ ಚಂದ್ರಶೇಖರ್ ರೆಡ್ಡಿ, ಹೆಚ್ಚುವರಿ ಎಫ್ ಮತ್ತು ಸಿಇವೋ ಶ್ರೀಬಾಲಾಜಿ ಹಾಗೂ ಎಲ್ಲಾ ವಿಭಾಗಗಳ ಅಧಿಕಾರಿಗಳು ಭಾಗವಹಿಸಿದ್ದರು.Related posts

Leave a Comment