ತಿರುಮಲ ಘಾಟ್ ರಸ್ತೆಗಳಿಗೆ 72 ವರ್ಷ.

ಇಡೀ ವಿಶ್ವದ ಗಮನ ಸೆಳೆಯುವಂತಹ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಕ್ಕೆ ಇರುವಂತಹ ಪ್ರಖ್ಯಾತಿ ತಿರುಮಲ ಬೆಟ್ಟದ ಆ ಘಾಟ್ ರೋಡ್ ಗಳಿಗೂ ಸಹ ಇದೆ. ತಿರುಪತಿಯಿಂದ ತಿರುಮಲಕ್ಕೆ ಹೋಗಲು ಅನುಕೂಲವಾಗುವಂತೆ ಈ ರಸ್ತೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ತಿರುಮಲದಿಂದ ತಿರುಪತಿಗೆ ಹೋಗಲು ಮತ್ತೊಂದು ರಸ್ತೆಯನ್ನು ನಿರ್ಮಿಸಲಾಗಿದೆ. ಈ ಎರಡೂ ರಸ್ತೆಗಳನ್ನು ಬೇರೆ ಬೇರೆ ಮಾರ್ಗಗಳಲ್ಲಿ ನಿರ್ಮಿಸಿರುವುದೇ ಈ ರಸ್ತೆಗಳ ವಿಶೇಷ. ಅಷ್ಟೇ ಅಲ್ಲದೇ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಈ ಎರಡೂ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕಷ್ಟೇ ಅವಕಾಶ ಮಾಡಿಕೊಡಲಾಗಿದೆ. ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಈ ಘಾಟ್ ರಸ್ತೆಗಳ ಉದ್ದಕ್ಕೂ ನಾವು ಕಾಣಬಹುದು. ಜತೆಗೆ ಈ ರಸ್ತೆಗಳಲ್ಲಿ ಪ್ರಮಾದಕರ ತಿರುವುಗಳು ಸಹ ಇವೆ.FB_IMG_1461083592150

 

ತಿರುಪತಿಯಿಂದ ತಿರುಮಲಕ್ಕೆ ಈ ಘಾಟ್ ರೋಡ್ ಮೂಲಕ ಪ್ರಯಾಣಿಸಬೇಕೆಂದರೆ ಕನಿಷ್ಟ 30 ನಿಮಿಷಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಹಾಗೆಯೇ ತಿರುಮಲದಿಂದ ತಿರುಪತಿ ಬರುವ ಮಾರ್ಗದ ಪ್ರಯಾಣ 45 ನಿಮಿಷ ಪಡೆಯಬಹುದು. ಈ ಘಾಟ್ ರಸ್ತೆಗಳು ಸಾಮಾನ್ಯವಾದ ರಸ್ತೆಗಳಲ್ಲ, ಕಂಗೊಳಿಸುವ ಹಚ್ಚ ಹಸಿರಿನ ರಸ್ತೆಗಳ ಮಧ್ಯೆ ಇರುವ ಈ ರಸ್ತೆಗಳು ಅಂಸಂಖ್ಯಾತ ತಿರುವುಗಳನ್ನು ಹೊಂದಿರುವುದು ವಿಶೇಷ.

 

ಶೇಷಾಚಲದ ರಮಣೀಯ ಪರ್ವತ ಪ್ರದೇಶದಲ್ಲಿ ನಿರ್ಮಿಸಿರುವ ಈ ರಸ್ತೆಗಳನ್ನು 1944 ಏಪ್ರಿಲ್ 10ರಂದು ಲೋಕಾರ್ಪಣೆ ಮಾಡಲಾಗಿತ್ತು. ಅಂತಹ ದಟ್ಟ ಅರಣ್ಯದ ಬೆಟ್ಟಗಳನ್ನು ಕೊರೆದು ಅಧ್ಭುತ ರಸ್ತೆಗಳನ್ನು ನಿರ್ಮಿಸಿದ ಸರ್. ಎಂ.ವಿಶ್ವೇಶ್ವರಯ್ಯನವರ ಶ್ರಮವನ್ನು ಎಲ್ಲರೂ ಸ್ಮರಿಸಲೇ ಬೇಕು.

ಈ ರಸ್ತೆಗಳನ್ನು ಅಂದಿನ ಮದ್ರಾಸ್ ಗವರ್ನರ್ ಆಗಿದ್ದ ಆರ್ಡೂರ್ ಹೋಪ್ ಅವರು ಉದ್ಘಾಟಿಸದರು. ಆರಂಭದಲ್ಲಿ ಈ ರಸ್ತೆಗಳಲ್ಲಿ ಕೇವಲ ಚಿಕ್ಕ ವಾಹನಗಳು ಮಾತ್ರ ಸಂಚರಿಸುತ್ತಿದ್ದವು. ಈಗ ಬಸ್ ನಂತಹ ಬೃಹತ್ ವಾಹನಗಳು ಸಹ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

FB_IMG_1461083587132

 

ರಸ್ತೆ ನಿರ್ಮಾಣವಾದಾಗಿನಿಂದ ಜನ ಇದೇ ರಸ್ತೆಯನ್ನು ಬಳಸುತ್ತಿದ್ದಾರೆಯೇ ಹೊರತು ಬೇರೆ ರಸ್ತೆಯನ್ನು ನಿರ್ಮಿಸಿಲಾಗಿಲ್ಲ. ಅಂದರೆ ಇನ್ನೊಂದು ರಸ್ತೆ ನಿರ್ಮಿಸುವ ಅಗತ್ಯವಿಲ್ಲದಂತೆ ಉತ್ತಮ ಯೋಜನೆ ರೂಪಿಸಿ ರಸ್ತೆಯನ್ನು ವಿಶ್ವೇಶ್ವರಯ್ಯ ನವರು ಆಗಿನ ಕಾಲಕ್ಕೆ ನಿರ್ಮಿಸಿದ್ದಾರೆ.

ಸಾಮಾನ್ಯ ರಸ್ತೆಗಳನ್ನು ನಿರ್ಮಿಸುವುದಕ್ಕಿಂತ ಬೆಟ್ಟಗಳನ್ನು ಕೊರೆದು ರಸ್ತೆ ನಿರ್ಮಿಸುವುದಕ್ಕೆ ಸಾಕಷ್ಟು ಶ್ರಮ ಹಿಡಿಯುತ್ತದೆ. ಏಕೆಂದರೆ ಇಂತಹ ರಸ್ತೆಗಳಲ್ಲಿ ತಿರುವುಗಳೇ ಹೆಚ್ಚು ಇರುವುದರಿಂದ ಪ್ರಸ್ತುತ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಇಂಜಿನಿಯರ್ ಗಳು ಇದೇ ರಸ್ತೆಗಳಿಗೆ ಮರು ಡಾಂಬರೀಕರಣ ಹಾಗೂ ದುರಸ್ತಿಮಾಡುತ್ತಾ ಬಂದಿದ್ದಾರೆ.

 

 

 

ಪ್ರಸ್ತುತ ಈ ರಸ್ತೆ ನಿರ್ಮಿಸಿ 72 ವರ್ಷಗಳು ಸಂದ ಹಿನ್ನೆಲೆಯಲ್ಲಿ ದೇವಸ್ಥಾನ ಮಂಡಳಿಯ ನ ಇಂಜಿನಿಯರಿಂಗ್ ವಿಭಾಗ ಸಂಭ್ರಮಾಚರಣೆಯಲ್ಲಿ ತೊಡಗಿದೆ. 1944 ರಲ್ಲೇ ನಿರ್ಮಾಣವಾದಂತಹ ಈ ರಸ್ತೆಗಳು ದೇವಸ್ಥಾನದ ಅಧಿಕಾರಿಗಳಲ್ಲಿ ಮತ್ತು ಇಲ್ಲಿಗೆ ಬರುವಂತಹ ಯಾತ್ರಾರ್ಥಿಗಳಲ್ಲಿ ಇಂದಿಗೂ ತನ್ನ ಅಚ್ಚರಿಯನ್ನು ಕಾಪಾಡಿಕೊಂಡಿದೆ.

This slideshow requires JavaScript.Related posts

Leave a Comment