ತಿರುಪತಿಯಲ್ಲಿ ಕಟ್ಟಡ ಕುಸಿತ; ಒಬ್ಬ ಸಾವು ಹಾಗೂ ಮತ್ತೊಬ್ಬರ ಸ್ಥಿತಿ ಗಂಭೀರ.

ತಿರುಪತಿ: ತಿರುಪತಿಯ ಸುನ್ನಪು ವೀಧಿ ಪ್ರದೇಶದಲ್ಲಿ ಎರಡಂತಸ್ತಿನ ಕಟ್ಟಡ ಕುಸಿತದ ಕಾರಣ ಒಂದೇ ಮನೆಯ ಒಬ್ಬ ಸಾವನ್ನಪ್ಪಿದ್ದು ಮತ್ತೊಬ್ಬರು ಗಭೀರ ಸ್ಥಿತಿಯಲ್ಲಿದ್ದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತ್ತವರನ್ನು ನಿಹಾರಿಕಾ (15) ಎಂದು ಗುರುತಿಸಲಾಗಿದೆ.ಬುಧವಾರ ಮುಂಜಾನೆ ಈ ದುರ್ಘಟನೆ ನಡೆದಿದ್ದು ತಾಯಿ ಲತಾ ತನ್ನ ಕೆಲಸಕ್ಕೆ ತೆರಳಿದ್ದಾಗ ಕಟ್ಟಡ ಕುಸಿದಿದೆ. ಘಟನೆಯ ನಂತರ ಹಲವು ಸ್ಥಳೀಯರು ಅಕ್ಕತಂಗಿಯರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಕೊನೆಗೆ ಗಾಯಾಳು ಗ್ರೀಷ್ಮಾ ಳನ್ನು ಹತ್ತಿರದ ಶ್ರೀ ವೆಂಕಟೇಶ್ವರ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.

Pot credit: thehindu.comRelated posts

Leave a Comment