ತಿರುಪತಿಯಲ್ಲಿ ನಡೆಯಲಿದೆ ನಟ ನಟಿಯ ಮದುವೆ.

 

ತಮಿಳು ಧಾರಾವಾಹಿಯ ನಟ ನಟಿಯಾದ ಬಾಬಿ ಸಿಂಹ ಮತ್ತು ರಶ್ಮಿ ಮೆನನ್ ರವರ ವಿವಾಹ ಮಹೋತ್ಸವವು ನಿಗದಿಯಾಗಿದ್ದು ಇದೇ ತಿಂಗಳ 22 ರಂದು ತಿರುಪತಿಯ ದೇವಸ್ಥಾನದಲ್ಲಿ ನೆರವೇರಲಿದೆ. ವಿವಾಹಕ್ಕೆ ಕುಟುಂಬದ ಸನಿಹರನ್ನು ಮಾತ್ರ ಆಮಂತ್ರಿಸಲಾಗಿದ್ದು ನಂತರ ಇದೇ ತಿಂಗಳ 24 ರಂದು ಚೆನ್ನೈ ನಲ್ಲಿ ವಿವಾಹ ಆರತಕ್ಷತೆ ನೆರವೇರಲಿದೆ. ಆರತಕ್ಷತೆಗೆ ಸ್ನೇಹಿತರನ್ನು ಹಾಗೂ ಮತ್ತಿತರನ್ನು ಆಮಂತ್ರಿಸಲಾಗಿದೆ ಎಂದು ಹೇಳಲಾಗಿದೆ.ತಮ್ಮ ಧಾರಾವಾಹಿಯ ಕೆಲಸದಲ್ಲಿ ಬಹಳಷ್ಟು ಬ್ಯುಸಿ ಆಗಿರುವ ಬಾಬಿ ಸಿಂಹ ರವರು ಮದುವೆಯ ನಂತರ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಡು ನಂತರ ಎರಡೇ ವಾರಗಳಲ್ಲಿ ತಮ್ಮ ಚಿತ್ರ್ರೀಕರಣಕ್ಕೆ ಮರಳಲಿದ್ದಾರೆಂದು ಹೇಳಲಾಗಿದೆ.

ತಮಿಳಿನ ಹಲವಾರು ಚಿತ್ರ ಹಾಗೂ tv ತಾರೆಯರ ವಿವಾಹಕ್ಕೆ ಸಾಕ್ಷಿಯಾಗಿರುವ ತಿರುಪತಿಯಲ್ಲಿ ೨೦೧೫ ರಲ್ಲಿ 10 ತಮಿಳು ನಟ ನಟಿಯರು ವಿವಾಹವಾಗಿದ್ದರು.Related posts

Leave a Comment