ಮೇ 10 ರಿಂದ ರಾಮಾನುಜಾಚಾರ್ಯ ಜನ್ಮ ಸಹಸ್ರಮಾನೋತ್ಸವ.

ತಿರುಪತಿ: ದಾರ್ಶನಿಕ ಹಾಗೂ ವೈಷ್ಣವ ಧರ್ಮದ ತತ್ವಜ್ಞಾನಿ ರಾಮಾನುಜಾಚಾರ್ಯರ ತತ್ವ ಸಿದ್ಧಾಂತಗಳನ್ನು ಹರಡುವ ದೃಷ್ಟಿಯಿಂದ ತಿರುಮಲ ತಿರುಪತಿ ದೇವಸ್ಥಾನವು ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವವನ್ನು ಮೇ 10 ರಿಂದ ಆಚರಿಸಲು ನಿರ್ಧರಿಸಿದೆ. ೧೧ನೆ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಯನ್ನು ತಮ್ಮ ವಚನ ಹಾಗೂ ಸಿದ್ಧಾಂತದ ಮೂಲಕವೇ ರಾಮಾನುಜಾಚಾರ್ಯರು ಅನುಷ್ಟಾನಕ್ಕೆ ತಂದಿದ್ದರು ಭಕ್ತಿ ಪಂತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.ದೇವರಲ್ಲಿನ ನಂಬಿಕೆಗೆ ಯಾವುದೇ ಧರ್ಮ, ಘನತೆ ಹಾಗೂ ಜಾತಿಗಳ ತೊದಕಿರುವುದಿಲ್ಲ ವೆಂದು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಕ ಸಾಮಾಜಿಕ ಸುಧಾರಣೆಯನ್ನು ಸಾಕಾರಗೊಳಿಸಿದ ಇವರು ೧೨೦ ವರ್ಷಗಳ ಕಾಲ ಬದುಕಿ ತಮ್ಮ ಕೊನೆಯುಸಿರಿನವರೆಗೆ ಸಮಾನತೆಗಾಗಿ ಶ್ರಮಿಸಿದರು. ಹಲವಾರು ದೇವಸ್ಥಾನಗಳಿಗೆ ಯಾತ್ರೆ ನಡೆಸುತ್ತ ಅಸ್ಪ್ರುಷ್ಯತೆಯನ್ನು ಹೋಗಲಾಡಿಸುವಲ್ಲಿಯೂ ಇವರ ಪಾತ್ರ ಬಹಳ ಪ್ರಮುಖವಾಗಿದೆ.

ಈ ಹಿನ್ನಲೆಯಲ್ಲಿ, ದೇಶದ ಉದ್ದಗಲಕ್ಕೆ ಇರುವ ಒಟ್ಟು ೧೦೬ ತಿರುಪತಿ ದೇವ ಮಂದಿರ ಗಳಲ್ಲಿ ಇವರ ಜನ್ಮ ಸಹ್ಸ್ರಮಾನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಮತ್ತು ರಾಮಾನುಜಾಚಾರ್ಯರ ಜೀವನದ ಬಗೆಗಿನ ಪುಸ್ತಕಗಳನ್ನು ಪ್ರಕಟಿಸಲು ಹಾಗೂ ಅವರ ಬಗೆಗೆ ಬರೆಯಲಾಗಿರುವ ೨೮ ಹಳೆಯ ಪುಸ್ತಕಗಳನ್ನು ಮರು ಮುದ್ರಿಸಲು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.

 Related posts

Leave a Comment