ತಿರುಪತಿ ಬಳಿ ರಕ್ತಚಂದನ ಮರ ಕಳ್ಳರಿಂದ ಪೋಲೀಸರ ಮೇಲೆ ದಾಳಿ.

ತಿರುಪತಿ: ತಿರುಪತಿಯ ಬಳಿಯ ಶೇಷಾಚಲಂ ಬೆಟ್ಟದ ಕಾಡಿನಲ್ಲಿ ಶನಿವಾರದಂದು ತಮಿಳುನಾಡು ಮೂಲದ ೧೫ ಜನರ ಕಳ್ಳರ ಗುಂಪೊಂದು ತಿರುಪತಿಯ ಪೋಲೀಸರ ಮೇಲೆ ಕಲ್ಲು ಎಸೆಯುವ ಮೂಲಕ ದಾಳಿ ಮಾಡಿದೆ. ತಿರುಪತಿಯಿಂದ ೨೦ ಕಿ. ಮೀ ದೂರದ ಶೇಷಾಚಲಂ ಬೆಟ್ಟದ ತಪ್ಪಲಿನಲ್ಲಿರುವ ಕರಕಂಬಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ಜರುಗಿದೆ.ರಕ್ತಚಂದನದ ಮರವನ್ನು ಕಡಿದು ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಕಳ್ಳರ ಗುಂಪೊಂದನ್ನು ಚದುರಿಸಲು ಕಾಡಿಗೆ ತೆರಳಿದ್ದ ಕಳ್ಳಸಾಗಣೆ ನಿಗ್ರಹ ದಳದ ಅಧಿಕಾರಿಗಳನ್ನು ಗಮನಿಸಿದ ಕಳ್ಳರು 12 ಜನರಿದ್ದ ಪೋಲೀಸರ ಗುಂಪಿನ ಮೇಲೆ ಕಲ್ಲು ಎಸೆಯುವ ಮೂಲಕ ದಾಳಿ ಮಾಡಿದ್ದಾರೆ.

ನಂತರ ಅಲ್ಲಿಂದ ಕಾಲ್ಕಿತ್ತ ಕಳ್ಳರು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರಿಗೆ ಕಳ್ಳರು ಬಳಸಿದ್ದ ಕೊಡಲಿ ಹಾಗೂ ಇನ್ನಿತರ ವಸ್ತುಗಳು ದೊರೆತಿವೆ. ಹಾಗೇ ತಮಿಳುನಾಡಿನ ಸೇಲಂ ನಿಂದ ಪ್ರಯಾಣ ಮಾಡಿರುವ ಬಸ್ ಟಿಕೆಟ್ ಗಳು ದೊರೆತಿದ್ದು ಇವರು ಅಲ್ಲಿಯ ಸುತ್ತಮುತ್ತಲಿನ ಪ್ರದೇಶದಿಂದ ಬಂದಿರುವುದಾಗಿ ಶಂಕಿಸಲಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ಏಪ್ರಿಲ್ ನಲ್ಲಿ ಕಳ್ಳ ಸಾಗಣೆ ನಿಗ್ರಹ ದಳದ ಪೊಲೀಸರು 20 ಮರಗಳ್ಳರನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದರು. ಹಾಗೆಯೇ ಈ ಹಿಂದೆ ಕೆಲವು  ಪೋಲಿಸ್ ಅಧಿಕಾರಿಗಳೂ ಮರಗಳ್ಳರಿಂದ ಹತ್ಯೆಗೀಡಾಗಿದ್ದರು ಎನ್ನಲಾಗಿದೆ.Related posts

Leave a Comment